ತುಮಕೂರು: ನಗರ ವೀರಶೈವ ಸಮಾಜದ ವತಿಯಿಂದ ಬಸವ ಜಯಂತಿಯAದು ಜಗದ್ಗುರು ಶ್ರೀ ರೇಣುಕಾಚಾರ್ಯರ ಜಗಜ್ಯೋತಿ ಶ್ರೀ ಬಸವೇಶ್ವರರ ಮತ್ತು ಕಾಯಕ ಯೋಗಿ ಸ್ರೀ ಸಿದ್ದರಾಮೇಶ್ವರರ ವೈಭವದ ಜಂಟಿ ಉತ್ಸವ ಎಸ್ಐಟಿ ಆವರಣದಲ್ಲಿರುವ ಸ್ರೀ ಗಣಪತಿ ದೇವಾಲಯದಿಂದ ನೆರವೇರಿತು. ಉತ್ಸವದಲ್ಲಿ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಸಿದ್ದರಬೆಟ್ಟದ ಶ್ರೀ ವೀರಭಧ್ರ ಶಿವಾಚಯ ಸ್ವಾಮಿಗಳು, ಬೆಳ್ಳಾವಿ ಕಾರದ ಮಠದ ಶ್ರೀ ಕಾರದ ವೀರ ಬಸವ ಸ್ವಾಮಿಗಳು ಇನ್ನುಳಿದ ಹರಗುರು ಚರಮೂರ್ತಿಗಳು ಸಾನಿಧ್ಯವಹಿಸಿದ್ದರು.
ನಗರ ಶಾಸಕ ಜಿ.ವಿ.ಜ್ಯೋತಿಗಣೇಶ್, ಮಾಜಿ ಸಚಿವ ಶಿವಣ್ಣ, ಸಮಾಜದ ಅಧ್ಯಕ್ಷರಾದ ಕೋರಿ ಮಂಜುನಾಥ್, ಉಪಾಧ್ಯಕ್ಷ ಟಿ.ಬಿ.ಹರೀಶ್, ಕಾರ್ಯದರ್ಶಿ ಶಶಿಧರನ್, ಖಜಾಂಚಿ ಜಿ.ಕೆ.ಸ್ವಾಮಿ, ವೀರಶೈವ ಸಹಕಾರ ಬ್ಯಾಂಕ್ನ ಅಧ್ಯಕ್ಷ ಟಿ.ಜೆ.ರುದ್ರಪ್ಪ, ಉಪಾಧ್ಯಕ್ಷ ಮಲ್ಲಿಕಾರ್ಜುನ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಅಧ್ಯಕ್ಷ ಡಾ.ಪರಮೇಶ್, ಕೆ.ಎನ್.ದರ್ಶನ್, ಚಂದ್ರಶೇಖರ್, ಮನುಹರಳು, ಟಿ.ಆರ್.ಸದಾಶಿವಯ್ಯ ಹಾಗೂ ವೀರಶೈವ ಸಮಾಜದ ಅಂಗಸAಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹಲವು ಕಲಾ ತಂಡಗಳು ಈ ಉತ್ಸವದಲ್ಲಿ ಪಾಲ್ಗೊಂಡಿದ್ದರು.
