ತುಮಕೂರು : ಎಸ್.ಡಿ.ಪಿ.ಐ. ಪಕ್ಷದ ವತಿಯಿಂದ ತುಮಕೂರು ನಗರದ ಸಮಾವೇಶವನ್ನು ಜಿಲ್ಲೆಯ ನಾಯಕರು, ಕಾರ್ಯಕರ್ತರು ವತಿಯಿಂದ ಹಮ್ಮಿಕೊಳ್ಳಲಾಗಿದ್ದು, ಚುನಾವಣಾಧಿಕಾರಿಗಳಿಂದ ಎಸ್.ಐ.ಆರ್. ಅಭಿಯಾನ ಹಮ್ಮಿಕೊಂಡಿದ್ದು ಇದರಿಂದ ಸಾರ್ವಜನಿಕರಿಗೆ ಯಾವ ರೀತಿಯಾದ ತೊಂದರೆ ಆಗುತ್ತಿದೆ ಎಂಬುದಾಗಿ ಚರ್ಚಿಸಲಾಯಿತು ಎಂದು ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷರಾದ ಷಪೀವುಲ್ಲಾ ಖಾನ್ ತಿಳಿಸಿದರು.
ಎಸ್.ಐ.ಆರ್. ಮಾಡುವುದರಿಂದ ಬಡ ವರ್ಗದ ಜನರಿಗೆ, ಕೂಲಿ ಕಾರ್ಮಿಕರಿಗೆ, ಅನಕ್ಷರಸ್ಥರಿಗೆ, ದಲಿತ, ಬುಡಕಟ್ಟು ಮತ್ತು ಅಲ್ಪಸಂಖ್ಯಾತರಿಗೆ ಬಹಳ ತೊಂದರೆಯಾಗುತ್ತಿದೆ, ಏಕೆಂದರೆ ಚುನಾವಣಾಧಿಕಾರಿಗಳು ಕೇಳುತ್ತಿರುವ ದಾಖಲೆಗಳನ್ನು ಯಾವ ರೀತಿಯಾಗಿ ಒದಗಿಸಬೇಕು ಎಂಬುದನ್ನು ನಮ್ಮ ಕಾರ್ಯಕರ್ತರೊಂದಿಗೆ ಚರ್ಚಿಸಿ ಅದನ್ನು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು ತೆಗೆದುಕೊಂಡಿದ್ದೇವೆ, ಜೊತೆಗೆ ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ವೋಟ್ ಚೋರಿ ಮತ್ತು ಎಸ್.ಐ.ಆರ್. ಸರಿಯಿಲ್ಲ ಎಂಬುದರ ಬಗ್ಗೆ ಮಾತನಾಡುತ್ತೀರಾ ಆದರೆ ಕಾಂಗ್ರೆಸ್ ಪಕ್ಷದಿಂದ ರಾಹುಲ್ ಗಾಂಧಿಯವರು ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ ಏಕೆಂದರೆ ಎಸ್.ಐ.ಆರ್. ನಿಂದ ಜನರಿಂದ ಮತದಾನದ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದಾರೆ ಇದನ್ನು ತಡೆಯಬೇಕಾಗಿದೆಂದರು. ಈ ಪ್ರಕ್ರಿಯೆಯು ಸಂವಿಧಾನ ವಿರೋಧಿಯಾಗಿದ್ದು ಇದನ್ನು ವಿರೋಧಿಸಬೇಕಾಗಿದೆ, ಇದು ಜನರ ಪೌರತ್ವವವನ್ನೇ ಕಸಿದುಕೊಳ್ಳುವ ಹುನ್ನಾರವಾಗಿದೆ ಆ ಪ್ರಯುಕ್ತ ಜನರಲ್ಲಿ ನಾವು ಜಾಗೃತಿಗೊಳಿಸಲು ಮುಂದಾಗಿದ್ದೇವೆAದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ. ಉಪಾಧ್ಯಕ್ಷರುಗಳಾದ ಅಲೀಂ ಉಲ್ಲಾ ಮತ್ತು ಉಮೃದ್ದಿನ್, ಪ್ರಧಾನಕಾರ್ಯದರ್ಶಿ, ಚಾಂದ್ ಪಾಶ, ತುಮಕೂರು ನಗರ್ ಉಪಾಧ್ಯಕ್ಷರು ಝಬಿ ಉಲ್ಲಾ ಸೇರಿದಂತೆ ಅಪಾರ ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.
