ತುಮಕೂರು ಜಿಲ್ಲೆ ಪರಿಶಿಷ್ಟ ಜಾತಿ/ ಪಂಗಡಗಳ ಸಂಶೋಧನೆ ಬಿಡುಗಡೆ ಮತ್ತು ಸಮಾಲೋಚನೆ
ಇಂದು ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಪರ್ಯಾಯ ಕಾನೂನು ವೇದಿಕೆ ವತಿಯಿಂದ ವಿಶ್ವಗುರು ಬಸವಣ್ಣನವರ ೮೯೫ನೇ ಮತ್ತು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ೧೩೫ನೇ ಹಾಗೂ ಡಾ, ಬಾಬು ಜಗಜೀವನ್ರಾಂ ರವರ ೧೧೯ನೇ ಜನುಮ ದಿನಾಚರಣೆಯ ಅಂಗವಾಗಿ ತುಮಕೂರು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ/ಪಂಗಡ ಸಮುದಾಯಕ್ಕೆ ಸೇರಿದ ಕಾನೂನುಗಳ ಅನುಷ್ಠಾನ ಕುರಿತ ಸಂಶೋಧನಾ ವರದಿ ಬಿಡುಗಡೆ ಮತ್ತು ಸಮಾಲೋಚನಾ ಸಭೆಯನ್ನು ನಗರದ ಸಮೃದ್ಧಿ ಗ್ರಾಂಡ್ ಹೋಟೆಲ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ರಾಜ್ಯಕ್ಕೆ ಭೂ ಮಂಜೂರಾತಿ ಮತ್ತು ಸುಧಾರಣೆ ಕಾಯಿದೆಗಳ ಜಾರಿಯಲ್ಲಿ ತುಮಕೂರು ಮಾಧರಿಯಾಗಿದೆ
ಜಾತಿ ಧೌರ್ಜನ್ಯ ಮತ್ತು ಪಿಟಿಸಿಎಲ್ ಕಾಯಿದಗೆ ಜಾರಿಗೆ ಕೆಳ ಹಂತದಲ್ಲಿ ಸೋಲು ಜಿಲ್ಲೆಗೆ ಸಂಬAಧಿಸಿದ ಶಿಫಾರಸ್ಸುಗಳ ಅಳವಡಿಕೆಗೆ ಸಭೆ – ಎಡಿಸಿ ಡಾ.ಎನ್ ತಿಪ್ಪೇಸ್ವಾಮಿ.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ತುಮಕೂರು ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಡಾ.ಎನ್ ತಿಪ್ಪೇಸ್ವಾಮಿ ತುಮಕೂರು ಜಿಲ್ಲೆಯಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಪರ್ಯಾಯ ಕಾನೂನು ವೇಧಿಕೆಯಿಂದ ಎಸ್ಸಿ/ಎಸ್ಟಿ ಧೌರ್ಜನ್ಯ ತಡೆ ಕಾಯಿದೆ -೧೯೮೯ ಕರ್ನಾಟಕ ಭೂ ಕಂದಾಯ ಕಾಯಿದೆ ಮತ್ತು ಸುಧಾರಣ ಕಾಯಿದೆ ೧೯೬೪ ಹಾಗೂ ಮ್ಯಾನ್ಯವಲ್ ಸ್ಕಾö್ಯವೆಂರ್ಸ್ಗಳ ನೇಮಕಾತಿ ನಿಷೇಧ ಮತು ಪುನರ್ ವಸತಿ ಕಾಯಿದೆ- ೨೦೧೩ರ ಅನುಷ್ಠಾನ ಕುರಿತು ಕೈಗೊಂಡ ಸಮೀಕ್ಷೆ ಜಿಲ್ಲೆಯಲ್ಲಿ ರ್ಯಾಂಡಮ್ ಆಗಿ ಮಾಡಿದ್ದು ವಾಸ್ತವ ವ್ಯವಸ್ಥೆಯನ್ನು ವರದಿಯಲ್ಲಿ ವಿಶ್ಲೇಷಿಸಬೇಕಿದೆ ಆದರೂ ಈ ಸಮೀಕ್ಷೆ ಜಿಲ್ಲೆ ಮತ್ತು ರಾಜ್ಯದ ಇತರೆ ಜಿಲ್ಲೆಗಳಲ್ಲಿರುವ ಪರಿಶಿಷ್ಟ ಜಾತಿಯ ಮತ್ತು ಪಂಗಡಗಳ ಕಲ್ಯಾಣಕ್ಕೆ ಸಂಬAಧಿಸಿದ ಕಾನೂನುಗಳ ಅನುಷ್ಠಾನ ಕುರಿತು ಅವಲೋಕಿಸಿರುವುದು ಪ್ರಜ್ಞಾವಂತರನ್ನು ಎಚ್ಚರಿಸಿದೆ ಪ್ರಮುಖವಾಗಿ ಎಸ್ಸಿ/ಎಸ್ಟಿ ಜನರು ಭೂ ಮಂಜೂರಾತಿ ಅಥವಾ ಸುಧಾರಣೆಯಲ್ಲಿ ಭೂಮಿ ಪಡೆಯಬೇಕಾದರೆ ದಾಖಲಾಯಿಗಳ ಕೊರತೆ ಎದ್ದು ಕಾಣುತ್ತದೆ. ಜೊತೆಗೆ ಮೇಲಹಂತದಲ್ಲಿ ನಮ್ಮಿಂದ ದೊರೆಯುವ ಸ್ಪಂಧನೆ ಕೆಳಹಂತದಲ್ಲಿ ದೊರೆಯುವುದಿಲ್ಲ. ಇದರಿಂದ ನಮ್ಮ ಜನರಿಗೆ ಸೋಲಾಗುತ್ತಿದೆ. ಇದಕ್ಕೆ ಕಾರಣಗಳನ್ನು ಹುಡುಕಬೇಕಾಗಿದೆ. ಆದರೆ ಕಳೆದ ಒಂದುವರೆ ವರ್ಷಗಳಿಂದ ಜಿಲ್ಲೆಯಲ್ಲಿ ನಾನು ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು ಕಂದಾಯ ಗ್ರಾಮ, ಪೋಡಿ, ಮುಕ್ತ ಗ್ರಾಮ, ಪೌತಿ ವಾರಸುದಾರಿಕೆ, ೯೪ಸಿ/೯೪ಸಿಸಿ ಮತ್ತು ಭೂ ಒಡೆತನ ಯೋಜನೆಗಳು ಕಾಯಿದೆಗಳ ನಿಯಮಗಳ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯಕ್ಕೆ ತುಮಕೂರು ಜಿಲ್ಲೆ ಮೊದಲ ಸ್ಥಾನದಲ್ಲಿ ಮಾಧರಿಯಾಗಿದೆ. ಪರಿಶಿಷ್ಟ ಜಾತಿ/ಪಂಗಡಗಳ ಧೌರ್ಜನ್ಯತಡೆ ಕಾಯಿದೆಗಳಲ್ಲಿ ಜಿಲ್ಲೆಯಲ್ಲಿ ದಾಖಲಾಗಿರುವ ಪ್ರಕರಣಗಳ ಶಿಕ್ಷೆ ಪ್ರಮಾಣ ಕಡಿಮೆ ಯಾಗಲು ಸಾಕ್ಷಿಗಳ ಕೊರತೆ ಐಒ ಗಳ ಬದ್ದತೆ ದೂರುದಾರರು ಮೊದಲಿದ್ದ ಉತ್ಸಾಹ ದಿನಂಪ್ರತಿ ಕಡಿಮೆಯಾಗುವುದು ಜೊತೆಗೆ ಸಾಕ್ಷಿಗಳ ನಾಶ ಎಫ್.ಐ.ಆರ್ ನಲ್ಲಿ ಸರಿಯಾಗಿ ದಾಖಲಿಸದೇ ಇರುವುದು ಸಹಾ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಜಿಲ್ಲಾ ಮೇಲುಸ್ತುವಾರಿ ಸಮಿತಿಯು ಕ್ರಮ ಬದ್ಧವಾಗಿ ಸಭೆಯನ್ನು ತೆಗೆದುಕೊಂಡು ಹೋದರೆ ಪ್ರಕರಣಗಳಲ್ಲಿ ನೊಂದವರಿಗೆ ನ್ಯಾಯ ಸಿಗಲು ಸಾಧ್ಯ ಇದಾಗದಿದ್ದಾಗ ಅಪರಾಧಿಗಳು ಖುಲಾಸೆ ಯಾಗುತ್ತಾರೆ ಇದಕ್ಕೆ ನಮ್ಮ ಜನರಲ್ಲಿ ಕಾನೂನಿನ ತಿಳುವಳೀಕೆ ಇಲ್ಲದಿರುವುದು ಹಾಗೂ ಜಾತಿ ಆಧಾರತಿ ವ್ಯವಸ್ಥೆ ನಮ್ಮದಾಗಿದೆ.
ಮ್ಯಾನ್ಯವೆಲ್ ಸ್ಕಾö್ಯವೆಂರ್ಸ್ಗಳ ನಿಷೇಧ ಮತ್ತು ಪುನರ್ವಸತಿ ಸಮೀಕ್ಷೆಯ ಲೋಪದೋಶ ಸೇರಿದಂತೆ ಜಿಲ್ಲೆಗೆ ಸಂಬAಧಿಸಿದ ಈ ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಿರುವ ಶಿಫಾರಸ್ಸುಗಳು ಸಾಮಾನ್ಯವಾಗಿದ್ದು ಜಿಲ್ಲೆಗೆ ಸಂಬAಧಿಸಿದAತ ಪಿಟಿಸಿಎಲ್ ಮಂಜೂರಿದಾರರ ಮೇಲ್ಮನವಿಗಳನ್ನು ನಿಗದಿತ ಕಾಲಮಿತಿಯಲ್ಲಿ ಇತ್ಯರ್ಥಗೊಳಿಸುವುದು ಸೇರಿದಂತೆ ಈಗಾಗಲೇ ಮ್ಯಾನ್ಯವೆಲ್ ಸ್ಕಾö್ಯವೆಂರ್ಸ್ಗಳ ಸಮೀಕ್ಷೆಯಲ್ಲಿ ಗುರುತಿಸಿಕೊಂಡಿರುವ ಸಫಾಯಿಕರ್ಮಚಾರಿಗಳಿಗೆ ಉದ್ಯೋಗ ಮತ್ತು ಪುನರ್ವಸತಿಗೆ ಸಂಬAಧಿಸಿದ ನಿರ್ಧಿಷ್ಠ ಶಿಫಾರಸ್ಸುಗಳು ಹಾಗೂ ಇನ್ನಿತರೆ ಅಂಶಗಳ ಬಗ್ಗೆ ಚರ್ಚಿಸಲು ಜಿಲ್ಲಾಡಳಿತದಿಂದ ಸಭೆ ಕರೆದು ಕಾನೂನುಗಳ ಅನುಷ್ಠಾನಕ್ಕೆ ಕ್ರಮವಹಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಕಳೆದ ೨೦೨೪-೨೫ನೇ ಸಾಲಿನಲ್ಲಿ ತುಮಕೂರು ಜಿಲ್ಲೆಯಲ್ಲಿ ಸಂಶೋಧನೆ ಕೈಗೊಂಡ ಮುಖ್ಯಾಂಶಗಳ ಬಗ್ಗೆ ಸಂಶೋಧಕರಾದ ಡಾ.ಸಿದ್ದಾರ್ಥ್ ಜೋಶಿ, ವಿಶ್ಲೇಷಿತ ವರದಿಯನ್ನು ಮಂಡಿಸಿದರು. ಅದರಂತೆ ತುಮಕೂರಿನಲ್ಲಿ ಭೂ ರಹಿತ ಎಸ್ಸಿ/ಎಸ್ಟಿಗಳ ಪ್ರಮಾಣ ೨೬೦ ಕುಟುಂಬಗಳಲ್ಲ ಸಂಶೋಧನೆ ಮಾಡಿದಾಗ ಭೂ ಮಾಲಿಕರು ಶೇ. ೭೫.೫೮% ರಷ್ಟು ಎಸ್ಸಿ ಕುಟುಂಬಗಳಿದ್ದರೇ, ಭೂ ರಹಿತರು ೨೪.೪೨% ರಷ್ಟಿದೆ. ಭೂಮಿಯ ಮೂಲ ನೋಡಿದರೆ ಪಿತ್ರಾರ್ಜಿತವಾಗಿ ೭೫ ರಷ್ಟು ಸ್ವಾಯಾರ್ಜಿತವಾಗಿ ೭ ರಷ್ಟು, ಇನಾಮ್ ನಲ್ಲಿ ೩.೫%. ಬಕಹುಕುಂ ನಲ್ಲಿ ೧೧.೮೪%, ಭೂ ಕಂದಾಯ ಕಾಯಿದೆಯಲ್ಲಿ .೦.೩೯%, ಸರ್ಕಾರಿ ಯೋಜನೆಗಳಲ್ಲಿ ೦.೨೪%, ಇತರೆ ೧.೭೭% ಇದೆ. ಪಿಟಿಸಿಎಲ್ ಕಾಯಿದೆಯಲ್ಲಿ ಭೂಮಿಯ ಮೂಲ ೫೦% ರಷ್ಟು ಇನಾಮು ಭೂಮಿಯದ್ದಾಗಿದ್ದರೆ, ದರಾಕಸ್ತು/ಬಕರ್ಹುಕುಂ ೧೬.೭% ಇದೆ ಭೂ ಕಂದಾಯ ಕಾಯಿದೆಯಲ್ಲಿ ೭.೧% ಪಿತ್ರಾರ್ಜಿತ ೧೪.೩% ಸರ್ಕಾರಿ ಯೋಜನೆಗಳಲ್ಲಿ ೪.೮% ಇದ್ದು ಈ ಕಾಯಿದೆಯಡಿಯಲ್ಲಿ ಎಸಿ ಮತ್ತು ಡಿಸಿ ನ್ಯಾಯಲಯಗಳಲ್ಲಿ ಅರ್ಜಿಗಳ ಮೇಲ್ಮನವಿ ವಿಲೇವಾರಿಗೆ ತೆಗೆದುಕೊಂಡ ಸಮಯ ಸರಾಸರಿ ೩ ರಿಂದ ೧೦ ವರ್ಷಗಳಾಗಿವೆ, ಇನ್ನು ಜಿಲ್ಲೆಯಲ್ಲಿ ಗುಬ್ಬಿ ಪಟ್ಟಣದ ಶೌಚಾ ನೈರ್ಮಲ್ಯದ ಸ್ಥಿತಿಗತಿಗಳಲ್ಲಿ ೨೩.೯೮% ಶೌಚಾಲಯ ಇಲ್ಲ, ಹಾಗೂ ಜಿಲ್ಲೆಯಲ್ಲಿ ೧.೧೫ ಲಕ್ಷ ಶೌಚಾಲಯಗಳಿದ್ದು ಸ್ವಯಂ ಘೋಷಿತವಾಗಿ ೧೫೭ ಜನರು ಮಾತ್ರ ಸಫಾಯಿ ಕರ್ಮಚಾರಿಗಳನ್ನು ಗುರುತಿಸಲಾಗಿದೆ. ಹಾಗಾಗಿ ಒಟ್ಟಾರೆ ಶಿಫಾರಸ್ಸುಗಳನ್ನು ನಾವು ಈ ವರದಿಯಲ್ಲಿ ನೀಡಿದ್ದು ಮ್ಯಾನುವೆಲ್ ಸ್ಕಾö್ಯವೆಂರ್ಸ್ಗಳಲ್ಲಿ ಗುರುತಿಸಲಾಗಿ ೧ ವರ್ಷದ ಅವಧಿಯಲ್ಲಿ ಪುನರ್ ವಸತಿ ಕಲ್ಪಿಸಬೇಕು. ಕರ್ನಾಟಕ ಭೂ ಸುಧಾರಣಾ ಕಾಯಿದೆ ೧೯೬೧ ರ ಪ್ರತಿ ಗ್ರಾಮ ಮತ್ತು ತಾಲ್ಲೂಕಿನಲ್ಲಿ ಮಂಜೂರು ಮಾಡಬೇಕಾದ ಭೂಮಿಯಲ್ಲಿ ಕನಿಷ್ಠ ೫೦ ಎಸ್ಸಿ/ಎಸ್ಟಿಗಳಿಗೆ ಮಂಜೂರು ಮಾಡಲಾಗಿದೆಯೇ ಎಂದು ಖಾತ್ರಿಪಡಿಸಿ ೭೫% ಕ್ಕೆ ಹೆಚ್ಚಿಸಬೇಕು. ಕರ್ನಾಟಕ ಭೂ ಕಂದಾಯ ಕಾಯಿದೆ ೧೯೬೪ ಮತ್ತು ನಿಯಮ ೧೯೬೯ ಈಗಾಗಲೇ ಜಿಲ್ಲೆಯಲ್ಲಿ ನಮೂನೆ ೫೦.೫೩.೫೭ ರಲ್ಲಿ ಸಲ್ಲಿಸಲಾದ ಅರ್ಜಿಗಳ ವಿಲೇವಾರಿ ೧ ವರ್ಷದ ಕಾಲಮಿತಿ ಮಾಡಬೇಕು ಪಿಟಿಸಿಎಲ್ ೧೯೭೮ ರಡಿಯಲ್ಲಿ ಎಸಿ ಮಾತ್ತು ಡಿಸಿ ನ್ಯಾಯಲಯಗಳಲ್ಲಿ ೫ಎ ರಡಿಯಲ್ಲಿ ಸಲ್ಲಿಸಲಾದ ಅರ್ಜಿ ಮತ್ತು ಮೇಲ್ಮನವಿಗಳನ್ನು ೧ ವರ್ಷದ ಅವಧಿಯಲ್ಲಿ ವಿಲೇವಾರಿ ಮಾಡಲು ಮುಂದಾಗಬೇಕು. ಹೀಗೇ ಹಲವಾರು ಶಿಫಾರಸ್ಸುಗಳನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದರು.
ಹೋರಾಟಗಾರರಿಗೆ ಕಾನೂನುಗಳ ತಿಳುವಳಿಕೆ ಬೇಕು – ಕೆ.ದೊರೈರಾಜ್
ಸಭೆಯಲ್ಲಿ ವರದಿ ಮತ್ತು ಶಿಫಾರಸ್ಸುಗಳ ಮೇಲೆ ತಮ್ಮ ಪ್ರತಿಕ್ರಿಯೆ ನೀಡಿದ ಜಿಲ್ಲೆಯ ಹಿರಿಯ ಚಿಂತಕರಾದ ಕೆ ದೊರೈರಾಜು ಎಸ್ಸಿ/ಎಸ್ಟಿ ಧೌರ್ಜನ್ಯ ತಡೆ ಕಾಯಿದೆ. ಸಫಾಯಿ ಕರ್ಮಚಾರಿಗಳ ಸಮೀಕ್ಷೆಯಲ್ಲಿ ಸಂಘಟನೆಯ ನಾಯಕರು ಶಿಸ್ತನ್ನು ರೂಪಿಸಿಕೊಳ್ಳಬೇಕು ಆಡಳಿತಾತ್ಮಕ ವ್ಯವಸ್ಥೆಯಲ್ಲಿ ನಾವು ಯಾವ ರೀತಿ ಟ್ಯಾಕಲ್ ಮಾಡಬೇಕೆಂದು ಮೈಗೂಡಿಸಿಕೊಳ್ಳಬೇಕು. ಅಂದರೆ ಒಂದು ಸಂಘಟನೆ ಒಂದು ಕಛೇರಿಯ ವ್ಯವಸ್ಥೆಯನ್ನೇ ಅಳವಡಿಸಿಕೊಳ್ಳಬೇಕು. ಮೊದಲು ಸೂಕ್ಷö್ಮ ಸಂವೇದಿ ಆಡಳಿತ ವ್ಯವಸ್ಥೆ ಇತ್ತು ಈಗ ಅಂತಹ ಆಡಲಿತ ವ್ಯವಸ್ಥೆ ಇಲ್ಲ ವಾಸ್ಥವವಾಗಿ ಜಿಲ್ಲೆಯಲ್ಲಿ ಕೈಗೊಂಡ ಈ ಸಮೀಕ್ಷಾ ತಂಡಕ್ಕೆ ಅಭಿನಂದನೆಗಳು, ಏಕೆಂದರೇ ನೈಜವಾದ ಅಂಕಿಅAಶಗಳನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೋರಾಟಕ್ಕೆ ಶಕ್ತಿ ನೀಡಲು ಇಂತಹ ಅಂಕಿಅAಶಗಳು ಅಗತ್ಯವಿದೆ. ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾದ ರಾಜಕೀಯ ವ್ಯವಸ್ಥೆಯನ್ನು ವೈಧಿಕ ಮನೋಭೂಮಿಕೆಯಲ್ಲಿ ಜನಪ್ರತಿನಿಧಿಗಳ ಕಾರ್ಯನಿರ್ವಹಿಸುತ್ತಿದ್ದರೆ ಬದಲಾದ ಸಾಮಾಜಿಕ ವ್ಯವಸ್ಥೆ ಮನುವಾದ ಇಡೀ ಪ್ರಭುತ್ವವೇ ಕಾನೂನು ಹಾದಿಯಲ್ಲಿ ಸೋಲುವಂತೆ ಮಾಡಿ ಕೆಳ ಜಾತಿ ಜನರಿಗೆ ಭೂಮಿ ದಕ್ಕದಂತೆ ಮಾಡಲಾಗಿದೆ. ೩ನೇಯದಾಗಿ ಆರ್ಥಿಕ ವ್ಯವಸ್ಥೆ ಬಂಡವಾಳ ಶಾಹಿಗಳಿಗೆ ಅನುಕೂಲವಾಗುವಂತೆ ಆಡಳಿತ ವ್ಯವಸ್ಥೆಯನ್ನು ರೂಪಿಸಲಾಗಿದೆ. ಆದ್ದರಿಂದ ಈ ಸಾಮಾಜಿಕ ವ್ಯವಸ್ಥೆಯನ್ನು ಮಣಿಸಲು ನಮ್ಮ ನಿರಂತರ ಪ್ರಯತ್ನ ಇರಬೇಕು. ಇದರಿಂದ ಸಾಮಾಜಿಕ ನ್ಯಾಯ ಮತ್ತು ಬದಲಾವಣೆಗೆ ದಾರಿಯಾಗುತ್ತದೆ ಈಗೀನ ಸಂದರ್ಭದಲ್ಲಿ ಎಸ್ಸಿ/ಎಸ್ಟಿಗಳ ಧೌರ್ಜನ್ಯ ಪ್ರಕರಣಗಳು ಪಿಟಿಸಿಎಲ್ ಲ್ಯಾಂಡ್. ಇನಾಮ್ ಲ್ಯಾಂಡ್ ರಾಜಕಾರಣಿಗಳಿಗೆ ಗೋಲ್ಡನ್ ಕೇಕ್ ಆಗಿದ್ದು ಹೋರಾಟಗಾರರು ತಮ್ಮ ಹೋರಾಟಗಳ ತಂತ್ರಗಳನ್ನು ಇದಕ್ಕನುಗುಣವಾಗಿ ಬದಲಾಯಿಸಿಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಧುಗಿರಿ ಉಪವಿಭಾಗಧಿಕಾರಿಗಳಾದ ಗೋಟೂರು ಶಿವಪ್ಪ ಪಾಲ್ಗೊಂಡಿದ್ದರು. ಸಮೀಕ್ಷಾ ವರದಿಗೆ ಪ್ರತಿಕ್ರಿಯಿಸಿ ಹಿರಿಯರಾದ ನರಸೀಯಪ್ಪ. ಬೆಲ್ಲದಮಡು ಕೃಷ್ಣಪ್ಪ, ಎ.ನರಸಿಂಹಮೂರ್ತಿ, ಕೊಟ್ಟಶಂಕರ್, ಅನುಪಮಾ, ದೀಪಿಕಾ, ಚೋಳೂರು ಶಿವನಂಜಪ್ಪ, ಭರತ್ಬೆಲ್ಲದಮಡು, ರೆಡ್ಸ್ ರಂಗಯ್ಯ, ಮೇಲುಸ್ತುವಾರಿ ಸಮಿತಿಯ ರಂಜನ್, ಕೊಳಗೇರಿ ಸಮಿತಿಯ ಅರುಣ್. ತಿರುಮಲಯ್ಯ, ಕೃಷ್ಣಮೂರ್ತಿ. ಪಿ.ಎನ್ ರಾಮಯ್ಯ ಹಾಗೂ ಹಲವು ಪ್ರಕರಣಗಳ ಸಂತ್ರಸ್ಥರು ಮಾತನಾಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ವಕೀಲರಾದ ಎಸ್.ಶಿವಣ್ಣ, ಸ್ವಾಗತ್ವನ್ನು, ಹೈಕೋರ್ಟ್ ವಕೀಲರಾದ ವಿನಯ್ಶ್ರೀನಿವಾಸ್, ವಂದನಾರ್ಪಣೆಯನ್ನು ಮನೋಜ್ಕುಮಾರ್,ನೆರವೇರಿಸಿದರು. ಸಮಾಲೋಚನ ಸಭೆಯಲ್ಲಿ ಜಿಲ್ಲೆಯ ಎಸ್ಸಿ/ಎಸ್ಟಿ ಧೌರ್ಜನ್ಯ ತಡೆ ಕಾಯಿದೆಯ ಬಾದಿತರು/ಸಂತ್ರಸ್ಥರು ಪಿಟಿಸಿಎಲ್ ಕಾಯಿದೆ ಸಂತ್ರಸ್ಥರು. ಡಿಎಸ್ಎಸ್ ಸಂಘಟನೆಯ ಮುಖಂಡರು, ಸಾವಿತ್ರಿ ಬಾಯಿಪುಲೆ ಮತ್ತು ಸ್ಲಂ ಸಮಿತಿಯ ಮುಖಂಡರು, ಪಾಲ್ಗೊಂಡಿದ್ದರು.
