ಒಂಟಿ ಮಹಿಳೆಯರೇ ಟಾರ್ಗೆಟ್
ಒಂಟಿ ಮಹಿಳೆಯರಿಗೆ ಬೈಕ್ನಲ್ಲಿ ಡ್ರಾಪ್ ಕೊಡುವುದಾಗಿ ನಂಬಿಸಿ ಕರೆದುಕೊಂಡು ಹೋಗಿ ಚಿನ್ನಾಭರಣಗಳನ್ನು
ಸುಲಿಗೆ ಮಾಡುತ್ತಿದ್ದ ಕುಖ್ಯಾತ ಅಂತರಾಜ್ಯ ಆರೋಪಿ ಬಂಧನ, ೩.೨೦ ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಬೈಕ್ ವಶ
ತುಮಕೂರು-ಪಾವಗಡ ತಾ ಸೂಲನಾಯಕನಹಳ್ಳಿ ಗೇಟ್ನಿಂದ ಗ್ರಾಮಕ್ಕೆ ನಡೆದುಕೊಂಡು ಹೋಗುತ್ತಿದ್ದ ದುರ್ಗಮ್ಮ ಮತ್ತು ಪಳವಳ್ಳಿ ಕಟ್ಟೆಯ ಮೇಲೆ ಊರಿಗೆ ಹೋಗಲು ಬಸ್ಸಿಗಾಗಿ ಕಾಯುತ್ತಿದ್ದ ದೊಡ್ಡಹಳ್ಳಿಯ ಗುಂಡಮ್ಮ ರವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಬೈಕಿನಲ್ಲಿ ಡ್ರಾಪ್ ಕೊಡುವುದಾಗಿ ನಂಬಿಸಿ ದುರ್ಗಮ್ಮ, ಗುಂಡಮ್ಮ ರವರನ್ನು ಕೂರಿಸಿಕೊಂಡು ನಂತರ ರಸ್ತೆ ಪಕ್ಕದ ಜಮೀನಿನೊಳಗೆ ಬೈಕನ್ನು ಓಡಿಸಿಕೊಂಡು ಹೋಗಿ, ಮಹಿಳೆಯರಿಗೆ ಚಿನ್ನದ ವಡವೆಗಳನ್ನು ಬಿಚ್ಚಿ ಕೊಡುವಂತೆ ಹೆದರಿಸಿ, ಮಹಿಳೆಯರು ನಿರಾಕರಿಸಿದಾಗ ಕಿವಿಯಲ್ಲಿನ ವಾಲೆಗಳನ್ನು ಕಿತ್ತು ಗಾಯಪಡಿಸಿ ಮತ್ತು ಗುಂಡಮ್ಮರವರ ಕೊರಳಲ್ಲಿನ ಮಾಂಗಲ್ಯ ಸರದಲ್ಲಿ ಅರ್ಧ ಸರವನ್ನು ಕಿತ್ತುಕೊಂಡು ಹೋಗಿದ್ದು ಈ ಬಗ್ಗೆ ದುರ್ಗಮ್ಮ ಮತ್ತು ಗುಂಡಮ್ಮ ರವರುಗಳು ನೀಡಿದ ದೂರಿನ ಮೇರೆಗೆ ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ.
ಆರೋಪಿ ಪತ್ತೆಕಾರ್ಯಕ್ಕೆ ತಂಡವನ್ನು ನೇಮಕ ಮಾಡಿದ್ದ ಮಧುಗಿರಿ ಉಪವಿಭಾಗದ ಡಿ.ವೈ.ಎಸ್.ಪಿ. ಮಂಜುನಾಥ್, ಪಾವಗಡ ಗ್ರಾಮಾಂತರ ವೃತ್ತದ ಸಿಪಿಐ ಗಿರೀಶ್, ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಶೌಖತ್ ಲಾಲ ಕುರಿ ಮತ್ತು ಸದ್ದಾಂಸಾಹೇಬ್ರವರುಗಳು ಸಿ.ಸಿ.ಟಿ.ವಿ. ಪೋಟೇಜ್ ಆಧರಿಸಿ ಪಾವಗಡ ಟೌನ್ ಕಲ್ಯಾಣದುರ್ಗ ರಸ್ತೆ ಪಕ್ಕದ ನಲದಿಗಲಬಂಡೆ ಕ್ರಾಸ್ ಬಳಿಯಿರುವ ಬಸ್ ಶೆಲ್ಟರ್ ಬಳಿ ನಿಂತಿದ್ದ ಆರೋಪಿಯಾದ ಬಂಡಿ ಸುಬ್ರಮಣ್ಯಂ , ೩೬ ವರ್ಷ, ಗಾರೆ ಕೆಲಸ ಸೋಮಲದೊಡ್ಡಿ ಬಂಧಿಸಿ ಆಂದ್ರಪ್ರದೇಶದ ಕಲ್ಯಾಣದುರ್ಗ ಮುತ್ತೂಟ್ ಪೈನಾನ್ಸ್ನಲ್ಲಿ ಗಿರಿವಿಯಿಟ್ಟಿದ್ದ ೨೨ ಗ್ರಾಂ ತೂಕದ ಎರಡು ಜೊತೆ ಚಿನ್ನದ ವಾಲೆಗಳು ಮತ್ತು ಅರ್ಧ ಸರವನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿರುವ ಬೈಕ್ನ್ನು ವಶಪಡಿಸಿಕೊಂಡು ತನಿಖಾ ಕಾಲದಲ್ಲಿ ಆರೋಪಿಯು ಕೃತ್ಯಕ್ಕೆ ಉಪಯೋಗಿಸಿರುವ ಊeಡಿo Pಚಿssioಟಿ + ಬೈಕ್ನ್ನು ದೊಡ್ಡಬಳ್ಳಾಪುರದಲ್ಲಿ ಕಳ್ಳತನ ಮಾಡಿರುವುದಾಗಿ ಮತ್ತು ಸದರಿ ಬೈಕಿಗೆ ನಕಲಿ ನಂಬರ್ ಬರೆಸಿ ಕೃತ್ಯದ ವೇಳೆಯಲ್ಲಿ ಉಪಯೋಗಿಸಿರುವುದು ಹಾಗೂ ಆರೋಪಿಯು ಪಾವಗಡ ಠಾಣಾ ವ್ಯಾಪ್ತಿಯ ವೀರಮ್ಮನಹಳ್ಳಿ ಗೇಟ್ ಬಳಿ ಮಹಿಳೆಯೊಬ್ಬರ ಕೊರಳಿಂದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿ ಕಲ್ಯಾಣದುರ್ಗ ಮುತ್ತೂಟ್ ಪೈನಾನ್ಸ್ನಲ್ಲಿ ಗಿರಿವಿಯಿಟ್ಟಿರುವುದು ತಿಳಿದು ಬಂದಿರುತ್ತೆ.
ತುಮಕೂರು ಜಿಲ್ಲಾ ಎಸ್.ಪಿ. ಅಶೋಕ್ ಕೆ.ವಿ. ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಪುರುಷೋತ್ತಮ್ ಹಾಗೂ ಗೋಪಾಲ್ ರವರು ಹಾಗೂ ಮಧುಗಿರಿ ಉಪವಿಭಾಗದ ಡಿ.ವೈ.ಎಸ್.ಪಿ. ಮಂಜುನಾಥ್ರವರ ಮಾರ್ಗದರ್ಶನದಲ್ಲಿ ಪಾವಗಡ ಗ್ರಾಮಾಂತರ ವೃತ್ತದ ಸಿಪಿಐ ಗಿರೀಶ್, ಪಿ.ಎಸ್.ಐ.ಗಳಾದ ರಾಮಚಂದ್ರ, ವಿಜಯ್ಕುಮಾರ್, ರಾಜೇಂದ್ರ ಹಾಗೂ ಅಪರಾಧ ಸಿಬ್ಬಂದಿಗಳಾದ ಎ.ಎಸ್.ಐ. ಗೋವಿಂದರಾಜು, ಸೋಮಶೇಖರ್, ಶ್ರೀಕಾಂತ್, ಸಂತೋಷ್ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ನರಸಿಂಹರಾಜು, ಜಗದೀಶ್ ರವರುಗಳು ಆರೋಪಿಯನ್ನು ಪತ್ತೆಮಾಡಿ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
