ತುಮಕೂರು ಜಿಲ್ಲಾ ಪೊಲೀಸ್
ಸನ್ವಿಕ್ ಸ್ಟೀಲ್ ಫ್ಯಾಕ್ಟರಿಯಿಂದ ಕಬ್ಬಿಣ ಲೋಡ್ ಮಾಡಿಕೊಂಡು÷ಬೇರೆಡೆ ಅಕ್ರಮವಾಗಿ ಮಾರಾಟ ಮಾಡಿರುವ ವ್ಯಕ್ತಿಯ ಬಂಧನ.
ದಿನಾಂಕ:೨೬-೦೫-೨೦೨೬ ರಂದು ಕಳ್ಳಂಬೆಳ್ಳ ಪೊಲೀಸ್ ಠಾಣಾ ಸರಹದ್ದಿನ ಜೋಡಿ ದೇವರಹಳ್ಳಿ ಗ್ರಾಮದಲ್ಲಿರುವ ಸನ್ವಿಕ್ ಕಂಪನಿ ಅಡ್ಮೀನ್ ಆದ ಶ್ರೀಜಾರ್ಜ್ ವಿಲ್ಸನ್ ರವರು ಪೊಲೀಸ್ ಠಾಣೆಗೆ ಹಾಜರಾಗಿ ದಿನಾಂಕ ೨೨/೦೫/೨೦೨೬ ರಂದು ಕೆಎ-೫೧-ಬಿ-೧೪೬೯ ಲಾರಿಯಲ್ಲಿ ಖಿಊಇ ಃಔಔಏS ಐಔಉISIಖಿIಅS ಎಂಬ ಖಿಖಂಓSPಔಖಖಿಇಖ ಮುಖಾಂತರ ಬಿಲ್ ನಂ ೨೬-೨೭/೨೭೧೪ ಮೂಲಕ ಯಲಹಂಕದ ಶ್ರೀಸಿದ್ದಿ ವಿನಾಯಕ ಟ್ರೇಡರ್ಸ್ ರವರಿಗೆ ೨೦ ಟನ್ ಕಬ್ಬಿಣವನ್ನು ಕೆಎ-೫೧-ಬಿ-೧೪೬೯ ಲೋಡ್ ಮಾಡಿದ್ದು ಸದರಿ ಲಾರಿ ಚಾಲಕ ಮಹಮದ್ ಅಕ್ಬರ್ ಆಗಿದ್ದು ದಿನಾಂಕ ೨೩/೦೫/೨೦೨೬ ರಂದು ಕಬ್ಬಿಣದ ಮಾಲು ಶ್ರೀಸಿದ್ದಿ ವಿನಾಯಕ ಟ್ರೇಡರ್ಸ್ ರವರಿಗೆ ತಲುಪಿರುವುದಿಲ್ಲ ಎಂದು ಮಾಹಿತಿ ತಿಳಿಸಿದ್ದು ಲಾರಿ ಚಾಲಕನಿಗೆ ಫೊನ್ ಮಾಡಲಾಗಿ ಪೋನ್ ಸ್ವಿಚ್ಆಪ್ ಆಗಿದ್ದು ಲಾರಿ ಮಾಲೀಕ ಗಿರೀಶ ರವರಿಗೆ ವಿಚಾರಣೆ ಮಾಡಲಾಗಿ ಸದರಿ ಲಾರಿಯು ಕಡೂರು ಲಿಂಗಾಪುರ ಟೋಲ್ ಬಳಿ ಖಾಲಿ ಲಾರಿ ನಿಲ್ಲಿಸಿದ್ದು ಕಬ್ಬಿಣದ ಲೋಡ್ ಇರುವುದಿಲ್ಲ ಎಂದು ತಿಳಿಸಿದ್ದು ಕೆಎ-೫೧-ಬಿ-೧೪೬೯ ಲಾರಿ ಚಾಲಕನ ಮೇಲೆ ರವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇರೆಗೆ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಮೊನಂ ೯೭/೨೦೨೬ ಕಲಂ ೩೧೬.(೨).೩೧೮(೪).ಬಿಎನ್ಎಸ್ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ಸನ್ವಿಕ್ ಫ್ಯಾಕ್ಟರಿಯಿಂದ ೨೦ ಟನ್ ಕಬ್ಬಿಣ ಲೋಡ್ ಮಾಡಿಕೊಂಡು ಯಲಹಂಕದಲ್ಲಿ ಅನ್ಲೋಡ್ ಮಾಡದೇ ಬೇರೆ ಕಡೆ ಅಕ್ರಮವಾಗಿ ಮಾರಾಟ ಮಾಡಿರುವ ಕೆಎ-೫೧-ಬಿ-೧೪೬೯ ಲಾರಿ ಚಾಲಕನ ಪತ್ತೆಗೆ ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್.ಕೆ.ವಿ. ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಸಿ.ಗೋಪಾಲ್ ಮತ್ತು ಪುರುಷೋತ್ತಮ.ಎಂ.ಎಲ್. ರವರ ನೇತೃತ್ವದಲ್ಲಿ, ಶಿರಾ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಬಿ.ಕೆ.ಶೇಖರ್ ರವರ ಮಾರ್ಗಸೂಚನೆ ಮೇರೆಗೆ, ಡಿ,ಜಿ,ಶ್ರೀನಿವಾಸ ಸಿಪಿಐ ಶಿರಾ ಗ್ರಾಮಾಂತರ ವೃತ್ತ, ಭೈರೇಗೌಡ ಪಿಎಸ್ಐ ಕಳ್ಳಂಬೆಳ್ಳ ಪೊಲೀಸ್ ಠಾಣೆ, ಎಎಸ್ಐ ಗಳಾದ ನರಸಿಂಹಮೂರ್ತಿ, ಗಂಗಣ್ಣ, ಶ್ರೀನಿವಾಸ, ಹಾಗೂ ನಟರಾಜು. ಅಮೀರ್, ಬಂಗಾರಪ್ಪ ಪಾಟೀಲ, ಶ್ರೀನಿವಾಸ, ಹರೀಶ, ಬಸವರಾಜು, ಬಂಗಾರಪ್ಪ, ರಂಗರಾಜು, ಹನುಮತರಾಜು, ಭರತ್, ಸಯ್ಯದ್, ಮಹೇಶ, ಮಲ್ಲಿಕಾರ್ಜುನಸ್ವಾಮಿ ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಗಳಾದ ನರಸಿಂಹರಾಜು, ರಮೇಶ ರವರುಗಳ ತಂಡವನ್ನು ರಚಿಸಿದ್ದು, ಆರೋಪಿಯ ಪತ್ತೆಗಾಗಿ ಸಿಸಿ ಟಿವಿ ಪುಟೇಜ್ ಮತ್ತು ಟೋಲ್ ದಾಟಿದ ಬಗ್ಗೆ ಮಾಹಿತಿ ಪಡೆದು ದಿನಾಂಕ ೨೫/೦೫/೨೦೨೬ ರಂದು ಕೆಎ-೫೧-ಬಿ-೧೪೬೯ ಲಾರಿಯನ್ನು ಕಡೂರು ಲಿಂಗಾಪುರ ಟೋಲ್ ಬಳಿ ಖಾಲಿ ಲಾರಿಯನ್ನು ಪತ್ತೆ ಮಾಡಿದ್ದು ಸದರಿ ಲಾರಿಯನ್ನು ಕಳ್ಳಂಬೆಳ್ಳ ಠಾಣೆಗೆ ತಂದಿದ್ದು, ಲಾರಿ ಚಾಲಕನಾದ ಮಹಮದ್ ಅಕ್ಬರ್ ಮತ್ತು ಆತನಿಗೆ ಸಹಕರಿಸಿದ ಶೇಕ್ ಇಮ್ರಾನ್ ರವರು ತಮಗೆ ಇದ್ದಂತಹ ದುಶ್ಚಟಗಳಿಂದ ತಾನು ಮಾಡಿಕೊಂಡಿದ್ದAತಹ ಸಾಲದ ಹಣ ತೀರಿಸಲು ಅಕ್ರಮವಾಗಿ ಕಬ್ಬಿಣವನ್ನು ಮಾರಿ ಉಡುಪಿ, ಮಂಗಳೂರು ಸಾಗರದಲ್ಲಿ ತಲೆ ಮರೆಸಿಕೊಂಡಿದ್ದು ಸದರಿ ಆರೋಪಿಗಳನ್ನು ದಿನಾಂಕ ೩೧/೦೫/೨೦೨೬ ರಂದು ಶಿವಮೊಗ್ಗ ಭೈಪಾಸ್ ನಲ್ಲಿ ಇರುವ ಬಗ್ಗೆ ಮಾಹಿತಿ ಪಡೆದು ಕಳ್ಳಂಬೆಳ್ಳ ಠಾಣಾ ಪಿ.ಎಸ್.ಐ ಬೈರೇಗೌಡ ಹಾಗೂ ಸಿಬ್ಬಂದಿಗಳಾದ ಕಾರ್ತಿಕ್, ಅಮೀರ್ ರವರು ಪತ್ತೆ ಮಾಡಿ ದಸ್ತಗಿರಿ ಮಾಡಿರುತ್ತಾರೆ. ಆರೋಪಿಯು ತಾನು ಅಕ್ರಮವಾಗಿ ಮಾರಾಟ ಮಾಡಿದಂತಹ ೧೦ ಲಕ್ಷ ಮೌಲ್ಯದ ಕಬ್ಬಿಣವನ್ನು ವಶಪಡಿಸಿಕೊಂಡಿರುತ್ತೆ,
ಆರೋಪಿಗಳ ವಿವರ:
೧. ಮಹಮದ್ ಅಕ್ಬರ್ ಬಿನ್ ಉಸ್ಮಾನ್ ೩೩ ವರ್ಷ,ಚಾಲಕ ವೃತ್ತಿ, ದರ್ಗ ಲೇಔಟ್ ೭ನೇ ಕ್ರಾಸ್, ವಿಟ್ಸಂದ್ರ ಮುಖ್ಯ ರಸ್ತೆ ಬೇಗೂರು ಹೋಬಳಿ, ಬೆಂಗಳೂರು ನಗರ ಸ್ವಂತ ಊರು: ರಾಮಿನ್ ಕೊಪ್ಪ ಗ್ರಾಮ, ಹೊಸಹಳ್ಳಿ ಹೋಬಳಿ, ಶಿವಮೊಗ್ಗ.
೨. ಶೇಕ್ ಇಮ್ರಾನ್ ಬಿನ್ ಅಬ್ದುಲ್ ಖಲಿಲ್ ೩೬ ವರ್ಷ, ಸೆಟ್ರಿಂಗ್ ಕೆಲಸ ಈಶ್ವರ ದೇವಸ್ಥಾನದ ಹತ್ತಿರ, ರಾಮನಗರ, ಗೋಪಾಳ, ಶಿವಮೊಗ್ಗ
ಪ್ರಕರಣದ ಆರೋಪಿಯನ್ನು ಪತ್ತೆ ಮಾಡಿ ಮಾಲು ವಶಪಡಿಸಿಕೊಳ್ಳಲು ಶ್ರಮಿಸಿದ ಸದರಿ ಪತ್ತೆ ತಂಡವನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಕೆ.ವಿ.ಅಶೋಕ್, ಐ.ಪಿ.ಎಸ್ ರವರು ಪ್ರಶಂಸಿರುತ್ತಾರೆ.
