ಭೌದ್ಧ ಭಿಕ್ಕುಗಳ ನೇತೃತ್ವದಲ್ಲಿ ಗಂಗಾAಬಿಕೆಯವರಿಗೆ ಪುಣ್ಯಾನುಮೋಧನೆ
ತುಮಕೂರು : ಶಿಕ್ಷಣ ಭೀಷ್ಮ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಗಳು ಹಾಗೂ ಶಿಕ್ಷಣ ಭೀಷ್ಮರೂ ಆದ ದಿವಂಗತ ಡಾ|| ಹೆಚ್.ಎಂ. ಗಂಗಾಧರಯ್ಯನವರ ಜೇಷ್ಠ ಪುತ್ರ ದಿವಂಗತ ಡಾ|| ಜಿ. ಶಿವಪ್ರಸಾದ್ ಇವರ ಧರ್ಮಪತ್ನಿ ಶ್ರೀಮತಿ ಗಂಗಾAಬಿಕೆ ಅವರ ಪುಣ್ಯಾರಾಧನೆಯು ಬೌದ್ಧ ಬಿಕ್ಕುಗಳ ಸಮಕ್ಷಮದಲ್ಲಿ ಬೌದ್ಧ ಧರ್ಮದ ವಿಧಿ ವಿಧಾನದಂತೆ ವೇದ ಮಂತ್ರ ಘೋಷಗಳೊಂದಿಗೆ ಭಾನುವಾರದಂದು ನಡೆಯಿತು
ನಗರದ ಸಮೀಪದ ಸಿದ್ಧಾರ್ಥನಗರದಲಿ “ಪುಣ್ಯಾರಾಧನಾ” ಕಾರ್ಯಕ್ರಮವನ್ನು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಕಾರ್ಯದರ್ಶಿಗಳು ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ , ಮೃತರ ಪುತ್ರರಾದ ಡಾ. ಜಿ.ಎಸ್. ಆನಂದ್ ಮತ್ತು ಪತ್ನಿ ಮಾಲಿನಿ ಸೇರಿದಂತೆ ಕುಟುಂಬಸ್ಥರು ನಡೆಸಿಕೊಟ್ಟರು. ಇದೇ ವೇಳೆ ಗಂಗಾAಬಿಕೆಯವರ ಸಮಾಧಿಗೆ ವಿಧಿ ವಿಧಾನಗಳ ಮೂಲಕ ಪುಷ್ಪನಮನ ಸಲ್ಲಿಸಲಾಯಿತು. ಅಲ್ಲದೆ ಪ್ರವಚನ ಭಜನೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಶ್ರೀಮತಿ ಕನ್ನಿಕಾ ಪರಮೇಶ್ವರಿ, ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ನಂಜುAಡಪ್ಪ ಮಾಜಿ ಶಾಸಕರಾದ ಗೌರಿಶಂಕರ್, ಕಾಂಗ್ರೆಸ್ ಮುಖಂಡರುಗಳಾದ ಇಕ್ಬಾಲ್ ಅಹಮದ್ , ಪ್ರೇಮಾ ಮಹಾಲಿಂಗಪ್ಪ, ದೇವರಾಜು ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರುಗಳು, ಪ್ರಾಧ್ಯಾಪಕರುಗಳು, ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ನೌಕರರು, ರಾಜಕೀಯ ಮುಖಂಡರುಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಭೌದ್ಧ ಬಿಕ್ಕು ಸಂಘದಿAದ ಬಂತೇಜಿಯವರ ಸಮ್ಮುಖದಲ್ಲಿ ನಡೆದ ಪುಣ್ಯಾನುಮೋಧನೆ ಕಾರ್ಯಕ್ರಮದಲ್ಲಿ ಬೀದರ್, ಕೊಳ್ಳೆಗಾಲ ಬೆಂಗಳೂರು, ತುಮಕೂರಿನ ಗೆದ್ದನಹಳ್ಳಿಯ ಬುದ್ಧಬಯಲು ಕ್ಷೇತ್ರದಿಂದ ಆಗಮಿಸಿದ್ದ ಭೌದ್ಧ ಬಿಕ್ಕುಗಳಿಂದ ಗಂಗಾAಬಿಕೆಯವರ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.
ಡಾ. ಹೆಚ್ ಎಂ ಗಂಗಾಧರಯ್ಯ, ಪುತ್ರ ಡಾ.ಜಿ.ಎಸ್ ಶಿವಪ್ರಸಾದ್ ಅವರು ಬೌದ್ಧ ಧರ್ಮ ಪಾಲನೆ ಮಾಡಿ ಅನೇಕ ದಾನ ಧರ್ಮಗಳನ್ನ ಮಾಡಿದ್ದರು ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಹೆಸರಿನಲ್ಲಿಯೇ ಬೌದ್ಧ ಧರ್ಮ ಪಾಲನೆ ಯಾಗುತ್ತಿದೆ. ಡಾ. ಜಿ ಪರಮೇಶ್ವರ್ ಆನಂದ ಸೇರಿದಂತೆ ಕುಟುಂಬ ಸದಸ್ಯರು ಪರಿಪಾಲನೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂಥವರಿಗೆ ರಾಜ್ಯವನ್ನಾಳುವ ಅವಕಾಶವನ್ನ ದೇವರು ಕೊಟ್ಟು ಕಾಪಾಡುತ್ತಾನೆ. ಬೌದ್ಧ ಧರ್ಮದ ಅನೇಕ ರಾಜರುಗಳು ಪ್ರಜೆಗಳನ್ನು ಮಕ್ಕಳಂತೆ ಪೋಷಿಸಿ ಬೆಳೆಸುತ್ತಿದ್ದರು. ಅದೇ ರೀತಿಯಲ್ಲಿ ಇಂದಿನ ರಾಜಕಾರಣಿಗಳು ತಾಯಿ ಮನಸ್ಸನ್ನು ಹೊಂದಿ ರಾಜ್ಯವನ್ನಾಳಿದಾಗ ಸುಭಿಕ್ಷವಾದ ಮಳೆ ಬೆಳೆಗಳು ಬಂದು, ಯಾವುದೇ ರೋಗ ರೋಜಿನಗಳಿಲ್ಲದೆ ನಾಡು ಶಾಂತಿಯುತವಾಗಿ ಬೆಳವಣಿಗೆ ಹೊಂದುತ್ತದೆ ಎಂದು ಭೌದ್ಧ ಭಿಕ್ಕುಗಳು ಧಮ್ಮದ ಮಂತ್ರಘೋಷಣೆ ಮಾಡುವ ಮೂಲಕ ಹಾರೈಸಿದರು.
ಪುಣ್ಯರಾದನಾ ಕಾರ್ಯಕ್ರಮದ ವೇಳೆ ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ರಂಗಭೂಮಿ ಕಲಾವಿದ ಡಾ.ಲಕ್ಷ್ಮಣ್ ದಾಸ್ ಮತ್ತು ಸಂಗಡಿಗರಿAದ ಭಜನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
