ಕಾಳಿಕಾಂಬ ಪತ್ತಿನ ಸಹಕಾರ ಸಂಘ.*
*2026 ರಿಂದ 2031 ರ ಸಾಲಿನ 5 ವರ್ಷಗಳ ಅವಧಿಗೆ ನೂತನ *ಅಧ್ಯಕ್ಷರಾಗಿ*
*ಪತ್ರಕರ್ತ ಹರೀಶ್* *ಆಚಾರ್ಯ*
*ಉಪಾಧ್ಯಕ್ಷರಾಗಿ* *ಜೆ.ಎನ್.ಗೋಪಾಲಕೃಷ್ಣಚಾರ್ ಅವಿರೋಧವಾಗಿ ಆಯ್ಕೆಯಾದರು*
*ತುಮಕೂರು ಚಿಕ್ಕಪೇಟೆ ಕಾಳಿಕಾಂಬ ಪತ್ತಿನ ಸಹಕಾರ ಸಂಘ ನಿಯಮಿತದ 2026 ರಿಂದ 2031 ರ ಸಾಲಿನ 5 ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಪತ್ರಕರ್ತ ಹರೀಶ್ ಆಚಾರ್ಯ, ಉಪಾಧ್ಯಕ್ಷರಾಗಿ ಜೆ. ಎನ್.ಗೋಪಾಲಕೃಷ್ಣಚಾರ್ ಅವಿರೋಧವಾಗಿ ಆಯ್ಕೆಯಾದರು*.
*ಈ ಬಗ್ಗೆ ಸಂಘದ ಹಿರಿಯ ನಿರ್ದೇಶಕ ಚುನಾವಣಾ ಅಧಿಕಾರಿ ವಿ. ಎ.ವಿನಯ್ ಕುಮಾರ್* *ಅಧಿಕೃತವಾಗಿ ಘೋಷಣೆ ಮಾಡಿದರು .ಸಂಘದ ಕಚೇರಿಯಲ್ಲಿ ಮಂಗಳವಾರ ನಡೆದ ಸರಳ* *ಕಾರ್ಯಕ್ರಮದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಯನ್ನ ಪ್ರಕಟಿಸಿದರು.*
*ಈ ವೇಳೆ ನೂತನ ಕಾರ್ಯಕಾರಿ ಆಡಳಿತ ಮಂಡಳಿಯವರಿಗೆ ಪ್ರಮಾಣ ಪತ್ರ ನೀಡಲಾಯಿತು ಹಾಗೆಯೇ ಸಮಾಜದ ಮುಖಂಡರು ಹಾಗೂ ಕಚೇರಿ ಸಿಬ್ಬಂದಿ ಸನ್ಮಾನಿಸಿ ಗೌರವ ಸಲ್ಲಿಸಿದರು.*
*ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಹರೀಶ್ ಆಚಾರ್ಯ ಅವರು ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು*
*ಸಂಘದ ಶಾಖೆಗಳನ್ನ ತೆರೆಯಲು ಬುನಾದಿಯನ್ನ ನನ್ನ ಅವಧಿಯಲ್ಲಿ ಹಾಕಲಾಗುವುದು ಎಂದರು.*
*ಉಪಾಧ್ಯಕ್ಷ ಗೋಪಾಲ ಕೃಷ್ಣಾಚಾರ್ ಮಾತನಾಡಿ, ಸಂಘವನ್ನ ಹಿರಿಯರು ಕಟ್ಟಿ ಬೆಳೆಸಿದ್ದಾರೆ. ಅವರ ಹಾದಿಯಲ್ಲಿ ನಾವು ಸಹ ಮುನ್ನೇಡೆಯುವುದಾಗಿ ತಿಳಿಸಿದರು. ಸಮಾಜದ ಅಧ್ಯಕ್ಷ ಹೆಬ್ಬೂರು ನಾಗರಾಜ ಚಾರ್ ಮಾತನಾಡಿ, ಸಂಘವನ್ನ ಉನ್ನತ ಮಟ್ಟಕ್ಕೆ ಏರಿಸುವ ಭರವಸೆ ನೂತನ ಆಡಳಿತ ಮಂಡಳಿ ಮೇಲಿದೆ ಎಂದರು.*
*ಈ ವೇಳೆ ಸಂಘದ ಮಾಜಿ ಅಧ್ಯಕ್ಷ ಗೋವರ್ಧನ್ ಚಾರ್, ನಿರ್ದೇಶಕರಾದ ಟಿ. ಸಿ. ಡಮರುಗೇಶ್, ಟಿ. ಎ. ರವಿಕುಮಾರ್, ಎಂ. ಎಸ್. ಲಿಂಗಾಚಾರ್, ಟಿ. ವಿ. ಚೇತನ್ ಕುಮಾರ್, ವಿ. ಎ. ವಿನಯ್ ಕುಮಾರ್, ನರಸಿಂಹಸ್ವಾಮಿ, ನಾಗರತ್ನ ಸುಧೀರ್, ಟಿ. ಜೆ. ಉಷಾ, ಫೈರೋಜ್ ಷಫಿ ಉಲ್ಲಾ ಸೇರಿದಂತೆ ಸಮಾಜದ ಗಣ್ಯರು ಉಪಸ್ಥಿತರಿದ್ದರು.
ವರದಿ ನಾಗರಾಜು ಹಿರಿಯ ಸಾಹಿತಿ ಪತ್ರಕರ್ತರು.
