ತುಮಕೂರು ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ನೂತನವಾಗಿ ನೇಮಕವಾಗಿರುವ ಮಾಜಿ ಶಾಸಕ ಹೆಚ್.ನಿಂಗಪ್ಪ ಅವರನ್ನು ನಗರದ ಜಿಲ್ಲಾ ಕಚೇರಿಯಲ್ಲಿ ಮುಖಂಡರು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು. ನಗರಪಾಲಿಕೆ ಮಾಜಿ ಉಪಮೇಯರ್ ಟಿ.ಆರ್.ನಾಗರಾಜ್, ಮಾಜಿ ಸದಸ್ಯರಾದ ಹೆಚ್ಡಿಕೆ ಮಂಜುನಾಥ್, ಶ್ರೀನಿವಾಸ್, ಶ್ರೀನಿವಾಸ್ಪ್ರಸಾದ್, ಟಿ.ಹೆಚ್.ಬಾಲಕೃಷ್ಣ, ಟಿ.ಜಿ.ನರಸಿಂಹರಾಜು, ಮುಖಂಡರಾದ ಸೋಲಾರ್ ಕೃಷ್ಣಮೂರ್ತಿ, ತಾಹೇರಾ ಕುಲ್ಸಂ, ಗುರು ಬಳ್ಳುಕರಾಯ, ಕೆಂಪರಾಜು, ಭೈರೇಶ್, ಯೋಗಾನಂದಕುಮಾರ್, ದಿಬ್ಬೂರು ವಿಜಯಕುಮಾರ್, ದರ್ಶನ್ ಮೊದಲಾದವರು ಹಾಜರಿದ್ದರು.
