ಜಗತ್ತಿಗೆ ಜ್ಞಾನವನ್ನು ತಂದುಕೊಟ್ಟ ಮಹಾನ್ ಮಾನವತಾವಾದಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್
ಸ್ವಾತಂತ್ರ್ಯ ಮತ್ತು ಸ್ವಾವಲಂಭಿ ಭಾರತಕ್ಕೆ ದುಡಿದವರು ಬಾಬು ಜಗಜೀವನ್ರಾಮ್ ಎ.ನರಸಿಂಹಮೂರ್ತಿ
ತುಮಕೂರು-ಸಂವಿಧಾನಶಿಲ್ಪಿ ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 135ನೇ ಹಾಗೂ ಹಸಿರುಕ್ರಾಂತಿ ಹರಿಕಾರ ಉಪಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ರವರ 119ನೇ ಜನುಮ ದಿನಾಚರಣೆ ಕಾಯಕ್ರಮವನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ತುಮಕೂರು ಉಪವಿಭಾಗದ ಕಛೇರಿಯಲ್ಲಿ ಆಚರಣೆ ಮಾಡಲಾಯಿತು
ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕ ಎ.ನರಸಿಂಹೂರ್ತಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರು ಇಡೀ ಜಗತ್ತಿಗೆ ಜ್ಞಾನವನ್ನು ತಂದುಕೊಟ್ಟ ಮಹಾನ್ ಮಾನವೀಯತವಾದಿ ಮನುಷ್ಯತ್ವ ಮತ್ತು ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸಿದವರಲ್ಲಿ ಜಗತ್ತಿನಲ್ಲೆ ಅತೀ ಹೆಚ್ಚು ಪ್ರೀತಿಪಾತ್ರರಲ್ಲಿ ಬಾಬಾ ಸಾಹೇಬರು ಒಬ್ಬರು, ಸ್ವಾತಂತ್ರ್ಯ ಮತ್ತು ಸ್ವಾವಲಂಭಿ ಭಾರತಕ್ಕಾಗಿ ದುಡಿದವರು ಬಾಬು ಜಗಜೀವನ್ರಾಮ್ರವರು, ಬಾಬಾ ಸಾಹೇಬರು ಆಕಿಕೊಟ್ಟ ಹೋರಾಟದ ದಾರಿಯಲ್ಲಿ ಸರ್ವರಿಗೂ ಸಮಪಾಲು- ಸಮಬಾಳು ಸಂವಿಧಾನದ ಆಶಯದಂತೆ ಸ್ಲಂ ಜನರು ಮತ್ತು ಅತ್ಯಂತ ತುಳಿತುಕೊಳಗಾದ ನೈಜವಾದ ಬಡವರಿಗೆ ಯಾರಿಗೇ ಮನೆ ಇಲ್ಲ, ಮೂಲಭೂತ ಸೌಲಭ್ಯಗಳಿಲ್ಲ. ಭೂಮಿ ಇಲ್ಲ ಅಂತಹ ಕುಟುಂಬಗಳಿಗೆ ಸಾಂವಿಧಾನಿಕ ಹಕ್ಕನ್ನು ಒದಗಿಸುವಂತಹ ಕಾರ್ಯವನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಮಾಡುತ್ತಿದೆ. ಸರ್ಕಾರ ಇನ್ನೂ ಹೆಚ್ಚು ಜನಪರವಾದ ಕಾರ್ಯಕ್ರಮಗಳನ್ನು ಜಾರಿಗೆ ತರಲಿ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ್ ರಂತಹ ಮಹಾನ್ ದೇಶ ಪ್ರೇಮಿಗಳ ದಿನಾಚರಣೆ ಹಮ್ಮಿಕೊಂಡು ಗೌರವ ಸಲ್ಲಿಸುವುದು ನಮ್ಮೇಲ್ಲರ ಜವಾಬ್ದಾರಿಯಾಗಲಿ ಎಂದರು.
ನಂತರ ಸ್ಲಂ ಬೋರ್ಡ್ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಬಾನುಪ್ರತಾಪ್ ಸಿಂಹ ಮಾತನಾಡಿ ನಮ್ಮ ಬಾರತ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ರವರು ದೇಶಕ್ಕೆ ಪವಿತ್ರವಾದ ಸಂವಿಧಾನ ನೀಡುವ ಮೂಲಕ ಸರ್ವರು ಸಮಾನರು ಎಲ್ಲಾ ಸಮುದಾಯಗಳಿಗೆ ಸಮಾನ ಅವಕಾಶಗಳನ್ನು ದೊರಕಿಸಿಕೊಟ್ಟಿರುವುದು ನಮ್ಮಂತಹವರಿಗೆ ಅನುಕೂಲವಾಗಿದೆ. ಡಾ.ಬಿ.ಆರ್ ಅಂಬೇಡ್ಕರ್ ಸಾಹೇಬರನ್ನು ವೈಭವೀಕರಿಸುವುದಕ್ಕಿಂತ ಅವರ ಸಿದ್ದಾಂತ ಮತ್ತು ಅವರ ಆಶಯಗಳನ್ನು ಇಂದಿನ ಯುವಪೀಳಿಗೆ ಅಳವಡಿಸಿಕೊಳ್ಳಬೇಕಿದೆ ಸಮಪಾಲು – ಸಮಬಾಳು ಆಶಯ ಈಡೇರಿಸಲು ಸರ್ಕಾರಿ ಉದ್ಯೋಗದಲ್ಲಿರುವ ನಾವು ಹೆಚ್ಚು ಬಡವರ ಪರವಾದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಶ್ರಮಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳಾದ ಜಗದೀಶ್, ರಕ್ಷಿತ್, ಯಶಸ್ವಿ, ಸಿಬ್ಬಂದಿಗಳಾದ ಮೌನಶ್ರೀ, ಸುನೀಲ್, ರಮೇಶ್, ಮಂಜುನಾಥ್. ಆಸೀಫ್. ಮತ್ತು ಸ್ಲಂ ಸಮಿತಿಯ ಪದಾಧಿಕಾರಿಗಳಾದ ಅರುಣ್, ತಿರುಮಲಯ್ಯ, ಕೃಷ್ಣಮೂರ್ತಿ. ಶಂಕ್ರಯ್ಯ, ಗುಲ್ನಾಜ್, ರಾಮಕೃಷ್ಣಯ್ಯ, ರಂಗನಾಥ್.ಮುಬಾರಕ್,ಅಶ್ವತ್. ಗೋವಿಂದರಾಜ್ ಮುಂತಾದವರು ಪಾಲ್ಗೊಂಡಿದ್ದರು
