ತುಮಕೂರು ಗ್ರಾಮಾಂತರದ ಹಾಲುನೂರಿನ ಪ್ರಸಿದ್ಧ ಮಲ್ಲೇಶ್ವರಸ್ವಾಮಿಯ ಬ್ರಹ್ಮ ರಥೋತ್ಸವವು ವಿಜೃಂಭಣೆಯಿAದ ನೆರವೇರಿತು. ಸಹಸ್ರಾರು ಭಕ್ತರು ರಥೋತ್ಸವವಕ್ಕೆ ಹೂವು, ದವನ, ಬಾಳೆಹಣ್ಣು ಎಸೆದು ತಮ್ಮ ಇಸ್ಠಾರ್ಥ ಪಡೆದರು. ರಥೋತ್ಸವಕ್ಕೆ ಬೆಳ್ಳಾವಿಯ ಶ್ರೀ ಕಾರದ ವೀರಬಸವ ಸ್ವಾಮಿಗಳು ಚಾಲನೆ ನೀಡಿದರು. ದೇವಸ್ಥಾನದ ಅಧ್ಯಕ್ಷರಾದ ಹಾಲನೂರು ಲೇಪಾಕ್ಷಿ, ಆಗಮಿಕ ವೀರೇಶ್ ಕುಮಾರ್, ಹಾಲನೂರು ಅನಂತ್, ರೇಣುಕಪ್ರಸಾದ್ ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.
ತುಮಕೂರು ನಗರದಲ್ಲಿ ಭಗವಾನ್ ಮಹಾವೀರ ಜಯಂತಿ ಪ್ರಯುಕ್ತ ಶ್ವೇತಾಂಬರ ಜೈನ ಸಮುದಾಯದವರು ಭವ್ಯ ಮೆರವಣಿಗೆ ನಡೆಸಿದರು. ಶ್ವೇತಾಂಬರ ಸಮಾಜದ ಅಧ್ಯಕ್ಷ ಶಾಂತಿಲಾಲ್, ಉಪಾಧ್ಯಕ್ಷ ಸುರೇಶ್ ಷಾ, ಕಾರ್ಯದರ್ಶಿ ಭರತ್, ಖಜಾಂಚಿ ಮೋಹನ್ ಲಾಲ್, ಗೌರವಾಧ್ಯಕ್ಷ ಉತ್ತಮ್ ಕುಮಾರ್ ಸೇರಿದಂತೆ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು.
ತುಮಕೂರು ನಗರದಲ್ಲಿ ಭಗವಾನ್ ಮಹಾವೀರರ ಜಯಂತಿ ಅಂಗವಾಗಿ ದಿಗಂಬರ ಜೈನ ಸಮುದಾಯದವರು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ದಿಗಂಬರ ಸಮಾಜದ ಅಧ್ಯಕ್ಷ ಬಾಹುಬಲಿ, ಆರ್.ಜೆ.ಸುರೇಶ್ ಕುಮಾರ್, ಮಾಜಿ ಅಧ್ಯಕ್ಷ ನಾಗರಾಜ್, ವಿನಯ್ ಜೈನ್ ಸೇರಿದಂತೆ ಜೈನ ಸಮಾಜದ ಮುಖಂಡರುಗಳು ಉಪಸ್ಥಿತರಿದ್ದರು.
ಹಾಲುನೂರಿನ ಶ್ರೀ ಪಾರ್ವತಿ ಮಲ್ಲೇಶ್ವರಸ್ವಾಮಿ ಬ್ರಹ್ಮ ರಥೋತ್ಸವದಂದು ವಿಶೇಷವಾಗಿ ರುದ್ರಾಕ್ಷಿ ಅಲಂಕಾರ ಮಾಡಲಾಗಿತ್ತು. ದಿವ್ಯ ಸಾನಿಧ್ಯವನ್ನು ಕಾರದ ವೀರಬಸವ ಸ್ವಾಮಿಗಳು ವಹಿಸಿದ್ದರು. ಆಗಮಿಕ ವೀರೇಶ್ ಕುಮಾರ್, ಅರ್ಚಕರುಗಳು ಉಪಸ್ಥಿತರಿದ್ದರು.
