ತುಮಕೂರು ಜಿಲ್ಲಾ ಪೊಲೀಸ್ ಪ್ರಕಟಣೆ
ರಾತ್ರಿ ಸಮಯದಲ್ಲಿ ಮನೆ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ
ಅಂತರರಾಜ್ಯ ಕಳ್ಳರ ಬಂಧನ
ತುಮಕೂರು ಎಮ್ ಟಿ ರಾಜಣ್ಣ ರವರ ಮನೆಯಲ್ಲಿ ರಾತ್ರಿ ಸಮಯದಲ್ಲಿ ಮನೆ ಬಾಗಿಲು ಮುರಿದು ಬೆಳ್ಳಿ ಮತ್ತು ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವ ಬಗ್ಗೆ ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಠಾಣೆಯಲ್ಲಿ ಸಪ್ರಕರಣ ದಾಖಲಾಗಿರುತ್ತೆ.
ಈ ಪ್ರಕರಣವನ್ನು ಪತ್ತೆಹಚ್ಚಲು ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್.ಕೆ.ವಿ. ರವರ ಮಾರ್ಗದರ್ಶನದಲ್ಲಿ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಸಿ.ಗೋಪಾಲ್ ಮತ್ತು ಪುರುಷೋತ್ತಮ.ಎಂ.ಎಲ್.ರವರ ನೇತೃತ್ವದಲ್ಲಿ, ಕುಣಿಗಲ್ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಓಂ ಪ್ರಕಾಶ್ ರವರ ಮಾರ್ಗಸೂಚನೆ ಮೇರೆಗೆ, ತುರುವೇಕೆರೆ ವೃತ್ತದ ಸರ್ಕಲ್ ಇನ್ಸ್ಪೆಕ್ಟರ್ ಲೋಹಿತ್ ಪಿ.ಎಸ್.ಐ ಮೂರ್ತಿ ತುರುವೇಕೆರೆ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳಾದ ಆನಂದ, ಮಾಳಪ್ಪ ಪೂಜಾರಿ, ಕಿರಣ್ ಕುಮಾರ್, ರಾಜ್ ಕುಮಾರ್ ವಗ್ಗೆರಿ ರವರನ್ನು ಒಳಗೊಂಡ ಅಪರಾಧ ಪತ್ತೆ ತಂಡವನ್ನು ರಚಿಸಿದ್ದು, ಈ ಪ್ರಕರಣದಲ್ಲಿ ರಾತ್ರಿ ಸಮಯದಲ್ಲಿ ಮನೆ ಬಾಗಿಲು ಮುರಿದು ಬೆಳ್ಳಿ ಮತ್ತು ಚಿನ್ನಾಭರಣಗಳನ್ನು ಕಳ್ಳತನ ಮಾಡಿರುವ ಅಂತರ ರಾಜ್ಯ ಕಳ್ಳರನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಂಡಿರುತ್ತೆ.
ಆರೋಪಿಗಳ ವಿವಿರ:
೧) ಪೆದ್ದಿನೇನಿ ವಂಶಿ @ ಪೆದ್ದಿನೇನಿ ಬಿನ್ ಲೇಟ್ ಗುರುವಯ್ಯ, ವದ್ದೂರು ಬೀದಿ, ಬಂಗಾರ ತಿರುಪತಿ ಸ್ವಾಮಿ ಪಲ್ಲಂ ತಾಲೂಕು, ಚಿತ್ತೂರು ಜಿಲ್ಲೆ, ಆಂದ್ರಪ್ರದೇಶ ರಾಜ್ಯ.
೨) ಎಲ್.ಲಕ್ಷಿö್ಮÃಪತಿ ಬಿನ್ ಚಿನ್ನರಾಜುಲು, ೩೬ ವರ್ಷ, ಸಂಕ್ರಾತಿಪಲ್ಲಿ ಗ್ರಾಮ, ಬಂಗಾರಪಲ್ಲA ಮಂಡಲ ತಾಲೂಕು,
ಚಿತ್ತೂರು ಜಿಲ್ಲೆ, ಆಂದ್ರ ಪ್ರದೇಶ ರಾಜ್ಯ.
ಸುಮಾರು ೩ ಲಕ್ಷ ಮೌಲ್ಯದ ಬೆಳ್ಳಿಯ ಆಭರಣಗಳು, ೧೫ ಸಾವಿರ ಮೌಲ್ಯದ ಚಿನ್ನದ ಗುಂಡುಗಳು, ಹಿತ್ತಾಳೆಯ ವಸ್ತುಗಳು ಹಾಗೂ ತುಮಕೂರು ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಪ್ಯಾಷನ್ ಪ್ರೋ ಬೈಕ್ ಅನ್ನು ಆರೋಪಿತರಿಂದ ವಶಪಡಿಸಿಕೊಂಡಿರುತ್ತದೆ. ಅಂತರ ರಾಜ್ಯ ಕಳ್ಳರನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಶ್ರಮಿಸಿದ ಸದರಿ ಪತ್ತೆತಂಡವನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಕೆ.ವಿ.ಅಶೋಕ್, ಐ.ಪಿ.ಎಸ್ ರವರು ಪ್ರಶಂಸಿರುತ್ತಾರೆ.
