ಶರ್ಮಿಷ್ಠೆಯಾಗಿ ಉಮಾಶ್ರೀ
ತುಮಕೂರು-ರಂಗದಲ್ಲಿ ಮತ್ತು ಸದನದಲ್ಲಿ ಎರಡೂ ಕಡೆ ಅತ್ಯುತ್ತಮ ಪ್ರಯೋಗ ನೀಡುತ್ತಿರುವ ಡಾಕ್ಟರ್ ಉಮಾಶ್ರೀಯವರು ಒಂದು ಗಂಟೆ ಹತ್ತು ನಿಮಿಷ ನಿರರ್ಗಳವಾಗಿ ಕಾವ್ಯಾತ್ಮಕ ಶ?ಲಿಯ ಸಂಭಾಷಣೆಯಲ್ಲಿ ಎಲ್ಲಿಯೂ ಕಿಂಚಿತ್ತೂ ಎಡವದೆ ಜನಮನ ಗೆದ್ದಿದ್ದಾರೆ ಇವರ ಪ್ರಯೋಗ ಐವತ್ತಾಗಲಿ ನೂರಾಗಲಿ ಅದು ನಮ್ಮ ಜಿಲ್ಲೆಯ ಹೆಮ್ಮೆ ಎಂದು ಮಾನ್ಯ ಗೃಹಮಂತ್ರಿಗಳಾದ ಡಾ:ಜಿ ಪರಮೇಶ್ವರ್ ಅಭಿಪ್ರಾಯ ಪಟ್ಟರು ಅವರು ದಿನಾಂಕ ೨೮-೧೨-೨೫ನೇ ಭಾನುವಾರ ಸಂಜೆ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಡಮರುಗ ರಂಗ ತಂಡದ ಸಹಕಾರದಲ್ಲಿ ರಂಗಸAಪದ ಬೆಂಗಳೂರು ಪ್ರಯೋಗಿಸಿದ “ಶರ್ಮಿಶ್ಠೆ”ಏಕವ್ಯಕ್ತಿ ರಂಗ ಪ್ರಯೋಗ ವೀಕ್ಷಿಸಿ ಮಾತನಾಡಿದರು
ನಂತರ ಮಾತನಾಡಿದ ಮಾಜಿ ಸಚಿವರಾದ ರಾಜಣ್ಣನವರು ನಾವು ಓಟಾಕುವ ಜನರ ಹೆಸರುಗಳನ್ನ ನೆನಪಿನಲ್ಲಿ ಇಟ್ಟು ಕೊಳ್ಳುವುದೇ ಕಷ್ಟ ಆದರೆ ಉಮಾಶ್ರೀ ಅಕ್ಕಾ ಅದನ್ನೂ ನಿಭಾಯಿಸಿಕೊಂಡು ರಂಗದಲ್ಲೂ ಒಬ್ಬರೇ ೭೦ನಿಮಿಷ ಲೀಲಾಜಾಲವಾಗಿ ಅಭಿನಯಿಸುವುದು ಒಂದು ಸೋಜಿಗ ಇಂತಹ ಅತ್ಯುತ್ತಮ ಪ್ರಯೋಗ ತವರು ಜಿಲ್ಲೆ ತುಮಕೂರಿನಲ್ಲೇ ಹೆಚ್ಚು ಆಗಲಿ ಎಂದು ಹರಸಿದರು.
ನಂತರ ಖ್ಯಾತ ರಂಗ ಕಲಾವಿದೆ, ಮಾಜಿ ಸಚಿವೆ ಉಮಾಶ್ರೀ ಮಾತನಾಡಿ ತುಮಕೂರು ಜಿಲ್ಲೆ ನನಗೆ ಜನ್ಮ ನೀಡಿದೆ ಮಧುಗಿರಿಯ ಪುರವರದಲ್ಲಿ ಮೊದಲು ಬಣ್ಣ ಹಚ್ಚಿಸಿ ಮರುಜನ್ಮ ನೀಡಿ ಬದುಕಿಗೆ ಆಸರೆಯಾಗಿದೆ, ಹಾಗಾಗಿ ಜನ್ಮ ನೀಡಿದ ಅನ್ನ ನೀಡಿದ ಋಣ ನನ್ನ ಮೇಲಿದೆ ಆದುದರಿಂದಲೇ ತುಮಕೂರಿನ ಜನತೆ ಪ್ರೀತಿಯಿಂದ ಕರೆದಾಗಲೆಲ್ಲ ನಾನು ಖುಷಿಯಿಂದ ಓಡೋಡಿ ಬರುತ್ತೇನೆ, ನಿಮ್ಮ ಪ್ರೀತಿ, ವಿಶ್ವಾಸ ಹೀಗೆ ಇರಲಿ ಎಂದರು, ಸಭೆಯಲ್ಲಿ ಪ್ರಜಾಪ್ರಗತಿ ದಿನಪತ್ರಿಕೆ ಸಂಪಾದಕರಾದ ನಾಗಣ್ಣನವರು, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬಾಲಗುರುಮೂರ್ತಿ, ಡಮರುಗ ರಂಗ ತಂಡದ ನಿರ್ದೇಶಕ ಮೆಳೇಹಳ್ಳಿದೇವರಾಜ್, ರಂಗಸAಪದ ತಂಡದ ರಂಗಗೆಳೆಯರು ಉಪಸ್ಥಿತರಿದ್ದರು
