ತುಮಕೂರು ಜಿಲ್ಲಾ ಪೊಲೀಸ್
ಕೃತ್ಯ ನಡೆದ ೧೨ ಗಂಟೆಯ ಒಳಗೆ ಅಂತರ್ ರಾಜ್ಯ ಸುಲಿಗೆಕೋರರ ಬಂಧನ
೨೬ ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳ ವಶ
ದಿನಾಂಕ:-೨೨-೦೨-೨೦೨೬ ರಂದು ಮಧ್ಯಾಹ್ನ ಸುಮಾರು ೦೨-೦೦ ಗಂಟೆಯ ಸಮಯದಲ್ಲಿ ಶಿರಾ ತಾಲ್ಲೂಕ್, ಕಳ್ಳಂಬೆಳ್ಳ ಪೊಲೀಸ್ ಠಾಣಾ ಸರಹದ್ದು ಬೆಂಚೆ ಗೇಟ್ನಲ್ಲಿರುವ ಶ್ರೀ ಜಗತಾಂಬ ಜ್ಯೂಯರ್ಸ್ ಶಾಪ್ಗೆ ೦೪ ಜನರು ನುಗ್ಗಿ ವ್ಯಾಪಾರ ಮಾಡುತ್ತಿದ್ದ ದಿನೇಶ್ ಮತ್ತು ನಾತಿದೇವಿ ರವರುಗಳ ಕಣ್ಣಿಗೆ ಖಾರದಪುಡಿಯನ್ನು ಎರಚಿ ಬಾಯಿಯನ್ನು ಮುಚ್ಚಿ, ಅಂಗಡಿಯ ರೋಲಿಂಗ್ ಷಟರ್ ಎಳೆದು ಅಂಗಡಿಯಲ್ಲಿದ್ದ ಚಿನ್ನ ಬೆಳ್ಳಿ ವಡವೆಗಳನ್ನು ಕಳ್ಳತನ ಮಾಡಿಕೊಂಡು, ಬುಲೇರೊ ವಾಹನದಲ್ಲಿ ಹೋಗಿರುತ್ತಾರೆ. ಈ ಬಗ್ಗೆ ದಿನೇಶ್ ಬಿನ್ ತೋಲಾರಾಂ ೨೨ ವರ್ಷ ಶ್ರೀ ಜಗತಾಂಭ ಜ್ಯೂಯರ್ಸ್, ಬೆಂಚೆ ಗೇಟ್ ರವರು ನೀಡಿದ ದೂರಿನ ಮೇರೆಗೆ ಕಳ್ಳಂಬೆಳ್ಳ ಪೊಲೀಸ್ ಠಾಣೆ ಮೊ.ನಂ. ೨೭/೨೦೨೬ ಕಲಂ ೩೦೯(೬) ಬಿ.ಎನ್.ಎಸ್ ರೀತ್ಯಾ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಈ ಪ್ರಕರಣದ ಆರೋಪಿಯನ್ನು ಪತ್ತೆ ಮಾಡಲು ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ ವಿ, ಐ.ಪಿ.ಎಸ್. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಪುರುಷೋತ್ತಮ್ ಕೆ.ಎಸ್.ಪಿ.ಎಸ್ ರವರು ಹಾಗೂ ಗೋಪಾಲ್ ಕೆ.ಎಸ್.ಪಿ.ಎಸ್ ರವರು ಪ್ರೋಬೆಷನರಿ ಐಪಿಎಸ್ ಅಧಿಕಾರಿಯವರಾದ ರಾನುಗುಪ್ತ ರವರ ಮಾರ್ಗದರ್ಶನದಲ್ಲಿ ಸದರಿ ತಂಡವು ಕ್ಷಿಪ್ರ ಕಾರ್ಯಚರಣೆ ನಡೆಸಿ ಮಾಹಿತಿ ಬಂದತಕ್ಷಣ ನಿಸ್ತಂತು ಮೂಲಕ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಿಗೆ ಸಂದೇಶ ರವಾನಿಸಿ ನಾಕಬಂಧಿ ಹಾಕಿದ ಪರಿಣಾಮ ಆರ್.ಜೆ-೧೬-ಯುಎ-೭೩೯೮ ನೇ ಬುಲೇರೋ ವಾಹನದಲ್ಲಿ ಪರಾರಿಯಾಗುತ್ತಿದ್ದ ಸುಲಿಗೆ ಕೋರರನ್ನು ಶಿರಾ ಗ್ರಾಮಾಂತರ ವೃತ್ತದ ಸಿಪಿಐ ರವರು ಬೆನ್ನತ್ತಿ, ಸುಲಿಗೆಕೋರರುಗಳು ತಾವರೆಕೆರೆ ಬಳಿ ಹಾಕಿದ್ದ ಬ್ಯಾರಿಕೇಡ್ ನೋಡಿ ಬುಲೇರೊ ವಾಹನವನ್ನು ವಾಪಸ್ ತಿರುಗಿಸಿಕೊಂಡು, ಶಿರಾ ಕಡೆಯಿಂದ ಬರುತ್ತಿದ್ದ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ (ಅಪರಾಧ) ಶ್ರೀ ಸಿ.ಗೋಪಾಲ್ರವರು, ಶಿರಾ ಉಪ-ವಿಭಾಗದ ಉಪಾಧೀಕ್ಷಕರಾದ ಬಿ.ಕೆ.ಶೇಖರ್ ರವರು ಮತ್ತು ಸಿಪಿಐ ಶಿರಾ ಗ್ರಾಮಾಂತರ ವೃತ್ತ ಹಾಗೂ ಶಿರಾ ಠಾಣೆಯ ಪಿ.ಐ ಪ್ರವೀಣ್ ಕುಮಾರ್ ರವರುಗಳು ಸಹ ಚೇಸ್ ಮಾಡಿದ್ದು ಬೀಟ್ ಸಿಬ್ಬಂದಿಗಳ ಸಹಾಯದಿಂದ ಸುತ್ತಮುತ್ತಲಿನ ಗ್ರಾಮಸ್ಥರುಗಳನ್ನು ಎಚ್ಚರಿಸಿದ್ದು , ಆರೋಪಿಗಳು ಬುಲೇರೊ ವಾಹನದಲ್ಲಿ ಭುವನಹಳ್ಳಿ, ಸೋರೆಕುಂಟೆ, ಮೇಕೆರಹಳ್ಳಿ, ಕೆಂಚಪ್ಪನಹಳ್ಳಿ, ತಿತ್ತಾಗಾನಹಳ್ಳಿ, ನಿಂಬೆಮರದಹಳ್ಳಿ ಗ್ರಾಮಸ್ಥರ ನೆರವಿನಿಂದ ರಸ್ತೆಗಳನ್ನು ಬ್ಲಾಕ್ ಮಾಡಿದ ಪರಿಣಾಮ ಆರೋಪಿಗಳು ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಮುದಿಗೆರೆ ಕಾವಲ್, ಮೇಕೆರಹಳ್ಳಿ ಅರಣ್ಯ ಪ್ರದೇಶಕ್ಕೆ ನುಗ್ಗಿದ ಪರಿಣಾಮ ಪತ್ತೆತಂಡದಲ್ಲಿದ್ದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರುಗಳು ಇಡೀ ರಾತ್ರಿ ಕೂಂಬಿAಗ್ ಕಾರ್ಯಚರಣೆ ನಡೆಸಿದ್ದರಿಂದ ಕೃತ್ಯನಡೆಸಿದ ೦೪ ಜನ ಆರೋಪಿತರುಗಳನ್ನು, ಕೃತ್ಯಕ್ಕೆ ಉಪಯೋಗಿಸಿದ ಆರ್.ಜೆ-೧೬-ಯುಎ-೭೩೯೮ ನೇ ಬುಲೇರೋ ವಾಹನವನ್ನು ಸುಲಿಗೆ ಮಾಡಿದ್ದ ಚಿನ್ನ ಬೆಳ್ಳಿ ಆಭರಣಗಳು ಮತ್ತು ಚಿನ್ನ ಲೇಪಿತ ಆಭರಣಗಳನ್ನು ಯಥಾವತ್ತಾಗಿ (Iಟಿಣಚಿಛಿಣ-ಠಿಡಿoಠಿeಡಿಣಥಿ) ವಶಪಡಿಸಿಕೊಂಡಿರುತ್ತದೆ.
ಆರೋಪಿ ಪತ್ತೆ ತಂಡದಲ್ಲಿ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ (ಅಪರಾಧ) ಸಿ.ಗೋಪಾಲ್ರವರು, ಪ್ರೋಬೆಷನರಿ ಐಪಿಎಸ್ ಅಧಿಕಾರಿಯವರಾದ ಶ್ರೀ ರಾನುಗುಪ್ತ ರವರು, ಶಿರಾ ಉಪವಿಭಾಗದ ಉಪಾಧೀಕ್ಷಕರಾದ ಬಿ.ಕೆ.ಶೇಖರ್ ರವರು, ಶಿರಾ ಗ್ರಾಮಾಂತರ ವೃತ್ತದ ಸಿಪಿಐ, ಡಿ.ಜಿ.ಶ್ರೀನಿವಾಸರವರು, ಶಿರಾ ಪೊಲೀಸ್ ಠಾಣೆಯ ಪಿ.ಐ. ಪ್ರವಿಣ್ ಕುಮಾರ್ರವರು, ಗುಬ್ಬಿ ವೃತ್ತದ ರಾಘವೇಂದ್ರ ರವರು ಪಿಎಸ್ಐ ರವರಗಳಾದ ಕಳ್ಳಂಬೆಳ್ಳ ಠಾಣೆಯ ಭೈರೇಗೌಡ, ಚೇಳೂರು ಠಾಣೆಯ ಮಾಳಪ್ಪ, ಶಿರಾ ಪೊಲೀಸ್ ಠಾಣೆಯ ರೇಣುಕಾ ಯಾದವ್, ಎ.ಎಸ್.ಐ ನರಸಿಂಹಯ್ಯ, ನರಸಿಂಹಮೂರ್ತಿ, ಹುಚ್ಚೀರಣ್ಣ, ರವರುಗಳು ಮತ್ತು ಸಿಬ್ಬಂದಿಗಳಾದ ಸಿ.ಪಿ.ಕಿರಣ್ಕುಮಾರ್, ಪ್ರಸಾದ್ಬಿ.ಕೆ, ರೇಣುಕ, ಷಫೀವುಲ್ಲಾ, ಕರಿಯಪ್ಪ, ರಾಜಾಸಾಬ್ ಹರೀಶ್, ನಟರಾಜು, ಶ್ರೀನಿವಾಸ, ಮಹೇಶ್, ಅಮೀರ್, ಕೃಷ್ಣಮೂರ್ತಿ, ನಾಗರಾಜು, ನವೀನ್ಕುಮಾರ್, ಜಗದೀಶ್, ನಾಗಭೂಷಣ್ ಮಧು, ಮಂಜುನಾಥ, ಬಾಬಗೌಡೇನವರ್, ದರ್ಶನ್ ದೇಸಾಯಿ, ಮಂಜುನಾಥ ಹೆರಕಲ್, ದೇವರಾಜು, ಬಸವರಾಜು, ಭರತ್ಕುಮಾರ್, ರಂಗರಾಜು, ಬಸವರಾಜು, ಶ್ರೀನಿವಾಸ್ ಬಿ.ಆರ್, ಭಕ್ತಕುಮಾರ್, ಬಂಗಾರಪ್ಪ ಪಾಟೀಲ್, ಹರೀಶ್ಕುಮಾರ್, ಹನುಮಂತರಾಜು, ಮಲ್ಲಿಕಾರ್ಜುನ, ಬಸವರಾಜು, ಕೆಂಚರಾಯಪ್ಪ, ಮಂಜುನಾಥ, ಭೂತರಾಜು ಮತ್ತು ಚಾಲಕರುಗಳಾದ ಮಂಜುನಾಥ, ರಘುಕುಮಾರ್ ರಜಿತ್ ಕುಮಾರ್, ಮುಬಾರಕ್, ತಿಪ್ಪೇಸ್ವಾಮಿ, ಸಂತೋಷ್, ನಾಗರಾಜು, ತಾವರೆಕೆರೆ ಪೊಲೀಸ್ ಠಾಣೆಯ ಸಿಬ್ಬಂದಿಗಳು ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ನರಸಿಂಹರಾಜು, ಜಗದೀಶ್ ರವರುಗಳು ಆರೋಪಿಗಳನ್ನು ಪತ್ತೆ ಮಾಡಿ ಕಳ್ಳತನವಾದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಶ್ರಮಿಸಿರುತ್ತಾರೆ.
ಆರೋಪಿಗಳನ್ನು ಪತ್ತೆಹಚ್ಚಿ ಚಿನ್ನ & ಬೆಳ್ಳಿ ವಡವೆಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ವಿಶೇಷ ತಂಡವನ್ನು ಮಾನ್ಯ ಕೇಂದ್ರವಲಯದ ಐಜಿಪಿ ಸಾಹೇಬರವರು ಮತ್ತು ಮಾನ್ಯ ಪೊಲೀಸ್ ಅಧೀಕ್ಷಕರವರು ಶ್ಲಾಘನೆ ಮಾಡಿರುತ್ತಾರೆ.
ಚಿನ್ನ ಮತ್ತು ಬೆಳ್ಳಿಯ ಬೆಲೆ ಮಿತಿಮೀರಿ ಏರಿಕೆಯಾಗಿರುವುದರಿಂದ ಚಿನ್ನ ಬೆಳ್ಳಿ ವ್ಯಾಪಾರ ಮಾಡುವ ಚಿನ್ನದ ವ್ಯಾಪಾರಿಗಳು ಎಚ್ಚರಿಕೆಯಿಂದ ಅಗತ್ಯ ಸೆಕ್ಯೂರಿಟಿ ವ್ಯವಸ್ಥೆಯನ್ನು ಮಾಡಿಕೊಂಡು ವ್ಯಾಪಾರ ಮಾಡುವಂತೆ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರುಗಳು ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಸೂಚನೆಗಳನ್ನು ನೀಡಿರುತ್ತಾರೆ.
ಆರೋಪಿಯಿಂದ ವಶಪಡಿಸಿಕೊಂಡ ಮಾಲುಗಳ ವಿವರ
೧] ೧೦೦ ಗ್ರಾಂ ತೂಕದ ಚಿನ್ನದ ವಡವೆಗಳು ಬೆಲೆ ೧೪,೦೦,೦೦೦=೦೦ ರೂ.ಗಳು
೨] ೧ ಳಿ ಕೆ.ಜಿ ಬೆಳ್ಳಿ ವಡವೆಗಳು ಬೆಲೆ ೩,೨೫,೦೦೦=೦೦ ರೂ.ಗಳು
೩] ಚಿನ್ನ ಲೇಪಿತ ಬೆಳ್ಳಿ ವಡವೆಗಳು ಬೆಲೆ ೨,೭೫,೦೦೦=೦೦ ರೂ.ಗಳು
೨] ಆರ್.ಜೆ-೧೬-ಯುಎ-೭೩೯೮ ನೇ ಬುಲೇರೋ ವಾಹನ. ಬೆಲೆ ಸುಮಾರು ೫,೦೦,೦೦೦=೦೦ ರೂ.ಗಳು
೩] ೦೧ ಓಪೋ ಮತ್ತು ೦೧ ಐಪೋನ್ ಕಂಪನಿಯ ಮೊಬೈಲ್ ಪೋನ್ಗಳು ಬೆಲೆ ಸುಮಾರು ೧,೦೦,೦೦೦=೦೦
ಒಟ್ಟು ಮೌಲ್ಯ ೨೬,೦೦,೦೦೦=೦೦
ಬಂಧಿತ ಆರೋಪಿಗಳ ಹೆಸರು ಮತ್ತು ವಿಳಾಸ
೧ ಅರವಿಂದ್ ಕುಮಾರ್ S/ಔ ಬವೇಶ್ಜಿ, ೨೮ ವರ್ಷ, ಪಕಸದ್ ಗ್ರಾಮ, ಶಿವಿ ತಾಲ್ಲೂಕು, ಬಾರ್ಮರ್ ಜಿಲ್ಲೆ, ರಾಜಸ್ಥಾನ ರಾಜ್ಯ
೨ ಡುಂಗರ್ ಸಿಂಗ್ s/o ಕೋಜ್ಸಿಂಗ್, ೨೪ ವರ್ಷ, ಧನ್ಹಾ ಗ್ರಾಮ, ಭಿನಮಲ್ ತಾಲೂಕು, ಜಲೋರ್ ಜಿಲ್ಲೆ, ರಾಜಸ್ಥಾನ ರಾಜ್ಯ
೩ ಮಹೇಂದರ್ ಸಿಂಗ್ S/ಔ ಭವಾನಿ ಸಿಂಗ್, ೩೨ ವರ್ಷ, ನೂನ್ ವಿಲೇಜ್ ಜಲೋರ್ ತಾಲೂಕು ಮತ್ತು ಜಿಲ್ಲೆ ರಾಜಸ್ಥಾನ ರಾಜ್ಯದ ಮ್ಯಾಚಿಂಗ್ ಸೆಂಟರ್ನಲ್ಲಿ ಉದ್ಯೋಗಿ.
೪ ಮಧು ಸಿಂಗ್ s s/o ಛೈಲ್ ಸಿಂಗ್ ೨೮ ವರ್ಷ, ಮಹದೇವ ಮ್ಯಾಚಿಂಗ್ ಸೆಂಟರ್ ಉದ್ಯೋಗಿ, ಮಾಲೂರು, ಕೋಲಾರ ಜಿಲ್ಲೆ. ಓ/ಂ ನಾರ್ನವಾಸ್ ಗ್ರಾಮ ಜಲೋರ್ ತಾಲೂಕು ಮತ್ತು ಜಿಲ್ಲೆ, ರಾಜಸ್ಥಾನ ರಾಜ್ಯ.
