ತುಮಕೂರು
ಸಂಪೂರ್ಣ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ದಲಿತ ಸಮುದಾಯದ ಮುಖಂಡ ಪ್ರೋ.ಬಿ.ಕೃಷ್ಣಪ್ಪ ಸ್ಮಾರಕ ಸ್ಥಳದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ವರೆಗೆ ಪಾದಯಾತ್ರೆ ಆರಂಭಿಸಿರುವ ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಆದಿ ಜಾಂಭವ ಮಠದ ಪೀಠಾಧ್ಯಕ್ಷ ಷಡಕ್ಷರೀ ಸ್ವಾಮೀಜಿ ಮಾರ್ಗ ಮಧ್ಯೆ ತುಮಕೂರು ನಗರದಲ್ಲಿ ಸಾಗುತ್ತಿದ್ದ ವೇಳೆ ತೀವ್ರ ಅನಾರೋಗ್ಯಕ್ಕೆ ಒಳಗಾದ ಘಟನೆ ನಡೆಯಿತು.
ತುಮಕೂರು ನಗರದ ಮೂಲಕ ಸಾಗುತ್ತಿದ್ದ ವೇಳೆ ಬಿ ಎಚ್ ರಸ್ತೆಯಲ್ಲಿ ರಸ್ತೆ ಮಧ್ಯದಲ್ಲಿಯೇ ಕುಳಿತ ಸ್ವಾಮೀಜಿಯವರನ್ನು ಸಂತೈಸಿದ ಹೋರಾಟಗಾರರು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋದರು.
ಸುಮಾರು 300 ಕಿಲೋ ಮೀಟರ್ ನಿಂದ ಪಾದಯಾತ್ರೆ ಕೈಗೊಂಡಿರೋ ಷಡಕ್ಷರಿ ಸ್ವಾಮೀಜಿ, ನೂರಾರು ಸಂಖ್ಯೆಯಲ್ಲಿ ಪಾದಯಾತ್ರೆ ಬೆಂಬಲಿಸಿ ಪಾದಯಾತ್ರೆಯಲ್ಲಿ ಪಾಲ್ಗೊಂಡ ಮಾದಿಗ ಮುಖಂಡರು, ರಾಷ್ಟ್ರೀಯ ಹೆದ್ದಾರಿ 4 ರ ಸರ್ವೀಸ್ ರಸ್ತೆ ಯಲ್ಲಿ ಬಿಸಿಲು ಲೆಕ್ಕಿಸದೆ ಹೆಜ್ಜೆ ಹಾಕಿದರು.
ಮಾರ್ಚ್ 27ರಂದು ನಡೆಯುವ ಸಂಪುಟ ಸಭೆಯಲ್ಲಿ ಸರ್ಕಾರ ಒಳ ಮೀಸಲಾತಿ ಕುರಿತು ತಿರ್ಮಾನ ಕೈಗೊಳ್ಳಬೇಕು ಎಂದು ಒತ್ತಾಸಿದ್ದಾರೆ.
ಪಾದಯಾತ್ರೆ ಮೂಲಕ ಮಾ.27 ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಲಿರುವ ಷಡಕ್ಷರೀ ಸ್ವಾಮೀಜಿ ಅವರಿಗೆ ತುಮಕೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲು ಕರೆದುಕೊಂಡು ಹೋಗಲಾಯಿತು.
ಈ ಕುರಿತಂತೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ವಕೀಲ ಕಿರಣ್ ಕುಮಾರ್ ಮಾತನಾಡಿ, ಮಾದಿಗ ಸಮುದಾಯದ ಹಿರಿಯ ಸ್ವಾಮೀಜಿಯೊಬ್ಬರು ಬೆಂಗಳೂರಿನವರೆಗೂ ಪಾದಯಾತ್ರೆಯಲ್ಲಿ ಹೋಗುತ್ತಿದ್ದರೆ ಸರ್ಕಾರಕ್ಕೆ ಸ್ವಲ್ಪವೂ ಕಾಳಜಿ ಇಲ್ಲದಂತೆ ನಡೆದುಕೊಳ್ಳುತ್ತಿದೆ. ಅವರು ಇಂದು ತುಮಕೂರು ಮಾರ್ಗವಾಗಿ ತೆರಳುತ್ತಿದ್ದ ವೇಳೆ ಕುಸಿದು ಬಿದ್ದಿದ್ದಾರೆ ಅವರಿಗೆ ಪ್ರಾಥಮಿಕ ಪ್ರಾಥಮಿಕ ಚಿಕಿತ್ಸೆ ನೀಡಲು ನಾವು ಮುಂದಾಗಿದ್ದು ನಂತರ ಅವರು ಬೆಂಗಳೂರಿನವರೆಗೂ ಪಾದಯಾತ್ರೆ ಮುಂದುವರಿಸಲಿದ್ದಾರೆ ಎಂದು ಹೇಳಿದರು.
