*ಡಿ.ವಿ.ಜಿ. -ಅಸಾಧಾರಣ ಪತ್ರಕರ್ತ, ಕವಿ*
*ಡಿ ವಿ. ಜಿ.ಕನ್ನಡ ಪತ್ರಿಕೋದ್ಯಮ ಬೃಹದಾಕಾರವಾಗಿ ಬೆಳೆದಿದೆ* *ಇಂದು ಸುಮಾರು ಒಂದೂವರೆ ಶತಕದ ಸುದೀರ್ಘ ಇತಿಹಾಸದ ಪತ್ರಿಕೋದ್ಯಮ ಇಷ್ಟು ಹುಲುಸಾಗಿ ಬೆಳೆಯಲು ಹಲವರ ಶ್ರಮ ಸಾಧನೆಯೇ ಕಾರಣ. ಇಂಥ ಸಾಧಕರಲ್ಲಿ ಡಿವಿಜಿ ಅಗ್ರಗಣ್ಯರು.*
*ಡಿ ವಿ ಜಿ ಎಂಬ ಉಪನಾಮದಿಂದಲೇ ಖ್ಯಾತರಾದ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು (ಡಿ.ವಿ.ಗುಂಡಪ್ಪ) ಜನಮನದಲ್ಲಿ ಹಸಿರಾಗಿ ಉಳಿದಿರುವುದು ಅವರ ಅನುಪಮ ಹಾಗೂ ವಿಚಾರಪೂರ್ಣ ಲೇಖನ ಬರಹಗಳಿಂದ. ಆದರೆ, ಡಿವಿಜಿ ಸಮಾಜಸೇವೆ,* *ಪತ್ರಿಕೋದ್ಯಮ ಮೊದಲಾದ ಕ್ಷೇತ್ರಗಳಲ್ಲಿ ಮಾಡಿದ ವ್ಯವಸಾಯ ಅವರ ಸಾಹಿತ್ಯ ಸೇವೆಯಷ್ಟೇ ಮಿಗಿಲು.*
*ಅಂದಿನ ಮೈಸೂರು* *ಮಹಾಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ವಿಶ್ವೇಶ್ವರಯ್ಯನವರು ನಾಡು ನುಡಿಗಾಗಿ ಸೇವೆ ಸಲ್ಲಿಸಿದ ಧೀಮಂತ ದಿಗ್ಗಜ ಪತ್ರಿಕಾ ಸಂಪಾದಕ ಪಿತಾಮಹರು ಮಾರ್ಗದರ್ಶನದಲ್ಲಿ 96 ವಸಂತಗಳನ್ನು ಪೂರೈಸಿ ಶತಮಾನದ ಇತಿಹಾಸದ ಪುಟದಲ್ಲಿ ಸುವರ್ಣಾಕ್ಷರದಲ್ಲಿ ಸೇರುವಂತಹ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಘಟಕದ ರಾಜ್ಯದ ಎಲ್ಲಾ ಪತ್ರಕರ್ತರುಗಳು ಡಿವಿ ಗುಂಡಪ್ಪನವರ ಹುಟ್ಟು ಹಬ್ಬದ ಅಂಗವಾಗಿ ಶುಭಾಶಯಗಳು ಸತ್ಯ ನಿಷ್ಠೆ ನ್ಯಾಯ ಧರ್ಮ ಸಮ್ಮತ ಪಾರದರ್ಶಕತೆ ಎಲ್ಲವನ್ನು ಒಳಗೊಂಡಿರುವಂತಹ ನಮ್ಮ ರಾಷ್ಟ್ರದ ನಾಲ್ಕನೇ ಅಂಗವಾದ ಪತ್ರಿಕಾ ರಂಗದ ಸಂಸ್ಥಾಪಕರಾದ ಡಿವಿ ಗುಂಡಪ್ಪರವರ ಜನ್ಮ ಜಯಂತಿ ಉತ್ಸವದ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಶಿವಾನಂದ ತಗಡುರವರು ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಲೋಕೇಶ್ ರವರು ರಾಜ್ಯ ಸಂಘದ ಪದಾಧಿಕಾರಿಗಳು ಹಾಗೂ ಜಿಲ್ಲಾ ಘಟಕದ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸಂಘದ ಸದಸ್ಯರುಗಳು ಎಲ್ಲರ ಶುಭ ನಮನಗಳನ್ನು ಸಲ್ಲಿಸೋಣ*
ನಾಗರಾಜು ಹಿರಿಯ ಪತ್ರಕರ್ತರು ಮತ್ತು
ನಿಕಟ ಪೂರ್ವ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು
