ಕೇಂದ್ರ ಸರ್ಕಾರ ಎಸ್ ಐ ಆರ್ ಬದಲು ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡುವುದು ಸೂಕ್ತ, ದೇಶದಲ್ಲಿ ಬಿಜೆಪಿ ಸರ್ಕಾರ ಚುನಾವಣಾ ಆಯೋಗವನ್ನ ತನ್ನ ಕೈಗೊಂಬೆಯನ್ನಾಗಿಸಿಕೊoಡಿದೆ.
ಯುವಕರ ಧ್ವನಿಯಾದ ಕಾಕ್ರೋಚ್ ಪಕ್ಷಕ್ಕೆ ನಿರ್ಬಂಧ ಹೇರಬಾರದು, ಎಎಪಿ ಒತ್ತಾಯ.
ತುಮಕೂರು: ದೇಶದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಚುನಾವಣಾ ಆಯೋಗವನ್ನು ತನ್ನ ಕೈಗೊಂಬೆಯನ್ನಾಗಿ ಮಾಡಿಕೊಂಡು ಚುನಾವಣೆ ವೇಳೆ ಅವರಿಗೆ ಅನುಕೂಲಕ್ಕೆ ತಕ್ಕಂತೆ ಮತದಾರರನ್ನು ಕೈಬಿಡುವುದು ಮತ್ತು ಸೇರಿಸುವ ಕೆಲಸ ಮಾಡಲು ಭಾರತದ ಚುನಾವಣಾ ಆಯೋಗದಿಂದ ದೇಶಾದ್ಯಂತ ಈಗಾಗಲೇ ಮತದಾರರ ಪಟ್ಟಿಯನ್ನು ವಿಶೇಷವಾಗಿ ಪರಿಷ್ಕರಿಸಲು ಎಸ್ಐಆರ್ ೨೦೨೬ ಮೂಲಕ ನಾಗರೀಕರ ತೆರಿಗೆ ಹಣವನ್ನು ದುಂದು ವೆಚ್ಚ ಮಾಡಲು ಹೊರಟಿದ್ದು ಅದನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಎಸ್ಐಆರ್ ಬದಲು ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡುವುದು ಸೂಕ್ತವೆಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಎ.ಜಯರಾಮಯ್ಯ ಅವರು ಒತ್ತಾಯಿಸಿದರು.
ತುಮಕೂರು ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿ ಪರಿಷ್ಕರಣೆ ಎಸ್ಐಆರ್ ಬದಲು ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡುವಂತೆ ಮನವಿ ಸಲ್ಲಿಸಿ ನಂತರ ಮಾತನಾಡಿದ ಜಯರಾಮಯ್ಯ ದೇಶದಲ್ಲಿ ಜನಸಾಮಾನ್ಯರು ತೆರಿಗೆಗಳ ರೂಪದಲ್ಲಿ ಮತ್ತು ಬೆಲೆ ಏರಿಕೆಯ ರೂಪದಲ್ಲಿ ಅತಿ ಹೆಚ್ಚು ಸಂಕಟ ಪಡುವಂತಾಗಿದೆ ಆದುದರಿಂದ ದೇಶದ ಆರ್ಥಿಕತೆಗೆ ಧಕ್ಕೆಯಾಗದಂತೆ ಮತದಾನದ ವೇಳೆ ಆಧಾರ್ ಕಾರ್ಡಿಗೆ ಸಂಬoಧಿಸಿದ ಫಿಂಗರ್ ಪ್ರಿಂಟ್ ಅನ್ನು ಕಡ್ಡಾಯ ಮಾಡಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಎಎಪಿ ಪಕ್ಷದ ರಾಜ್ಯಸಭಾ ಸದಸ್ಯ ರಾಘವ ಚಡ್ದ ಅವರು ಜನಪರ ಕಾಳಜಿಯಿಂದಾಗಿ ಸರ್ಕಾರದಿಂದ ಅಕ್ಕಿ ಪಡೆಯಲು, ರೈತರು ರಸ ಗೊಬ್ಬರವನ್ನು ಪಡೆಯಲು, ವಯಸ್ಸಾದವರು ಪಿಂಚಣಿಯನ್ನ ಪಡೆಯಲು ಆಧಾರ್ ಕಾರ್ಡಿನ ಫಿಂಗರ್ ಪ್ರಿಂಟನ್ನ ಕಡ್ಡಾಯಗೊಳಿಸಲಾಗಿತ್ತು ಅದೇ ಮಾದರಿಯಲ್ಲಿ ಮತ ಗಳತನ, ವಂಚನೆ ಸಮಸ್ಯೆ ತಡೆಯಲು ಮತದಾನಕ್ಕೆ ಫಿಂಗರ್ ಪ್ರಿಂಟ್ ಕಡ್ಡಾಯ ಮಾಡಬೇಕು ಎಂದು ರಾಜ್ಯ ಸಭೆಯಲ್ಲಿ ಆಗ್ರಹಿಸಿದರು.
ಅದೇ ಮಾದರಿಯಲ್ಲಿ ಬಿಜೆಪಿ ಸರ್ಕಾರ ಮತದಾನಕ್ಕೆ ಫಿಂಗರ್ ಪ್ರಿಂಟನ್ನ ಕಡ್ಡಾಯಗೊಳಿಸಬೇಕು ಎಎಪಿ ಪಕ್ಷದ ಇಂತಹ ಜನಪರ ಕಾಳಜಿಯುಳ್ಳ ರಾಘವ್ ಚಡ್ಡ ಅವರ ವಿರುದ್ಧ ಕೇಂದ್ರ ಸರ್ಕಾರ ಇಡಿ- ಸಿಬಿಐ ದಾಳಿ ನಡೆಸಿ ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡು ಚಡ್ಡ ಅವರು ಮಾತನಾಡದಂತೆ ನಿರ್ಬಂಧ ಏರಲಾಗಿದೆ ಆದರೆ ದೇಶದಲ್ಲಿ ಎಎಪಿ ಪಕ್ಷವು ಅಧಿಕಾರಕ್ಕೆ ಬಂದಾಗಿನಿoದಲೂ ಸಂಚಲನವನ್ನು ಸೃಷ್ಟಿ ಮಾಡಿ ಭ್ರಷ್ಟಾಚಾರ ರಹಿತ ಸರ್ಕಾರ ನೀಡುವ ಗುರಿಯನ್ನು ಒಂದಲಾಗಿದೆ ಕೇಂದ್ರ ಸರ್ಕಾರವು ಮುಂಬರುವ ೨೦೨೮ಕ್ಕೆ ಕರ್ನಾಟಕ ರಾಜ್ಯದಲ್ಲಿ ಅಧಿಕಾರ ಹಿಡಿಯುವ ಸಲುವಾಗಿ ಕೇಂದ್ರ ಚುನಾವಣಾ ಆಯೋಗದ ಮೂಲಕ ಎಸ್ಐಆರ್ ಮುಖಾಂತರ ಬಹಳಷ್ಟು ಹಣವನ್ನು ಖರ್ಚು ಮಾಡಿ ಮತಗಳ್ಳತನ ಮಾಡಲು ಹೊರಟಿರುವುದನ್ನ ಎಎಪಿ ಪಕ್ಷ ಖಂಡಿಸುತ್ತದೆ ಎಂದು ತಿಳಿಸಿದರು.
ನ್ಯಾಯಾಧೀಶರೊಬ್ಬರು ದೇಶದಲ್ಲಿ ಯುವಕರು ನಿರುದ್ಯೋಗದಿಂದಾಗಿ ಜಿರಲೆಗಳಂತೆ ಅಲೆಯುತ್ತಿದ್ದಾರೆ ಎಂಬ ಮಾತನ್ನು ಆಲಿಸಿದ ಯುವ ಸಮೂಹವು ಜಿರಲೆಯ ಗುರುತನ್ನ ಇಟ್ಟು ಕಾಕ್ಕ್ರೋಚ್ ಜನತಾ ಪಕ್ಷ ಎಂಬ ಹೊಸ ಪಕ್ಷವನ್ನ ನಿರ್ಮಿಸಿದರು ಆದರೆ ಕೇಂದ್ರ ಸರ್ಕಾರವು ತನ್ನ ಅಧಿಕಾರವನ್ನ ಬಳಸಿ ಅ ಪಕ್ಷದ ಪ್ರಚಾರಕ್ಕೆ ನಿರ್ಬಂಧವನ್ನು ನೀಡಲಾಗಿದೆ ಯುವಕರು ನೇರವಾಗಿ ಪಕ್ಷದ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕುವುದಕ್ಕೆ ಕೇಂದ್ರ ಸರ್ಕಾರ ಅಡ್ಡಿಪಡಿಸುತ್ತಿದ್ದು ಇದನ್ನು ನಿಲ್ಲಿಸಬೇಕು ಎಂದು ಆಕ್ರೋಶ ಹೊರ ಹಾಕಿದರು.
ಎಎಪಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್ ರಾಮಾಂಜಿನಪ್ಪ ಅವರು ಮಾತನಾಡಿ ದೇಶದಲ್ಲಿ ನಕಲಿ ಮತದಾರರನ್ನು ನಿರ್ಬಂಧಿಸಬೇಕು ನಕಲಿ ಮತದಾರರ ನಾತೆಗೆಯುವ ನಿಟ್ಟಿನಲ್ಲಿ ಅಸಲಿ ಮತಗಳನ್ನು ಕೇಂದ್ರ ಸರ್ಕಾರ ಹಾಳು ಮಾಡುತ್ತಿದ್ದು ಇದಕ್ಕೆ ಪೂರಕವಂತೆ ಕೇಂದ್ರ ಚುನಾವಣಾ ಆಯೋಗವು ಕೂಡ ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಕುಣಿಯುತ್ತಿವೆ ಆದರೆ ಎಎಪಿ ಪಕ್ಷವು ಒತ್ತಾಯ ಮಾಡುವುದೇನೆಂದರೆ ಪಾರದರ್ಶಕವಾಗಿ ದೇಶದಾದ್ಯಂತ ಮಾಡಬೇಕಿದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಾತ್ಮಕವಾಗಿರುವ ಗೌರವತ ಮತದಾನ ವ್ಯವಸ್ಥೆಗೆ ಫಿಂಗರ್ ರ್ಪ್ರಿಂಟ್ ವ್ಯವಸ್ಥೆ ಬಂದರೆ ತುಂಬಾ ಅನುಕೂಲ ವಾಗಲಿದೆ ಆದರೆ ಕೇಂದ್ರ ಸರ್ಕಾರ ಕಳ್ಳನಂತೆ ನಕಲಿ ಮತದಾನದ ಮೂಲಕ ಅಧಿಕಾರದ ಗದ್ದಿಗೆ ಎರಲು ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದರು.ಇನ್ನೊಂದೆಡೆ ದೇಶಾದ್ಯಂತ ಲಕ್ಷಾಂತರ ವಿದ್ಯಾವಂತ ಯುವಕರು ನೀಟ್ ಪರೀಕ್ಷೆಯನ್ನು ಬರೆದಿದ್ದು ಕೇಂದ್ರ ಸರ್ಕಾರದ ದುರಾಡಳಿತದಿಂದಾಗಿ ನೀಟು ಪರೀಕ್ಷೆಯಿಂದ ಸುಮಾರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಇದರಿಂದ ತಿಳಿಯುತ್ತಿದೆ ಉಗ್ರಗಾಮಿಗಳು ಬೇರೆ ದೇಶದಲ್ಲಿಲ್ಲ ಆದರೆ ನಮ್ಮ ದೇಶದಲ್ಲಿ ಇದ್ದಾರೆ ನಮ್ಮ ವಿದ್ಯಾವಂತ ಯುವಕ ಯುವತಿಯರನ್ನೇ ಈ ರೀತಿಯಾಗಿ ಸಾಯಿಸುತ್ತಿದ್ದಾರೆ ಯುವಕರಿಗೆ ಸರಿಯಾಗಿ ಉದ್ಯೋಗ ನೀಡಲಾರದ ಕೇಂದ್ರ ಸರ್ಕಾರವು ಪಾರದರ್ಶಕವಾಗಿ ನೀಡ್ ಪರೀಕ್ಷೆಯನ್ನು ನಡೆಸದೆ ಕುತಂತ್ರದ ಮೋಸ ಮಾಡುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿರಾ ತಾಲೂಕು ಅಧ್ಯಕ್ಷ ಬಿ.ವಿ ತಿಮ್ಮಪ್ಪ, ಪಾವಗಡ ಪ್ರಧಾನ ಕಾರ್ಯದರ್ಶಿ ಕೆ.ಎನ್ ನಾರಾಯಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
