ತುಮಕೂರು -ಪೊಲೀಸ್ ಇಲಾಖೆಯ ಶ್ಲಾಘನೀಯ ಸೇವೆಗಾಗಿ ‘2025 ನೇ ಸಾಲಿನ ಮಾನ್ಯ ಮುಖ್ಯಮಂತ್ರಿಗಳ ಪದಕ’ಕ್ಕೆ ಭಾಜನರಾದ ತುಮಕೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಿಪಟೂರು ಪೊಲೀಸ್ ಉಪಾದೀಕ್ಷಕರಾದ ಶ್ರೀ ಎಂ.ಹೆಚ್. ಉಮೇಶ್ ಮತ್ತು ಜಿಲ್ಲಾ ಸಶಸ್ತ್ರ ಪಡೆಯ ( ಡಿ.ಎ.ಆರ್) ಹೆಡ್ ಕಾನ್ಸ್ ಟೆಬಲ್ ಶ್ರೀ ಬಿ.ಎನ್ ಪ್ರಸನ್ನಕುಮಾರ್ ರವರುಗಳು ಇಂದು ಪೊಲೀಸ್ ದ್ಜಜ ದಿನಾಚರಣೆಯ ಸಂದರ್ಭದ ಸಮಾರಂಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಂದ ಪದಕ ಪಡೆದಿರುತ್ತಾರೆ.
