ತುಮಕೂರು :ತಿಪಟೂರು – 2025-26ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ -ತಿಪಟೂರು ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನ,
ನಳಂದ ಶಾಲೆ ತಾಲ್ಲೂಕಿಗೆ ಪ್ರಥಮ.
ಈ ವೇಳೆ ಮಾಧ್ಯಮದೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಮಣಿ ಮಾತನಾಡಿ 2025-26ನೇ ಸಾಲಿನಲ್ಲಿ ತಾಲ್ಲೂಕಿನ ಎಸ್ ಎಸ್ ಎಲ್ ಸಿ ಪರೀಕ್ಷೆ-1ರ ಫಲಿತಾಂಶದಲ್ಲಿ ತಾಲ್ಲೂಕಿನಲ್ಲಿ ಒಟ್ಟು 2251 ಮಕ್ಕಳು ಪರೀಕ್ಷೆಯನ್ನು ಬರೆದಿದ್ದು 2190 ವಿದ್ಯಾರ್ಥಿಗಳು ಉತ್ತಿರ್ಣರಾಗಿರುತ್ತಾರೆ. 61 ವಿದ್ಯಾರ್ಥಿಗಳು ಅನುತೀರ್ಣರಾಗಿರುತ್ತಾರೆ ತಾಲ್ಲೂಕಿನ ಒಟ್ಟು ಫಲಿತಾಂಶ 97.29% ಬಂದಿದ್ದು ಈ ಬಾರಿ ನಮ್ಮ ತಾಲ್ಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ.
ಈ ಬಾರಿಯ ಫಲಿತಾಂಶದಲ್ಲಿ ನಮ್ಮ ತಾಲ್ಲೂಕಿನಲ್ಲಿ 1107 ಬಾಲಕಿಯರು ಪರೀಕ್ಷೆಯನ್ನು ಬರೆದಿದ್ದು 1083 ಬಾಲಕಿಯರು ಉತ್ತಿರ್ಣರಾಗಿರುತ್ತಾರೆ.. ಬಾಲಕಿಯರ ಫಲಿತಾಂಶ 97.83%, 1144 ಬಾಲಕರು ಪರೀಕ್ಷೆಯನ್ನು ಬರೆದಿದ್ದು 1107 ಬಾಲಕರು ಉತ್ತಿರ್ಣರಾಗಿರುತ್ತಾರೆ. ಬಾಲಕರ ಫಲಿತಾಂಶ 96.77%. ತಾಲ್ಲೂಕಿನ ಸರ್ಕಾರಿ ಶಾಲೆಗಳ ಫಲಿತಾಂಶ 96.56% ಅನುದಾನಿತ ಶಾಲೆಗಳ ಫಲಿತಾಂಶ 96.90% ಅನುದಾನರಹಿತ ಶಾಲೆಗಳ ಫಲಿತಾಂಶ 98.96% ಪಡೆದಿದೆ. ನಮ್ಮ ತಾಲ್ಲೂಕಿನಲ್ಲಿ 600ಕ್ಕಿಂತ ಹೆಚ್ಚು ಅಂಕಗಳನ್ನು 59 ವಿದ್ಯಾರ್ಥಿಗಳು ಪಡೆದಿದ್ದಾರೆ. ತಾಲ್ಲೂಕಿನ ನಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಲ್ಲಿ ಪ್ರಥಮ ಸ್ಥಾನ ಮಣಿಕಂಠ ಕೆ ನಳಂದ ಪ್ರೌಢಶಾಲೆ ವಿದ್ಯಾರ್ಥಿ 621 ಅಂಕಗಳನ್ನು ಪಡೆದಿರುತ್ತಾರೆ. ದ್ವಿತೀಯ ಸ್ಥಾನ ವಿಸ್ಮಯ ಜಿ ಆರ್ ಶ್ರೀಮದ್ ರಂಭಪುರಿ ಆಂಗ್ಲ ಪ್ರೌಢಶಾಲೆ ವಿದ್ಯಾರ್ಥಿ 620 ಅಂಕಗಳನ್ನು ಪಡೆದಿರುತ್ತಾರೆ. ತೃತೀಯ ಸ್ಥಾನ ಪ್ರಜ್ವಲ್ ಎಮ್ ಪಿ ಶ್ರೀಮದ್ ರಂಭಪುರಿ ಆಂಗ್ಲ ಪ್ರೌಢಶಾಲೆ ವಿದ್ಯಾರ್ಥಿ 619 ಅಂಕಗಳನ್ನು ಪಡೆದಿರುತ್ತಾರೆ.
ತಾಲ್ಲೂಕಿನಲ್ಲಿ ಒಟ್ಟು ಗ್ರೇಡ್ ಾರು ಫಲಿತಾಂಶದಲ್ಲಿ A+ ಶ್ರೇಣಿಯನ್ನು 264 ವಿದ್ಯಾರ್ಥಿಗಳು ಪಡೆದಿದ್ದಾರೆ. A ಶ್ರೇಣಿಯನ್ನು 344 ವಿದ್ಯಾರ್ಥಿಗಳು ಪಡೆದಿದ್ದಾರೆ.B+ ಶ್ರೇಣಿಯನ್ನು 475 ವಿದ್ಯಾರ್ಥಿಗಳು ಪಡೆದಿದ್ದಾರೆ. B ಶ್ರೇಣಿಯನ್ನು 419 ವಿದ್ಯಾರ್ಥಿಗಳು ಪಡೆದಿದ್ದಾರೆ. C+ ಶ್ರೇಣಿಯನ್ನು 397 ವಿದ್ಯಾರ್ಥಿಗಳು ಪಡೆದಿದ್ದಾರೆ. C ಶ್ರೇಣಿಯನ್ನು 291 ವಿದ್ಯಾರ್ಥಿಗಳು ಪಡೆದಿದ್ದಾರೆ. ತಾಲ್ಲೂಕಿನ 50 ಶಾಲೆಗಳಲ್ಲಿ 31 ಶಾಲೆಗಳು ಶೇಕಡಾ 100 ರಷ್ಟು ಫಲಿತಾಂಶ ಪಡೆದಿದೆ ಎಂದರು.
ತಾಲೂಕಿಗೆ ಪ್ರಥಮ ಸ್ಥಾನ ಪಡೆದ ನಳಂದ ಶಾಲೆಯ ಆಡಳಿತ ಅಧಿಕಾರಿ ಶ್ರೀಮತಿ ರೇಖಾ ಮಾತನಾಡಿ ನಮ್ಮ ಶಾಲೆಯ ವಿದ್ಯಾರ್ಥಿ ಮಣಿಕಂಠ ಕೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದು 625 ಅಂಕಗಳಿಗೆ 621 ಅಂಕಗಳನ್ನು ಪಡೆದಿರುವುದು ನಮ್ಮೆಲ್ಲರ ಹೆಮ್ಮೆಯ ವಿಚಾರವಾಗಿದ್ದು ನಮ್ಮ ಶಾಲೆಯು ನೂರರಷ್ಟು ಫಲಿತಾಂಶ ಪಡೆದಿದೆ ಎಂದರು.
