ಜಿಲ್ಲಾ ಪೊಲೀಸ್ ವತಿಯಿಂದ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಆಡಿಟೋರಿಯಂನಲ್ಲಿ ನಗರದ #NCC ವಿದ್ಯಾರ್ಥಿಗಳಿಗೆ ನಶೆಮುಕ್ತ ತುಮಕೂರು, ನಶೆಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಮಾದಕ ವಸ್ತುಗಳ ಸೇವನೆ ಹಾಗೂ ಸಾಗಾಣಿಕೆ ಬಗ್ಗೆ ಅರಿವು ಕಾರ್ಯಾಗಾರ ನಡೆಸಲಾಯಿತು. ಈ ಸಂದರ್ಬದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಲೋಕೇಶ್ ಧನಪಾಲ್ ಹಾವಳೆ, ಪೊಲೀಸ್ಅಧೀಕ್ಷಕರಾದ ಅಶೋಕ್ ಕೆವಿ ಐಪಿಎಸ್, ಹೆಚ್ಚುವರಿ ಪೊಲೀಸ್ಅಧೀಕ್ಷಕರುಗಳಾದ ಸಿ.ಗೋಪಾಲ್,ಕೆಎಸ್ಪಿಎಸ್, ಹಾಗು ಎಂ.ಎಲ್.ಪುರುಷೊತ್ತಮ, ಎಸ್.ಐ.ಟಿ.ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಲೋಕೇಶ್, ಎನ್.ಸಿ.ಸಿ ಅಧಿಕಾರಿಗಳು, ಡ್ರಗ್ಸ್ ಬಗ್ಗೆ ಆಗುವ ದುಶ್ಪರಿಣಾಮಗಳ ಬಗ್ಗೆ ವಿಶೇಷ ಬೋದಕರಾದ ನವೀನ್ ಮತ್ತು ಮನಿಷಾ ಭಟ್, ಹಾಗೂ ಎನ್.ಸಿ.ಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
