ತುಮಕೂರು ಹೊಸವರ್ಷದ ಶುಭಾಷಯಗಳನ್ನು ಜಿಲ್ಲಾ ಪೊಲೀಸ್ ವತಿಯಿಂದ ಕೋರಿ. ಹೊಸ ವರ್ಷಾಚರಣೆ ಸಂಧರ್ಭದಲ್ಲಿ ಸಾರ್ವಜನಿಕರ ಸುರಕ್ಷತೆ, ಅನುಕೂಲತೆ ಮತ್ತು ಹಿತದೃಷ್ಠಿಯಿಂದ ಸಾರ್ವಜನಿಕರಲ್ಲಿ ಈ ಸಂಧರ್ಭವನ್ನು ಸಂತೋಷದಿAದ ಮತ್ತು ಸುರಕ್ಷಿತವಾಗಿ ಆಚರಿಸಲು ತಿಳಿಸಲಾಗಿದೆ.
ರಸ್ತೆಯಲ್ಲಿ ಮೋಟಾರ್ ಸೈಕಲ್ನ್ನು ಮತ್ತು ಕಾರನ್ನು ಚಾಲನೆ ಮಾಡುವವರು, ಇತರೆ ಸಾರ್ವಜನಿಕರಿಗೆ ಅನಾನುಕೂಲವಾಗುವಂತೆ ಅಪಾಯಕಾರಿಯಾಗಿ ಮತ್ತು ನಿಷ್ಕಾಳಜಿತನದಿಂದ ವಾಹನವನ್ನು ಚಾಲನೆ ಮಾಡದಿರುವುದು. ವೀಲಿಂಗ್ ಮತ್ತು ಡ್ರಾಗ್ ರೇಸಿಂಗ್ ಮಾಡುವವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು.
ವರ್ಷಾಚರಣೆ ಸಂದರ್ಭದಲ್ಲಿ ಇತರೆ ಸಾರ್ವಜನಿಕರಿಗೆ ವಿಶೇಷವಾಗಿ ಮಹಿಳೆಯರಿಗೆ ಕೆಣಕುವುದು ಮಾಡಬಾರದು ಮತ್ತು ಇತರರೊಂದಿಗೆ ಸಭ್ಯವಾಗಿ ನಾಗರೀಕತೆಯಿಂದ ವರ್ತಿಸಬೇಕು. ಅನಾವಶ್ಯಕವಾಗಿ ಇತರೆ ಗುಂಪುಗಳೊAದಿಗೆ ಜಗಳಕ್ಕಿಳಿದು ಗಲಾಟೆ ಮಾಡಿಕೊಳ್ಳಬಾರದು.
ನಾಮದ ಚಿಲುಮೆ, ದೇವರಾಯದುರ್ಗ ಹಾಗೂ ಬಸದಿಬೆಟ್ಟ ಸ್ಥಳಗಳು ಸಂರಕ್ಷಿತ ಅವೃತ ಅರಣ್ಯ ಪ್ರದೇಶ ಮತ್ತು ಅಪಘಾತ ವಲಯಗಳಾಗಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಸಾರ್ವಜನಿಕರ ಹಿತ ದೃಷ್ಠಿಯಿಂದ ಈ ಪ್ರದೇಶಗಳ ವ್ಯಾಪ್ತಿಯಲ್ಲಿ ದಿನಾಂಕ:೩೧-೧೨-೨೦೨೫ ರ ಸಂಜೆ ೬-೦೦ ಗಂಟೆಯಿAದ ದಿ : ೦೧-೦೧-೨೦೨೬ ರ ಬೆಳಿಗ್ಗೆ ೦೮-೦೦ ಗಂಟೆವರೆಗೆ ಹಾಗೂ ದಿನಾಂಕ : ೦೧-೦೧-೨೦೨೬ ಸಂಜೆ ೬-೦೦ ಗಂಟೆಯಿAದ ದಿನಾಂಕ:೦೨-೦೧-೨೦೨೬ ಬೆಳಿಗ್ಗೆ ೮-೦೦ ಗಂಟೆವರೆಗೆ ಪ್ರವಾಸಿಗರು/ಸಾರ್ವಜನಿಕರು ಮತ್ತು ವಾಹನಗಳ ಪ್ರವೇಶವನ್ನು ನಿರ್ಭಂಧಿಸಲು ಕಲಂ ೧೬೩ ಬಿ.ಎನ್.ಎಸ್.ಎಸ್ ರೀತ್ಯಾ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರ ಪ್ರವೇಶವನ್ನು ನಿರ್ಭಂಧಿಸಲು ಪಿಕೇಟಿಂಗ್ ಪಾಯಿಂಟ್ಗಳನ್ನು ಹಾಕಲಾಗಿದೆ.
ವಿದ್ಯಾಸಂಸ್ಥೆಗಳ ಮುಖ್ಯಸ್ಥರು ತಮ್ಮ ಸಂಸ್ಥೆಯ ಆವರಣಗಳು ಮತ್ತು ಹಾಸ್ಟಲ್ಗಳಲ್ಲಿ ಶಿಸ್ತಿನಚೌಕಟ್ಟು ಮೀರದೆ ಹೊಸ ವರ್ಷಾಚರಣೆಯನ್ನು ಅಚರಿಸಲು ವಿದ್ಯಾರ್ಥಿಗಳಿಗೆ ತಿಳಿಸಲು ಕೋರಲಾಗಿದೆ.
ತುಮಕೂರು ಜಿಲ್ಲಾ ಪೊಲೀಸ್ ರವರು ತುಮಕೂರು ಜಿಲ್ಲಾ ನಾಗರೀಕರಿಗೆ ಹೊಸವರ್ಷದ ಹಾರ್ಥಿಕ ಶುಭಾಶಯಗಳನ್ನು ಕೋರುತ್ತಾ ಹೊಸ ವರ್ಷವು ಯಾವುದೇ ಅಹಿತಕರ ಘಟನೆಗಳಿಂದ ಮುಕ್ತವಾಗಿರುತ್ತ್ತೆದೆಂದು ಹಾಗೂ ಎಲ್ಲಾ ಮುಂಜಾಗೃತ ಕ್ರಮವನ್ನು ಅನುಸರಿಸಿ ಹೊಸ ವರ್ಷ ಆಚರಿಸಲೆಂದು ಹಾರೈಸುತ್ತೇವೆ.
