ಸಹೃದಯರೇ,
ನಾವು ಬದಲಾಗದ ಹೊರತು ಜಗತ್ತು ಬದಲಾಗದು.
ಜಗತ್ತು ಬದಲಾಗಿ, ಹೊಸತನ ಕಾಣದ ಹೊರತು ಮನುಕುಲಕ್ಕೆ ಒಳಿತಾಗದು..
ಸ್ವಾರ್ಥ, ದುರಾಸೆ, ದುರ್ಬುದ್ದಿ, ದುರಾಹಂಕಾರದ ಜೊತೆಗೆ ಅಧಿಕಾರ, ಜಾತಿ, ಹಣ, ಅಂತಸ್ತುಗಳು ಮನುಷ್ಯತ್ವದಿಂದ ದೂರ ಉಳಿದು, ನಾನು ಎನ್ನುವ ಮಾಯೆಯೊಳಗೆ ಪರರ ಹಿತಕಾಯದೇ, ಪರಿಸರದ ವಿರುದ್ಧ ಹೆಜ್ಜೆ ಇಡುತ್ತಿದ್ದಾನೆ..
ಪರಿಣಾಮ ಕುತಂತ್ರ, ವಂಚನೆ, ಹಲ್ಲೆ, ದೌರ್ಜನ್ಯ, ಅತ್ಯಾಚಾರ, ಕೊಲೆ, ಯುದ್ಧಕ್ಕೆ ಕಾರಣವಾಗಿ ಅಮಾಯಕ ಜೀವಿಗಳು ಬಲಿಯಾಗುತ್ತಿರುವ ಜೊತೆಗೆ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ..
ಪರಿಸರ ವಸಂತ ಕಾಲಕ್ಕೆ ಹಳೆದು ತೊರೆದು, ಹೊಸತನದೊಂದಿಗೆ ಜಗತ್ತಿಗೇ ನವನವೀನತೆಯ ಸಂದೇಶ ಸಾರುತ್ತಿದೆ..
ನಾವು ಸಂಪೂರ್ಣ ಬದಲಾಗಿ ಹೊಸತನದೊಂದಿಗೆ ಮಾನವೀಯತೆಯಿಂದ ಉಳಿದ ದಿನಗಳ ಕಳೆಯೋಣ..
ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಯ ಬೀಜ ಬಿತ್ತಿ ಸಾಮಾಜಿಕ ಸೇವೆಗೆ ಮುಂದಾಗೋಣ. ಇದೇ ಪುಣ್ಯ ಮತ್ತು ಶಾಶ್ವತ..
ತಿಪಟೂರು ಕೃಷ್ಣ.
ಪತ್ರಕರ್ತ
