ಏ.೨೩ಕ್ಕೆ ಸಿದ್ಧಾರ್ಥ ಮಾಧ್ಯಮ ಪ್ರಶಸ್ತಿ ಪ್ರದಾನ
೩೫ಪೌರ ಕಾರ್ಮಿಕರಿಗೆ ಸಂಭ್ರಮದ ಆಹ್ವಾನ
ತುಮಕೂರು: ನಗರದ ಎಸ್ ಎಸ್ ಐಟಿ ಆವರಣದಲ್ಲಿರುವ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಿAzವಿದೇ ಏಪ್ರಿಲ್ ೨೩ ಮತ್ತು ೨೪ರಂದು ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಮಾಧ್ಯಮ ಹಬ್ಬ ಸಂಭ್ರಮ- ೨೦೨೬ರಲ್ಲಿ ಪ್ರಶಸ್ತಿ ಮತ್ತು ಗೌರವ ಸನ್ಮಾನಕ್ಕೆ ಆಯ್ಕೆಯಾಗಿರುವ ಪೌರಕಾರ್ಮಿಕರನ್ನು ಭಾನುವಾರ ಅಧಿಕೃತವಾಗಿ ಆಹ್ವಾನಿಸಲಾಯಿತು.
ನಗರದ ಪ್ರೆಸ್ಕ್ಲಬ್ ಆವರಣದಲ್ಲಿ ಸಮಾವೇಶಗೊಂಡ ಪೌರಕಾರ್ಮಿಕರಿಗೆ, ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಬಿ.ಟಿ.ಮುದ್ದೇಶ್ ಅವರು ಹೊಗುಚ್ಚ ಮತ್ತು ಪತ್ರ ನೀಡಿ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
ಸಂಭ್ರಮವನ್ನು ಪೌರ ಕಾರ್ಮಿಕರಿಗೆ ಸಮರ್ಪಣೆ ಮಾಡಿದ್ದು, ಉದ್ಘಾಟನಾ ಕಾರ್ಯಕ್ರಮದಲ್ಲಿ ೩೫ ಮಂದಿ ಮಹಿಳಾ ಪೌರ ಕಾರ್ಮಿಕರಿಗೆ ಸಿದ್ಧಾರ್ಥ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.
ಎರಡು ದಿನದ ಮಾಧ್ಯಮ ಹಬ್ಬದಲ್ಲಿ ಹಲವು ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಪೌರ ಕಾರ್ಮಿಕರನ್ನು ಆಹ್ವಾನಿಸಿ, ಸನ್ಮಾನಿಸುವ ಮೂಲಕ ಅವರ ನಿಸ್ವಾರ್ಥ ಸೇವೆ ಸ್ಮರಿಸಲಾಗುತ್ತದೆ. ಕಾಯಕ ಗುರುತಿಸಿ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಬಿ.ಟಿ.ಮುದ್ದೇಶ್ ಹೇಳಿದರು.
‘ಇದುವರೆಗೆ ಯಾರೂ ನಮ್ಮನ್ನು ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಕ್ಕೆ ಕರೆದಿರಲಿಲ್ಲ. ಮೊದಲ ಬಾರಿಗೆ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಿAದ ನಮ್ಮ ಕೆಲಸಕ್ಕೆ ಮನ್ನಣೆ ನೀಡಲಾಗಿದೆ. ಇದನ್ನು ಎಂದಿಗೂ ಮರೆಯುವುದಿಲ್ಲ’ ಎಂದು ಪೌರ ಕಾರ್ಮಿಕರು ಭಾವುಕರಾದರು.
ಲೇಖಕಿ ಬಾ.ಮ.ರಮಾಕುಮಾರಿ, ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಎನ್.ಜಿ.ನವೀನ್, ರಾಘವ, ಹಳೆ ವಿದ್ಯಾರ್ಥಿಗಳ ಒಕ್ಕೂಟ ಮೈಲಾರಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
