ತುಮಕೂರು-ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ನೋಂ)*
*ತುಮಕೂರು ಜಿಲ್ಲಾ ಘಟಕದ ವತಿಯಿಂದ ನೀಡುವ 2025–26ನೇ ಸಾಲಿನ ದತ್ತಿಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ.
*ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾ ಸಂಘದ ವತಿಯಿಂದ ನೀಡುವ ದತ್ತಿ ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಸಂಘದ ಅಧ್ಯಕ್ಷರಾದ ಎಲ್ .ಯೋಗೇಶ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಇ. ರಘುರಾಮ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.*
ಪ್ರಶಸ್ತಿಯು ಒಂದು ಸಾವಿರ ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಿ ಸನ್ಮಾನಿಸಲಾಗುವುದು.
1) ಎಚ್. ಜಿ. ಗುಂಡೂರಾವ್ ಪ್ರಶಸ್ತಿ (ಮಾನವೀಯ ವರದಿ)
2) ವೈ.ಕೆ. ರಾಮಯ್ಯ ಪ್ರಶಸ್ತಿ (ಉತ್ತಮ ಗ್ರಾಮೀಣ ವರದಿ) (ಆರ್.ಕಾಮರಾಜ್ ಪ್ರತಿಷ್ಠಾಪಿತ)*
3) ಸಿ.ಎನ್. ಭಾಸ್ಕರಪ್ಪ ಪ್ರಶಸ್ತಿ (ಉತ್ತಮ ಪರಿಸರ ವರದಿ)
4) ಮಾಜಿ ಶಾಸಕರು ಹಾಗೂ ಮಾಜಿ ಸಚಿವ ದಿ. ಎನ್. ಬಸವಯ್ಯ 5,000 ನಗದು ಪ್ರಶಸ್ತಿ (ಪತ್ರಿಕೋದ್ಯಮದಲ್ಲಿ ಜೀವಮಾನ ಸಾಧನೆ ಸೇವಾ ಪ್ರಶಸ್ತಿ)
(ಶಾಸಕರಾದ ಸಿ.ಬಿ. ಸುರೇಶ್ ಬಾಬು ಚಿಕ್ಕನಾಯಕನಹಳ್ಳಿ ಪ್ರತಿಷ್ಠಾಪಿತ)
5) ಪ್ರಜಾಪ್ರಗತಿ ಸಂಪಾದಕ ಡಾ. ಎಸ್. ನಾಗಣ್ಣ ಅಭಿವೃದ್ಧಿ ಪತ್ರಿಕೋದ್ಯಮ ದತ್ತಿ ಪ್ರಶಸ್ತಿ (ಜಿಲ್ಲೆಯ ಅಭಿವೃದ್ಧಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸಿದ ಅತ್ಯುತ್ತಮ ವರದಿ.)
ಈ ಪ್ರಶಸ್ತಿಗಳಿಗೆ ಜಿಲ್ಲಾ ಮಟ್ಟದ ಪತ್ರಿಕೆಗಳು, ರಾಜ್ಯಮಟ್ಟದ ಪತ್ರಿಕೆಗಳ ವರದಿಗಾರರು ತಮ್ಮ ಸ್ವಂತ ಬೈಲೈನ್ ಇರುವ ವರದಿಗಳನ್ನು ಕಳಿಸಿಕೊಡಬಹುದು.
*2025–26ನೇ ಸಾಲಿನ ಪ್ರಶಸ್ತಿಗೆ ಏಪ್ರಿಲ್ ತಿಂಗಳ 2025ರಿಂದ ಮಾರ್ಚ್ 2026ರವರೆಗಿನ ಅವಧಿಯಲ್ಲಿ ವರದಿಗಳು ಪ್ರಕಟಗೊಂಡಿರಬೇಕು.*
ಟಿ.ವಿ.ಮಾಧ್ಯಮದ ವರದಿಗಾರರು ಸುದ್ದಿ ಬಂದಿರುವ ವಿಡಿಯೋಕ್ಲಿಪ್ಪಿನೊಂದಿಗೆ ಸ್ವ-ಅರ್ಜಿಯೊಂದಿಗೆ ಸಲ್ಲಿಸಬೇಕು. ಅರ್ಜಿಗಳನ್ನು ಸಲ್ಲಿಸಲು ಕೊನೆ ಜುಲೈ24ರಂದು ದೊಳಗೆ ಕಳಿಸಿಕೊಡಬೇಕು ನಂತರ ಬಂದ ಯಾವುದೇ ಅರ್ಜಿಗಳನ್ನು ಪಡೆಯಲಾಗುವುದಿಲ್ಲ. ತೀರ್ಪುಗಾರರು ಹಾಗೂ ಜಿಲ್ಲಾ ಸಂಘದ ತೀರ್ಮಾನವೇ ಅಂತಿಮವಾಗಿರುತ್ತದೆ.
*ಅರ್ಜಿ ಕಳಿಸಿಕೊಡಲು ಕೊನೆ ದಿನಾಂಕ:24/07/26ರಂದು ಶುಕ್ರವಾರ ಸಂಜೆ 5:೦೦ ಒಳಗಾಗಿ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ಕೆ.ಯು.ಡಬ್ಲ್ಯೂ.ಜೆ. ಜಿಲ್ಲಾಕಚೇರಿ ಬಾಳೆನಕಟ್ಟೆ ರಸ್ತೆ ತುಮಕೂರು.*
*ಇಲ್ಲಿಗೆ ಖುದ್ದಾಗಿ ಅಥವಾ ನೊಂದಾಯಿತ ಅಂಚೆ ಮೂಲಕ ಕಳಿಸಿಕೊಡಬಹುದು ಎಂದು ಈ ಮೂಲಕ ಕೋರಲಾಗಿದೆ.*
ವಂದನೆಗಳೊಂದಿಗೆ…
ಇಂತಿ.
ಎಲ್. ಯೋಗೇಶ್
ಜಿಲ್ಲಾಧ್ಯಕ್ಷರು
ಮೊಬೈಲ್ ಸಂಖ್ಯೆ=9986692123
ಟಿ. ಇ.ರಘುರಾಮ್
ಜಿಲ್ಲಾ ಪ್ರಧಾನ ಪ್ರಧಾನ ಕಾರ್ಯದರ್ಶಿಗಳು
ಮೊಬೈಲ್ ಸಂಖ್ಯೆ=9538744656
