ಶ್ರೀದೇವಿ ಅಲೈಡ್ ಹೆಲ್ತ್ ವಿಜ್ಞಾನ ಸಂಸ್ಥೆಯ ವತಿಯಿಂದ ಮಲೇಷಿಯಾದಲ್ಲಿ ಗ್ಲೋಬಲ್ ಹೆಲ್ತ್ ಕನೆಕ್ಟ್-2026 ಸಮ್ಮೇಳನ
ತುಮಕೂರು-ಶ್ರೀದೇವಿ ಚಾರಿಟಬಲï ಟ್ರಸ್ಟಿನ ಆಶ್ರಯದಲ್ಲಿ ಶ್ರೀದೇವಿ ಅಲೈಡ್ ಹೆಲï್ತ ಸೈನ್ಸಸ್ (SIAHS) ಸಂಸ್ಥೆಯು ಗ್ಲೋಬಲï ಹೆಲï್ತಕೇರ್ ಮತ್ತು ವೈದ್ಯಕೀಯ ವಿಜ್ಞಾನದ ಮೊಟ್ಟ ಮೊದಲ ಅಂತಾರಾಷ್ಟ್ರೀಯ ‘ಗ್ಲೋಬಲï ಹೆಲï್ತ ಕನೆಕ್ಟ್-2026’ ಸಮ್ಮೇಳನವನ್ನು ಮಲೇಶಿಯಾದ ಒಂಊSಂ ವಿಶ್ವವಿದ್ಯಾಲಯದಲ್ಲಿ 2026ರ ಏಪ್ರಿಲ 3ರಿಂದ 5ರವರೆಗೆ ನಡೆಯಲಿದೆ ಎಂದು ಶ್ರೀದೇವಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ತಿಳಿಸಿದ್ದಾರೆ.
ನಗರದ ಶಿರಾರಸ್ತೆಯ ಶ್ರೀದೇವಿ ಅಲೈಡ್ ಹೆಲï್ತ ಸೈನ್ಸಸ್ ಸಂಸ್ಥೆ ಹಾಗೂ ಮಲೇಷಿಯಾ ((MAHSA) ವಿಶ್ವವಿದ್ಯಾನಿಲಯ ಗ್ಲೋಬಲï ಹೆಲï್ತಕೇರ್ ಮತ್ತು ವೈದ್ಯಕೀಯ ವಿಜ್ಞಾನದ ಮೊಟ್ಟ ಮೊದಲ ಅಂತಾರಾಷ್ಟ್ರೀಯ ‘ಗ್ಲೋಬಲï ಹೆಲï್ತ ಕನೆಕ್ಟ್-2026’ ಕುರಿತು ಮಾರ್ಚ್ 30 ರಂದು ಸೋಮವಾರ ಬೆಳಿಗ್ಗೆ 10 ಗಂಟೆಗೆ ಪ್ರತಿಕಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.
ಪ್ರತಿಕಾಗೋಷ್ಠಿಯಲ್ಲಿ ಡಾ.ಎಂ.ಆರ್.ಹುಲಿನಾಯ್ಕರ್ರವರು ಮಾತನಾಡುತ್ತಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಲೈಡ್ ಹೆಲ್ತ್ ಸೈನ್ಸ್ಗೆ ಹೆಚ್ಚುತ್ತಿರುವ ಬೇಡಿಕೆ ಮತ್ತು ಮಾನ್ಯತೆ ಮತ್ತು ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದೆ. ಇದರಲ್ಲಿ ಶ್ರೀದೇವಿ ವಿದ್ಯಾಸಂಸ್ಥೆಯ 22 ವಿದ್ಯಾರ್ಥಿಗಳು, 23 ಬೋಧಕ ವರ್ಗದವರು ಹಾಗೂ 19 ತಾಂತ್ರಿಕ ಸಿಬ್ಬಂದಿ ಸೇರಿದಂತೆ ಒಟ್ಟು 64 ಸದಸ್ಯರನ್ನು ಒಳಗೊಂಡ ಬೋಧನೆ ಮತ್ತು ತಾಂತ್ರಿಕ ನಿಯೋಗ ಸಮ್ಮೇಳನದಲ್ಲಿ ಭಾಗವಹಿಸುತ್ತಿದೆ. ಆರೋಗ್ಯ ಸೇವೆ ಮತ್ತು ಮೆಡಿಕಲ್ ಸೈನ್ಸ್ ಮತ್ತು ಜಾಗತಿಕ ಸಹಯೋಗ ಉತ್ತೇಜಿಸುವುದು, ಅಲೈಡ್ ಆರೋಗ್ಯ ವಿಜ್ಞಾನದ ವಿವಿಧ ಶಾಖೆಗಳಲ್ಲಿ ನಡೆಯುತ್ತಿರುವ ಸಂಶೋಧನೆಗಳ ನಡುವೆ ಸಮನ್ವಯ ಸಾಧಿಸುವುದು, ವಿಶ್ವದಲ್ಲಿರುವ ವಿವಿಧ ಸಂಸ್ಥೆಗಳ ನಡುವಣ ಶ್ಯೆಕ್ಷಣಿಕ ಸಂಬಂಧಗಳನ್ನು ಬ¯ಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ವೈದ್ಯರಲ್ಲಿ ವೃತ್ತಿ ನೈಪುಣ್ಯತೆ, ವೈದ್ಯಕೀಯ ಶಿಕ್ಷಣ ಮುಂದುವರೆಸಬೇಕು ಎಂಬ ಅಭಿಲಾಷೆ ಹೊಂದಿರುವ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೇದಿಕೆಯನ್ನು ಸದುಪಯೋಗ ಪಡಿಸಿಕೊಳ್ಳಲು, ಭವಿಷ್ಯದ ದಾರಿ ಕಂಡುಕೊಳ್ಳಲು ಈ ಸಮ್ಮೇಳನ ತುಂಬಾ ಸಹಕಾರಿಯಾಗಲಿದೆ. ಶ್ರೀದೇವಿ ಕಾಲೇಜಿನಲ್ಲಿ 1200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಲೈಡ್ ಸೈನ್ಸ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 11 ಪಿಎಚ್ಡಿ ಕೋರ್ಸ್ಗಳು ಮತ್ತು 8 ಎಂ.ಎಸ್.ಸಿ ಕೋರ್ಸ್ಗಳ ಕಾಲೇಜಿನಲ್ಲಿ ಲಭ್ಯವಿದೆ. ರಾಜ್ಯದಲ್ಲಿ ಹೆಚ್ಚು ಅಲೈಡ್ ಸ್ಯೆನ್ಸ್ ಕೋರ್ಸಗಳನ್ನು ಹೊಂದಿರುವ ಏಕೈಕ ಕಾಲೇಜು ನಮ್ಮದಾಗಿದೆ ಎಂದರು.
ವಿವಿಧ ವಿಷಯಗಳ ಮೇಲೆ ತಜ್ಞರಿಂದ ಭಾಷಣ, ಸಂಶೋಧನಾ ಪ್ರಬಂಧ ಮಂಡನೆ, ಪರಸ್ಪರ ವಿಚಾರ ವಿನಿಮಯ ನಡೆಯಲಿದ್ದು ಭಾರತ – ಮಲೇಶಿಯಾ ಹಾಗೂ ಕಿರಿಗಿಸ್ತಾನ್ ಇತರೆÀ ದೇಶಗಳ ತಜ್ಞರು ಭಾಗವಹಿಸಿ ತಮ್ಮ ಅನುಭವ ಧಾರೆ ಎರೆಯಲಿದ್ದಾರೆ ರಾಜ್ಯ ಅಲೈಡ್ ಹೆಲ್ತ್ ಸೈನ್ಸ್ ಪ್ರೊಪೆನಲ್ ಕೌನ್ಸಿಲ್ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ಫರೀದ್ ಸಮ್ಮೇಳನದ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಏ.೩ ರಿಂದ ೫ರವರೆಗೆ ಮೂರು ದಿನಗಳ ಸಮ್ಮೇಳನ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ, ಹೊಸ ಆವಿಷ್ಕಾರ ಮತ್ತು ಸಂಶೋಧನೆಗೆ ಉತ್ತಮ ವೇದಿಕೆಯಾಗಿ ಭವಿಷ್ಯದ ಸಮಾಜಕ್ಕೆ ಉಪಯುಕ್ತವಾಗಲಿದೆ. ಅಲೈಡ್ ಹೆಲ್ತ್ ಸೈನ್ಸ್ ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುತ್ತಿರುವ ಹೆಚ್ಚಿನ ಬೆಂಬಲ, ಪೋತ್ಸಾಹ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಕೋರ್ಸ್ಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ವ್ಯೆದ್ಯರಾಗಬೇಕು ಎಂಬ ಕನಸು ಹೊತ್ತವರ ಆಸೆ ಈಡೇರಿಸುವಲ್ಲಿ ಸಮ್ಮೇಳನ ಅತ್ಯಂತ ಪ್ರಯೋಜನಕಾರಿಯಾಗಲಿದೆ ಎಂಬ ಆಶಯವನ್ನು ಹುಲಿನಾಯ್ಕರ್ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಶ್ರೀದೇವಿ ಚಾರಿಟಬಲ್ ಟ್ರಸ್ಟ್ ನಿರ್ದೇಶಕರಾದ ಡಾ.ರಮಣ್ ಎಂ. ಹುಲಿನಾಯ್ಕರ್ರವರು ಮಾತನಾಡುತ್ತಾ ಈ ಸಮ್ಮೇಳನದಲ್ಲಿ ತುರ್ತು ಔಷಧಿಗಳು, ಹೃದ್ರೋಗ, ಅರಿವಳಿಕೆ ವಿಜ್ಞಾನ, ಮೆದುಳಿನ ಮಲೇರಿಯಾ, ರೋಗ ನಿಧಾನ, ಜೀವಕೋಶ ವಿಜ್ಞಾನ, ಕೃತಕ ಬುದ್ಧಿಮತ್ತೆ (AI) ಚಿಕಿತ್ಸಾ ವಿಧಾನ, ಮೊದಲಾದ ಅನೇಕ ವಿಷಯಗಳಲ್ಲಿ ಈ ಸಮ್ಮೇಳನ ಬೆಳಕು ಚೆಲ್ಲಲಿದೆ ಎಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ಶ್ರೀದೇವಿ ಚಾರಿಟಬಲ್ ಟ್ರಸ್ಟಿ ಹಾಗೂ ನೇತ್ರತಜ್ಞೆ ಡಾ.ಲಾವಣ್ಯ, ಶ್ರೀದೇವಿ ಅಲೈಡ್ ಹೆಲ್ಪ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಸಿ.ಕೃಷ್ಣ, ಉಪಪ್ರಾಂಶುಪಾಲ ಡಾ.ಸಿ.ಪಿ.ಚಂದ್ರಪ್ಪ ಮತ್ತು ಉಪನ್ಯಾಸಕಿ ಡಾ.ವಿ.ಪವಿತ್ರ, ಡಾ.ಎಸ್.ರಾಜಕುಮಾರ್, ಶ್ರೀದೇವಿ ಇಂಜಿನಿಯರ್ ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಡೀನ್ ಅಕಾಡೆಮಿಕ್ಸ್ ಡಾ.ಎನ್.ಚಂದ್ರಶೇಖರ್ ಉಪಸ್ಥಿತರಿದ್ದರು.
*ಫೋಟೋ ಕ್ಯಾಷ್ಷನ್:*
ನಗರದ ಶಿರಾರಸ್ತೆಯ ಶ್ರೀದೇವಿ ಅಲೈಡ್ ಹೆಲï್ತ ಸೈನ್ಸಸ್ (SIAHS)) ಸಂಸ್ಥೆಯು ಗ್ಲೋಬಲï ಹೆಲï್ತಕೇರ್ ಮತ್ತು ವೈದ್ಯಕೀಯ ವಿಜ್ಞಾನದ ಮೊಟ್ಟ ಮೊದಲ ಅಂತಾರಾಷ್ಟ್ರೀಯ ‘ಗ್ಲೋಬಲï ಹೆಲï್ತ ಕನೆಕ್ಟ್-2026’ ಸಮ್ಮೇಳನವನ್ನು ಮಲೇಶಿಯಾದ MAHSA ವಿಶ್ವವಿದ್ಯಾಲಯದಲ್ಲಿ ಕುರಿತು ಮಾರ್ಚ್ 30 ರಂದು ಸೋಮವಾರ ಬೆಳಿಗ್ಗೆ 10 ಗಂಟೆಗೆ ಪ್ರತಿಕಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ಚಿತ್ರದಲ್ಲಿ ಶ್ರೀದೇವಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್, ಶ್ರೀದೇವಿ ಚಾರಿಟಬಲ್ ಟ್ರಸ್ಟ್ ನಿರ್ದೇಶಕರಾದ ಡಾ. ರಮಣ್ ಎಂ. ಹುಲಿನಾಯ್ಕರ್, ಶ್ರೀದೇವಿ ಚಾರಿಟಬಲ್ ಟ್ರಸ್ಟಿ ಹಾಗೂ ನೇತ್ರತಜ್ಞೆ ಡಾ.ಲಾವಣ್ಯ, ಶ್ರೀದೇವಿ ಅಲೈಡ್ ಹೆಲ್ಪ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಸಿ.ಕೃಷ್ಣ, ಉಪಪ್ರಾಂಶುಪಾಲ ಡಾ.ಸಿ.ಪಿ.ಚಂದ್ರಪ್ಪ ಮತ್ತು ಉಪನ್ಯಾಸಕಿ ಡಾ.ಪವಿತ್ರ, ಡಾ.ರಾಜಕುಮಾರ್, ಶ್ರೀದೇವಿ ಇಂಜಿನಿಯರ್ ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಡೀನ್ ಅಕಾಡೆಮಿಕ್ಸ್ ಡಾ.ಎನ್.ಚಂದ್ರಶೇಖರ್ ಉಪಸ್ಥಿತರಿದ್ದರು.
