Live
ಸಹಾನುಭೂತಿ ರಂಜಾನ್ ಹಬ್ಬ
ಜಿಲ್ಲಾ ಸುದ್ದಿಗಳು
ಪ್ರಾರ್ಥನೆ, ದಾನ, ಸಹಾನುಭೂತಿ ರಂಜಾನ್ ಹಬ್ಬ
Esthaq Ahamed
Posted on 3 hours ago
1 minute read
Videoshot_20260320_090542
ಪ್ರಾರ್ಥನೆ, ದಾನ, ಸಹಾನುಭೂತಿ ಮತ್ತು ಸಹಿಷ್ಣತೆಯ ರಂಜಾನ್ ಹಬ್ಬ
ಮನ್ಸೂರ್ ಅಹಮದ್
(ದಿವಂಗತ ಮುಷ್ತಾಕ್ ಅಹಮದ್ ರವರ ಪುತ್ರ)
ಕಾರ್ಯದರ್ಶಿ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ಅಫ್ ಕರ್ನಾಟಕ (ಸಿ.ಎಂ.ಎ.) ತುಮಕೂರು
ಮೂ:-೯೮೪೫೮೧೨೪೮೮
ಇಸ್ಲಾಂ ಧರ್ಮದ ಪರಿಚಯ:-
ಇಸ್ಲಾಂ ಧರ್ಮ ಒಂದು ಆಸ್ತಿಕ ಧರ್ಮ. ಇದು ಒಬ್ಬ ಭಗವಂತನ ಆಸ್ತಿತ್ವದ ಬಗ್ಗೆ ನಂಬುತ್ತದೆ. ಆ ಭಗವಂತನು (ಅಲ್ಲಾಹ) ನಿರಾಕಾರ, ಸಾರ್ವಕಾಲಿಕ, ಸರ್ವಜ್ಞ, ಸ್ವಯಂಭೂ ಅವನಲ್ಲಿ ಈಮಾನ್ ಅಥವಾ ನಂಬಿಕೆಯೇ ಇದರ ಮೊದಲ ಸಿದ್ದಾಂತ. ಪ್ರಥಮ ಮಾನವರು, ಪ್ರಥಮ ಪ್ರವಾದಿಯೂ ಆದ ಆದಮ್(ಅ) ರವರಿಂದ ಅಂತಿಮ ಪ್ರವಾದಿ ಮುಹಮ್ಮದ್(ಸ) ತನಕ ಎಲ್ಲಾ ಪ್ರವಾದಿಗಳು ಅವರವರ ಜನತೆಯ ಮುಂದೆ ಇದೇ ಧರ್ಮವನ್ನು ಪ್ರತಿವಾದಿಸಿದರು. ಮತ್ತು ಅದರಂತೆ ಬದುಕಿ ತೋರಿಸಿದರು. ಮನುಷ್ಯರ ಎಲ್ಲಾ ಸಮಸ್ಯಗಳಿಗೂ ಇದರಲ್ಲಿ ಸೂಕ್ತ
ಪರಿಹಾರವಿದ್ದು, ಇದು ಅವರಿಗೆ ಶಾಂತಿ, ಸುಭಿಕ್ಷೆ ಮತ್ತು ಕಲ್ಯಾಣವನ್ನು ನೀಡುತ್ತದೆ. ಇಸ್ಲಾಂ ಶಾಂತಿ, ಸಹನೆ, ಸೌಹಾರ್ದತೆ, ಸೌಜನ್ಯ ಮತ್ತು ಪರಧರ್ಮ, ಸಹಿಷ್ಣುತೆಯ ಧರ್ಮವಾಗಿದೆ. ಇಸ್ಲಾಂ ಸರ್ವ ಧರ್ಮೀಯರ ಕಲ್ಯಾಣ ಮತ್ತು ಸರ್ವತೋಮುಖ ಅಭಿವೃದ್ದಿ ಬಯಸುವ ಧರ್ಮ. ಇಸ್ಲಾಂ ಇತರೆ ಧರ್ಮಗಳನ್ನು ಸರಿಸಮನಾಗಿ ಗೌರವಿಸುತ್ತದೆ. ಇಸ್ಲಾಂ ಇತರೆ ಯಾವ ಧರ್ಮವನ್ನು ದ್ವೇಷಿಸುವುದಿಲ್ಲ. “ಪವಿತ್ರ ಕುರ್ಆನ್” ಎಲ್ಲಾ ಕಾಲ, ಜನಾಂಗ, ವರ್ಣ ಮತ್ತು ದೇಶದ ಜನರಿಗೆ ಸಮಗ್ರ ರೂಪದಲ್ಲಿ ಅನ್ವಯಿಸುತ್ತದೆ. ಮತ್ತು ಅವರ ಬೇಡಿಕೆಗಳಿಗೆ ಪೂರಕವಾಗಿದೆ. ಒಬ್ಬ ಮನುಷ್ಯ ತನ್ನ ಹುಟ್ಟಿನಿಂದ
ಹಿಡಿದು ಸಾಯುವವರೆಗೆ ಯಾವ ರೀತಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ಕೌಟುಂಬಿಕ ಜೀವನ ನಡೆಸಬೇಕೆಂಬುದರ ಬಗ್ಗೆ ಪವಿತ್ರ “ಕುರ್ಆನ್” ಮಾರ್ಗದರ್ಶನ ನೀಡುತ್ತದೆ.
ಇಸ್ಲಾಂ ಧರ್ಮದ ಸಿದ್ದಾಂತಗಳು :-
ಇಸ್ಲಾಂ ಧರ್ಮದಲ್ಲಿ ಮುಖ್ಯವಾಗಿ ಐದು ಸಿದ್ದಾಂತಗಳಿವೆ.
ಇಸ್ಲಾA ಧರ್ಮದ ಮೂಲ ಮಂತ್ರವು “ಏಕದೇವ ವಿಶ್ವಾಸ”ವಾಗಿದೆ. ದೇವ (ಅಲ್ಲಾಹ್) ನೊಬ್ಬನೆ ಆರಾಧನೆಗೆ ಅರ್ಹನು ಮತ್ತು ಪ್ರವಾದಿ ಮುಹಮ್ಮದ್(ಸ) ರವರು ಅಲ್ಲಾಹನ ಸಂದೇಶವಹಕರಾಗಿದ್ದಾರೆ.
ನಮಾಜ್(ಆರಾಧನೆ) ಇಸ್ಲಾಂ ಧರ್ಮದ ಪ್ರಕಾರ ಒಬ್ಬ ಮುಸಲ್ಮಾನ ಅರಿವು ಹೊಂದಿದ ಮೇಲೆ ತನ್ನ ಸೃಷ್ಟಿಕರ್ತನ ಮುಂದೆ ತನ್ನ ಕೃತಜ್ಞತೆಯನ್ನು ಸೂಚಿಸಬೇಕು ಇದೇ ನಮಾಜ್. ಇದನ್ನು ಪ್ರತಿದಿನ ಐದು ಬಾರಿ ಮಾಡಬೇಕು. ನಮಾಜ್ ಒಬ್ಬ ಮನುಷ್ಯನ ಆಂತರಿಕ ಶರೀರ ಹಾಗೂ ತನ್ನ ಆತ್ಮವನ್ನು ಶುದ್ದಿಗೊಳಿಸುತ್ತದೆ.
ರೋಜಾ (ಉಪವಾಸ ವ್ರತ) ಪ್ರತಿಯೊಬ್ಬ ಮುಸಲ್ಮಾನನು ರಂಜಾನ್ ಮಾಹೆಯಲ್ಲಿ ಒಂದು ತಿಂಗಳ ಕಾಲ ಸೋರ್ಯೋದಯವಾಗುವುದರಿಂದ ಸೂರ್ಯಾಸ್ತವಾಗುವವರೆಗೆ ಏನೂ ಆಹಾರವಾಗಲೀ ಹಾಗೂ ನೀರು/ಪಾನೀಯಗಳು ಸಹಾ ಸ್ವೀಕರಿಸದೆ ಉಪವಾಸ ಆಚರಿಸಬೇಕು. ಇದಕ್ಕೆ ರೋಜಾ ಎಂದು ಕರೆಯುತ್ತಾರೆ.
ಜಕಾತ್(ದಾನ) ಜಕಾತ್ ಇಸ್ಲಾಂ ಧರ್ಮದ ಆರ್ಥಿಕ ವ್ಯವಸ್ಥೆಯನ್ನು, ಸಾಮಾಜಿಕ ಹೊಣೆಯನ್ನು ನಮಗೆ ತಿಳಿಸಿಕೊಡುತ್ತದೆ. ಒಬ್ಬ ಮನುಷ್ಯ ತಾನು ದುಡಿದ ಆದಾಯದಲ್ಲಿ ಶೇಕಡ ಎರಡೂವರೆಯಷ್ಟು ಹಣವನ್ನು ಬಡವರಿಗೆ ದೀನದಲಿತರಿಗೆ, ದರಿದ್ರರಿಗೆ,
-೩-
ವಿಧವೆಯರಿಗೆ ದಾನ ಮಾಡಬೇಕಾಗಿರುವುದು ಕಡ್ಡಾಯವಾಗಿದೆ. ಧನಿಕರ ಸ್ವತ್ತಿನಲ್ಲಿರುವ ಬಡವರ ಹಕ್ಕು ಜಕಾತ್. ಜಕಾತ್ ಒಂದು ದಾನವಾಗಲಿ, ಭಿಕ್ಷೆಯಾಗಲೀ ಅಲ್ಲ. ಅದು ಬಡವರ ಹಕ್ಕಾಗಿದೆ.
ಹಜ್ : ಇಸ್ಲಾಂ ಧರ್ಮ ಸಮತಾ ಭಾವನೆಯನ್ನು ಹಾಗೂ ಒಬ್ಬ ಭಗವಂತನ ಮುಂದೆ ತಲೆ ಬಾಗುವುದನ್ನು ತೋರಿಸುವ ಧಾರ್ಮಿಕ ಕ್ರಿಯೆಯೇ ಹಜ್. ಆರ್ಥಿಕವಾಗಿಯೂ, ದೈಹಿಕವಾಗಿಯೂ, ಸಾಮಥ್ಯವುಳ್ಳ ಪ್ರತಿಯೊಬ್ಬ ವಯಸ್ಕರ ಮುಸ್ಲಿಂ ಸ್ತಿçà ಪುರುಷರ ಮೇಲೆ ಜೀವನದಲ್ಲಿ ಒಮ್ಮೆ ಹಜ್ ನಿರ್ವಹಿಸುವುದು ಕಡ್ಡಾಯವಾಗಿದೆ. ಸೌದಿ ಅರೇಬಿಯ ದೇಶದ ಮಕ್ಕಾ ಪಟ್ಟಣದಲ್ಲಿ ಪವಿತ್ರ ಕಾಆಬಾ ಭವನದ ದರ್ಶನ ಹಾಗೂ ಮದೀನ ಪಟ್ಟಣದಲ್ಲಿರುವ
ಪ್ರವಾದಿ ಮುಹಮ್ಮದ್(ಸ) ರವರ ಸಮಾಧಿಗೆ ಗೌರವ ಸಲ್ಲಿಸುವ ಕ್ರಿಯೆಯೇ “ಹಜ್” ಎಂದು ಕರೆಯಲಾಗುತ್ತದೆ.
ಇಸ್ಲಾಂ ಧಮದ ವಿಶ್ವ ಸಂದೇಶ:
ಇಸ್ಲಾA ವಿಶ್ವ ಬ್ರಾತೃತ್ವದಲ್ಲಿ ನಂಬಿಕೆ ಇಡುತ್ತದೆ. ದಿವ್ಯ ಕುರ್ಅನ್ ಕೇವಲ ಮುಸಲ್ಮಾನರಿಗಾಗಿ ಬಂದ ಗ್ರಂಥವಲ್ಲ. ಇದು ಇಡೀ ಜಗತ್ತಿನ ಮಾರ್ಗದರ್ಶನಕ್ಕಾಗಿ ಬಂದAತಹ ಗ್ರಂಥವಾಗಿದೆ. ಇದರ ಜೊತೆಯಲ್ಲಿ ಪ್ರವಾದಿಗಳು ನುಡಿದ ಉಪದೇಶಗಳು ಮಾರ್ಗದರ್ಶನ ವಿವರಗಳು ಹದೀಸನದಲ್ಲಿ ದೊರಕುತ್ತದೆ. ಇದು ಅವರ ಅನುಭವಾಮೃತದ ಬಿಂದುಗಳು. ಮನುಷ್ಯನ ಚಾರಿತ್ರö್ಯ ಮತ್ತು ದೈವಿ ಸಂಬAಧಗಳ ಬೆಳಕು, ಇದರಲ್ಲಿ ದೊರಕುತ್ತದೆ. ಕೇವಲ ಲೌಕಿಕ ಜೀವನವನ್ನು ಒಪ್ಪುವುದಿಲ್ಲ. ಇದಾದ ಮೇಲೆ ಅಂದರೆ ಮರಣಾನಂತರದ ಜೀವನವಿದೆ. ಇಸ್ಲಾಂ ಧರ್ಮದಲ್ಲಿ ಶಾಂತಿ, ಸಹನೆ ಮತ್ತು ಪರಧರ್ಮಸಹಿಷ್ಣುತು ಇದೆ.
ಹಬ್ಬಗಳ ಮಹತ್ವ:-
ಪ್ರಾಚೀನ ಕಾಲದಿಂದಲೂ ಮನುಷ್ಯ ಸಂಘ ಜೀವಿಯಾಗಿದ್ದಾನೆ. ಮನುಷ್ಯರು ಎಲ್ಲರೊಡನೆ ಬದುಕಿ ಬಾಳುವ ಸಂಸ್ಕೃತಿಯನ್ನು ಅವಲಂಬಿಸಿದ್ದಾರೆ. ನಿರಂತಹ ದೈನಂದಿನ ಕೆಲಸ ಕಾರ್ಯಗಳಿಂದ ಬೇಸತ್ತ ಮನುಷ್ಯನು ವರ್ಷದಲ್ಲಿ ಕೆಲವು ಸಲ ತನ್ನ ಈ ಕೆಲಸಗಳ ಒತ್ತಡಗಳನ್ನು ಬದಿಗೊತ್ತಿ ಸಂತೋಷಪಡುವ ಹರ್ಷೋಲ್ಲಾಸವನ್ನು ಅನುಭವಿಸುವ ಕೆಲವು ದಿನಗಳು
ಬರಬೇಕೆಂದು ಬಯಸುವುದು ಪ್ರಕೃತಿ ಸಹಜ. ದೈನಂದಿನ ಏಕತಾನತೆಗೆ ಹಬ್ಬಗಳೇ ಸರಿಯಾದ ಚಿಕಿತ್ಸೆ. ಜಗತ್ತಿನ ಎಲ್ಲಾ ಧರ್ಮೀಯರಲ್ಲೂ ಹಬ್ಬಗಳನ್ನು ಆಚರಿಸುವ ಸಂಪ್ರದಾಯವಿದೆ.
ಮುಸ್ಲಿಮರ ಹಬ್ಬಗಳು:-
ನಮ್ಮ ಹಬ್ಬಗಳು ಸಂಸ್ಕೃತಿಯ ಪ್ರತೀಕಗಳಾಗಿವೆ. ಅವುಗಳ ಹಿನ್ನಲೆಯನ್ನು ತಿಳಿದು ಹಬ್ಬಗಳನ್ನು ಆಚರಿಸಬೇಕಾಗಿದೆ. ಇಸ್ಲಾಂ ಧರ್ಮದ ರೀತ್ಯಾ ಮುಸ್ಲಿಮರು ಪ್ರಮುಖವಾಗಿ ಎರಡು ಹಬ್ಬಗಳನ್ನು ಮಾತ್ರ ಆಚರಿಸುವ ಅವಕಾಶ ಇದೆ. ಅವುಗಳೆಂದರೆ ರಂಜಾನ್ ಮತ್ತು ಬಕ್ರೀದ್ ಹಬ್ಬ ಮುಸ್ಲಿಮರ ಹಬ್ಬಗಳು ಸಾಮುದಾಯಿಕ ಐಕ್ಯತೆ, ಶಿಸ್ತು ಮತ್ತು ಬ್ರಾತತ್ವವನ್ನು ಬಿಂಬಿಸುತ್ತದೆ. ಈ ಹಬ್ಬಗಳೊಂದಿಗೆ ಕೆಲವೊಂದು ವಿಶಿಷ್ಟವಾದ ದಿನಗಳ ಆಚರಣೆಯನ್ನು ಮಾಡಲಾಗುತ್ತದೆ.
ಉಪವಾಸ ವ್ರತ :-
ಇಸ್ಲಾಂ ಧರ್ಮದ ರೀತ್ಯ ಎಲ್ಲಾ ಮುಸ್ಲಿಮರಿಗೂ ರಂಜಾನ್ ತಿಂಗಳಲ್ಲಿ ಒಂದು ತಿಂಗಳ ಕಾಲ ಉಪವಾಸ ಆಚರಿಸುವ ಆದೇಶವಿದೆ. ಉಪವಾಸ ಆಚರಿಸುವವರೆಲ್ಲರೂ ಮುಂಜಾನೆ ಉಪಹಾರ ಸೇವಿಸಿ ದಿನವಿಡೀ ನೀರು ಪಾನೀಯಗಳು ತಿನಿಸುಗಳು ತಿನ್ನದೆ ಸಾಯಂಕಾಲದವರೆಗೆ ಪುಣ್ಯ ಕಾರ್ಯ ಆರಾಧನೆ ಮಾಡುವಲ್ಲಿ ತೊಡಗಿಸಿಕೊಳ್ಳುವುದೇ ಉಪವಾಸ. ಉಪವಾಸವು ಒಂದು ಅಪ್ರತಿವಾದ ಆರಾಧನೆ, ಆದ್ದರಿಂದ ಉಪವಾಸವು ಎಲ್ಲಾ ಸಮುದಾಯಗಳ ಮೇಲೂ ಕಡ್ಡಾಯ ವಾಗಿತ್ತು. ಉಪವಾಸ ಆಚರಿಸುವವರು ಸುಳ್ಳು, ಕಪಟ, ಮೋಸ, ವಂಚನೆ, ಚಾಡಿ, ಕಳವು ಇತ್ಯಾದಿಗಳಿಂದ ದೂರವಿದ್ದರೆ ಮಾತ್ರ ಅಲ್ಲಾಹನ ಕೃಪೆಗೆ ಪಾತ್ರರಾಗುತ್ತಾರೆ. ಉಪವಾಸ ಕೇವಲ ಹೊಟ್ಟೆಯ ಉಪವಾಸವಲ್ಲ ಬದಲಿಗೆ “ಅಂಗಾAಗದ ಉಪವಾಸ” ಎಂದು ಕರೆಯಲಾಗಿದೆ.
ಉಪವಾಸವು ಸಹನೆ ಮತ್ತು ತಾಳ್ಮೆಯ ಪಾಠವನ್ನು ನೀಡುತ್ತದೆ. ಅನುಕಂಪ ಹಾಗೂ ಮಾನವೀಯತೆಯನ್ನು ಕಲಿಸುತ್ತದೆ. ಉಪವಾಸ ಆಚರಿಸುವವರು ಕೃತಜ್ಞತೆ, ವಿನಮ್ರತೆ ಹಾಗೂ ದಾಸ್ಯಭಾವನೆಯನ್ನು ಕಲಿಯುತ್ತಾರೆ.
ಹಸಿವನ್ನು ಅನುಭವಿಸಿದವರಿಗೆ ಮಾತ್ರ ಹಸಿದವನ ಕಷ್ಟವನ್ನರಿಯಲು ಸಾಧ್ಯವಾಗುತ್ತದೆ. ರಂಜಾನ್ ತಿಂಗಳಲ್ಲಿ ಅನೇಕರು ಉಪವಾಸ ಆಚರಿಸಿದವರಿಗೆ ಸಾಮೂಹಿಕ ಸೆಹರಿ ಮತ್ತು ಇಪ್ತಾರ್ ಕೂಟಗಳನ್ನು ಮಸೀದಿಗಳು ಮತ್ತು ಮನೆಗಳಲ್ಲಿ ಆಯೋಜಿಸುತ್ತಾರೆ. ರಂಜಾನ್ ಶ್ರೇಷ್ಟ ಮಾಸ, ಸಹನೆಯ ತಿಂಗಳಾಗಿದೆ. ಸತ್ಯ ವಿಶ್ವಾಸಿಯ ಸಮೃದ್ದಿಯ ತಿಂಗಳಾಗಿದೆ. ಉಪವಾಸದಿಂದ ಆತ್ಮ ಶುದ್ದಿಯಾದಂತೆ ದೇಹದ ಶುದ್ದಿಯೂ ಆಗುತ್ತದೆ. ಆತ್ಮ ನಿಯಂತ್ರಣ, ಆತ್ಮ ಸಂಸ್ಕರಣೆ,
-೫-
ಇಂದ್ರಿಯಗಳ ಮೇಲೆ ಹತೋಟಿ, ಭಾವ ವಿಕಾರಗಳಿರುತ್ತದೆ. ಜೀವನಾವಶ್ಯಕತೆಗಳನ್ನು ವೈಭವದಿಂದ ಪೂರೈಸುವ ಅಥವಾ ಅವುಗಳೆಡೆಗೆ ವೈರಾಗ್ಯ ಬೆಳೆಸಿಕೊಳ್ಳುವುದರ ನಡುವೆ ಸಂತುಲಿತ ರೂಪದಲ್ಲಿ ನ್ಯಾಯ ಮಾರ್ಗದಿಂದ ಅವುಗಳನ್ನು ಪೂರೈಸುವುದು ಉಪವಾಸದ ಶಿಕ್ಷಣವಾಗಿದೆ.
ಜಕಾತ್ (ಕಡ್ಡಾಯ ದಾನ) ರಂಜಾನ್ ತಿಂಗಳಲ್ಲಿ ತಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವುಳ್ಳವರು ಕಡ್ಡಾಯವಾಗಿ ಅರ್ಹರಿಗೆ ಜಕಾತ್(ದಾನ) ನೀಡಲೇ ಬೇಕಾಗಿದೆ. ಧನಿಕರ ಸ್ವತ್ತಿನಲ್ಲಿರುವ ಬಡವರ ಹಕ್ಕಿಗೆ ಜಕಾತ್ ಎಂದು ಕರೆಯುತ್ತೇವೆ. ಜಕಾತ್ ಇಸ್ಲಾಂ ಧರ್ಮದ ಆರ್ಥಿಕ ವ್ಯವಸ್ಥೆಯನ್ನು ಹಾಗೂ ಸಾಮಾಜಿಕ ಹೊಣೆಯನ್ನು ನಮಗೆ ತಿಳಿಸಿಕೊಡುತ್ತದೆ. ಒಬ್ಬ ಮನುಷ್ಯನು ತಾನು ದುಡಿದ
ಐಶ್ವರ್ಯದ ಶೇಕಡ ಎರಡೂವರೆ ಅಷ್ಟು ಭಾಗವನ್ನು ಬಡಬಗ್ಗರಿಗೆ, ದೀನದಲಿತರಿಗೆ, ದರಿದ್ರರಿಗೆ, ವಿಧವೆಯರಿಗೆ ವರ್ಷದಲ್ಲಿ ಒಂದು ಬಾರಿ ದಾನ ಮಾಡಬೇಕು. ದಾನ ಮಾಡಿದಾಗ ನಾನು ಕೊಟ್ಟಿದ್ದೇನೆ ಎಂಬ ಅಹಂಭಾವ ಅವನಿಗೆ ಬರಬಾರದು. ಜೊತೆಗೆ ಅವನ್ನು ದುಡಿಯುವ ಐಶ್ವರ್ಯ ಧರ್ಮ ಬದ್ದವಾಗಿರಬೇಕು.ಹಲಾಲ್ ಆಗಿರಬೇಕು. ಅಲ್ಲಾಹನ ಸೃಷ್ಟಿಯಲ್ಲಿ ಉಳ್ಳವರು ಇದ್ದಾರೆ. ಉಳ್ಳದವರು ಇದ್ದಾರೆ. ಇರುವವನು ಇಲ್ಲದವನಿಗೆ ಮಾಡಬೇಕಾದ ಧನ ಸಹಾಯ ಜಕಾತ್ ಮೂಲಕ ನಡೆದು ಹೋಗುತ್ತದೆ. ಜಕಾತ್ ದಾನವಾಗಲಿ ಭಿಕ್ಷೆಯಾಗಲಿ ಅಲ್ಲ. ಬಡವರ ಹಕ್ಕು.
ಜಕಾತ್ ಸಮಾಜದ ಎಲ್ಲಾ ವರ್ಗದ ಜನಗಳಿಗೆ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವ ಸಮಾನ ಅವಕಾಶ ನೀಡುತ್ತದೆ, ತನ್ಮೂಲಕ ಸೋದರತ್ವ ಭಾವನೆಯನ್ನು ಅವರಲ್ಲಿ ಬಿತ್ತುತ್ತದೆ.
ರಂಜಾನ್ ತಿಂಗಳಲ್ಲಿ ಕುರ್ಆನ್ ಅವತೀರ್ಣ:-
ಅಂತಿಮ ಪ್ರವಾದಿ ಮುಹಮ್ಮದ್(ಸ) ರವರ ಮೇಲೆ ಅಲ್ಲಾಹನಿಂದ ೨೩ ವರ್ಷಗಳ ಅವತೀರ್ಣವಾದ ಗ್ರಂಥವೇ ಪವಿತ್ರ “ಕುರ್ಆನ್”. ಈ ಪವಿತ್ರ ಗ್ರಂಥವು ರಂಜಾನ್ ಮಾಹೆಯಲ್ಲಿ ಸಂಪೂರ್ಣವಾಗಿ ಅವತೀರ್ಣವಾಯಿತು. ಅಂದಿನಿAದ ಇಂದಿನವರೆಗೆ ಈ ಪವಿತ್ರ “ಕುರ್ಆನ್” ಒಂದಕ್ಷರ ಸಹಾ ಬದಲಾವಣೆ ಹೊಂದದೆ ಸಂರಕ್ಷತವಾಗಿದೆ. ಪವಿತ್ರ “ಕುರ್ಆನ್” ಕೇವಲ
ಮುಸ್ಲಿಂರಿಗೆ ಅವತೀರ್ಣವಾದ ಗ್ರಂಥವಲ್ಲ. ಇದು ಇಡೀ ಮನುಕುಲದ ಕಲ್ಯಾಣ ಹಾಗೂ ಮಾರ್ಗದರ್ಶನದ ದಿವ್ಯವಾಣಿಯಾಗಿದೆ. ಒಬ್ಬ ಮನುಷ್ಯ ಹುಟ್ಟಿದ ದಿನದಿಂದ ಸಾಯುವವರಿಗೆ ಯಾವ ರೀತಿಯಲ್ಲಿ ಸಾಮಾಜಿಕ, ಹಾಗೂ ಕೌಟುಂಬಿಕ ಜೀವನ ಮಾಡುವುದರ ಬಗ್ಗೆ ಮಾರ್ಗ ದರ್ಶನ ಪವಿತ್ರ ಕುರ್ಆನ್ನಲ್ಲಿ ಉಲ್ಲೇಖಿಸಿದೆ.
-೬-
ರಂಜಾನ್ ತಿಂಗಳಲ್ಲಿ ಮುಸ್ಲಿಮರು ವಿಶೇಷವಾಗಿ “ಕುರ್ಆನ್” ಪಠಣ ಮಾಡುತ್ತಾರೆ. ಮತ್ತು “ತರಾವೀಹ್” ಎಂಬ ವಿಶೇಷ ನಮಾಜ್ನಲ್ಲಿ ಈ ತಿಂಗಳ ಪೂರ್ತಿ “ಕುರ್ಆನ್” ಪೂರ್ಣವಾಗಿ ಪಠಿಸುತ್ತಾರೆ. ಈ ತಿಂಗಳಲ್ಲಿ ಪವಿತ್ರ ಕುರ್ಆನ್ನೊಂದಿಗೆ ವಿಶೇಷ ಸಂಬAಧವಿದೆ.
ಇತರೆ ದೈವಿಕ ಗ್ರಂಥಗಳು ಈ ತಿಂಗಳಲ್ಲಿ ಅವತೀರ್ಣಗೊಂಡವು. ರಂಜಾನ್ ತಿಂಗಳ ಎರಡನೇ ಅಥವಾ ಮೂರನೇ ದಿನಾಂಕದAದು ಹಜರತ್ ಇಬ್ರಾಹಿಂರ(ಅ) ರವರಿಗೆ ಗ್ರಂಥ ನೀಡಲಾಯಿತು. ಹಜರತ್ ದಾವೂದ್(ಅ) ರವರಿಗೆ ಇದೇ ತಿಂಗಳ ೧೨ ಅಥವಾ ೧೮ ನೇ ದಿನಾಂಕದAದು ಜಬೂರ್ ನೀಡಲ್ಪಟ್ಟಿತು. ಹಜರತ್ ಮೂಸಾ(ಅ) ರವರಿಗೆ ಇದೇ ತಿಂಗಳ
ಆರನೇ ತಾರೀಖಿನಂದು ತೌರೇತ್ ಅವತೀರ್ಣವಾಯಿತು. ಹಜರತ್ಈಸಾ(ಅ) ರವರಿಗೆ ಈ ತಿಂಗಳ ೧೨ ಅಥವಾ ೧೩ನೇ ದಿನ “ಇಂಜೀಲ್” ನೀಡಲ್ಪಟ್ಟಿತು.
ಲೈಲತುಲ್ ಖದರ್:-
ರಂಜಾನ್ ಮಾಹೆಯ ೨೬ ರಂದು ರಾತ್ರಿ ಅತಿ ಶ್ರೇಷ್ಟವಾದ ರಾತ್ರಿಯೆಂದು ಪರಿಗಣಿಸಿದೆ. ಈ ರಾತ್ರಿ ಒಂದು ಸಾವಿರ ರಾತ್ರಿಗಳಿಗಿಂದ ಶ್ರೇಷ್ಟವಾದುದು. ಇದಕ್ಕೆ “ಲೈಲತುಲ್ ಖದರ್” ಎಂದು ಕರೆಯಲಾಗುತ್ತದೆ. ಈ ರಾತ್ರಿ ಪವಿತ್ರ “ಕುರ್ಆನ್” ಸಂಪೂರ್ಣವಾಗಿ ಅವತೀರ್ಣವಾದ ರಾತ್ರಿ ಯಾಗಿದೆ. ಪ್ರತಿಯೊಂದು ಮಸೀದಿಯಲ್ಲಿ ರಂಜಾನ್ ೨೬ನೇ ತಾರೀಖಿನಂದು ರಾತ್ರಿ ಇಡಿ ವಿಶೇಷ ನಮಾಜ್ ಮಾಡಿ ಪವಿತ್ರ ಕುರ್ಆನ್ ಪಠಿಸುತ್ತಾರೆ.
ರಂಜಾನ್ ತಿಂಗಳಲ್ಲಿ ನಡೆದ ಐತಿಹಾಸಿಕ ಘಟನೆಗಳು:-
ರಂಜಾನ್ ತಿಂಗಳಲ್ಲಿ ಕುರ್ಆನ್ ಪಾರಾಯಣವನ್ನು ವಿಶೇಷವಾಗಿ ಮಾಡುತ್ತಾರೆ. ಈ ತಿಂಗಳಿಗೆ ಪವಿತ್ರ “ಕುರ್ಆನ್” ನೊಂದಿಗೆ ವಿಶೇಷವಾದ ಸಂಬAಧವಿದೆ. ಪವಿತ್ರ ಕುರ್ಆನ್ ಪೂರ್ಣವಾಗಿ ಈ ತಿಂಗಳಲ್ಲಿ ಅವತೀರ್ಣವಾಯಿತು. ಇಸ್ಲಾಮಿ ಕ್ಯಾಲೆಂಡರ್ಪ್ರಕಾರ “ರಂಜಾನ್” ಪವಿತ್ರ ಮಾಸಗಳಲ್ಲಿ ಒಂದಾಗಿದೆ. ಈ ತಿಂಗಳಲ್ಲಿ ಅನೇಕ ಐತಿಹಾಸಿಕ ಘಟನೆಗಳು ನಡೆದವು. ಅವುಗಳಲ್ಲಿ ಮುಖ್ಯವಾದವು ಎಂದರೆ “ರಂಜಾನ್” ತಿಂಗಳ ದಿನಾಂಕ ೩ ರಂದು ಅಂತಿಮ ಪ್ರವಾದಿ ಮುಹಮ್ಮದ್(ಸ) ರವರ ಪುತ್ರಿ ಬೀಬಿ ಫಾತಿಮ ಸ್ವರ್ಗವಾಸವಾದರು.
ದಿನಾಂಕ ೧೦ ರಂದು ಪ್ರವಾದಿ ಮುಹಮ್ಮದ್(ಸ) ರವರ ಧರ್ಮಪತ್ನಿ ಬೀಬಿ ಖುತೇಜರವರ ಸ್ವರ್ಗವಾಸ, ದಿನಾಂಕ ೧೮ ರಂದು ಪ್ರಸಿದ್ದ ಬದರ್ ಸಮರ ನಡೆಯಿತು ಮತ್ತು ಬೀಬಿ ಆಯಿಷಾ (ರ)ರವರು ಸ್ವರ್ಗವಾಸವಾದರು. ದಿನಾಂಕ ೨೦ ರಂದು ಮಕ್ಕಾಪಟ್ಟಣದ ಮೇಲೆ ಜಯವನ್ನು
-೭-
ಸಾಧಿಸಲಾಯಿತು. ದಿನಾಂಕ ೨೧ರಂದು ಹಜರತ್ ಆಲಿರವರು ಇಸ್ಲಾಂ ಧರ್ಮಕ್ಕಾಗಿ ಹುತಾತ್ಮರಾದರು.
ಈದುಲ್ ಪಿತರ್(ರಂಜಾನ್ ಹಬ್ಬ)
ಇಸ್ಲಾಂ ಕ್ಯಾಲೆಂಡರಿನ ೯ (ಒಂಬತ್ತ)ನೇ ತಿಂಗಳು ರಂಜಾನ್, ಇಸ್ಲಾಂ ಧರ್ಮದ ಅತಿ ಪ್ರಮುಖವಾದ ಹಬ್ಬವೆಂದರೆ ಈದುಲ್ ಪಿತರ(ರಂಜಾನ್) ಜಗತ್ತಿನ ಮುಸ್ಲಿಮರೆಲ್ಲರೂ ಒಂದು ತಿಂಗಳ ಕಾಲ ಸತತ ಉಪವಾಸ ವ್ರತ ಆಚರಿಸಿದ ನಂತರ “ಶವ್ವಾಲ್” ತಿಂಗಳ ಒಂದನೇ ತಾರೀಖಿನಂದು ಆಚರಿಸಲಾಗುವ ಹಬ್ಬವಿದು. ಒಂದು ತಿಂಗಳು ಪೂರ್ತಿ ಪುಣ್ಯಕಾರ್ಯಗಳನ್ನು
ಮಾಡಿದ ಪ್ರತಿಫಲವಾಗಿ ಪಡೆಯುವ ಬಹುಮಾನವು “ರಂಜಾನ್ ಹಬ್ಬ”. ಈ ಹಬ್ಬದ ಸಮಯದಲ್ಲಿ ನೀಡಲಾಗುವ ಧಾನ(ಪಿತ್ರಕ್ಕೆ) ಸಂಬAಧಿಸಿದAತೆ “ಈದುಲ್ಪಿತರ್” ಎಂಬ ಹೆಸರು ಬಂದಿದೆ. ಬಾಲಚಂದ್ರ ದರ್ಶನ ಮಾಡಿ ರಂಜಾನ್ ತಿಂಗಳನ್ನು ಉಲ್ಲಾಸ, ಭಕ್ತಿಯೊಂದಿಗೆ ಆಚರಿಸಲು ಜಗತ್ತಿನ ಮುಸ್ಲಿಮರೆಲ್ಲರೂ ಪೂರ್ಣ ಸಿದ್ದತೆ ಮಾಡಿಕೊಳ್ಳುತ್ತಾರೆ. ರಂಜಾನ್ ತಿಂಗಳಲ್ಲಿ ಆರಾಧನೆಗಳ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಕಡ್ಡಾಯ ನಮಾಜ್ನ ಹೊರತಾಗಿ ಐಚ್ಚಿಕ ನಮಾಜ್ಗಳನ್ನು ಹೆಚ್ಚೆಚ್ಚು ಆಚರಿಸುತ್ತಾರೆ. ತಿಂಗಳು ಪೂರ್ಣ ಪುಣ್ಯ ಕಾರ್ಯಗಳನ್ನು ಮಾಡುತ್ತಾರೆ.
ಎಲ್ಲಾ ಮುಸ್ಲಿಮರು ಒಂದು ತಿಂಗಳ ಕಾಲ ಉಪವಾಸ ವ್ರತ ಆಚರಿಸುತ್ತಾರೆ. ರಂಜಾನ್ ಮಾಹೆ ಮುಗಿದ ನಂತರ “ಶವ್ವಾಲ್” ತಿಂಗಳ ಬಾಲಚಂದ್ರನ ದರ್ಶನವಾದ ಮಾರನೆಯ ದಿನ ಈದುಲ್ಪಿತರ್ (ರಂಜಾನ್)ಆಚರಿಸುತ್ತಾರೆ. ಅಂದು ಎಲ್ಲರೂ ಉತ್ತಮ ಹೊಸ ಉಡುಪುಗಳನ್ನು ಧರಿಸಿ ಬೆಳಗಿನ ಉಪಹಾರದೊಂದಿಗೆ ಸಿಹಿಯನ್ನು ಸೇವಿಸಿ ಪರಿಮಳ ದ್ರವ್ಯಗಳನ್ನು ಪೂಸಿಕೊಂಡು “ಈದ್ಗಾ” ಮೈದಾನಗಳಿಗೆ ತೆರಳಿ ಅಲ್ಲಿ ವಿಶೇಷ ನಮಾಜ್ ಆಚರಿಸಿ, ಸಾರ್ವಜನಿಕರಲ್ಲಿ “ಈದ್ ಮುಬಾರಕ್” ಎಂದು ಹೇಳಿ ಎಲ್ಲರಿಗೂ ಶುಭ ಕೋರುತ್ತಾರೆ. ಮುಸ್ಲಿಮರು ಇತರೆ ಧರ್ಮೀಯರನ್ನು ಶುಭಹಾರೈಸುತ್ತಾರೆ. ಹಾಗೂ ಅಂದು ಸಹ ಭೋಜನ ವ್ಯವಸ್ಥೆಯನ್ನು ಹಾಗೂ ಇಡೀ ಮನುಕುಲದ ಕಲ್ಯಾಣ ಮತ್ತು ವಿಶ್ವ ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ.
ಭಾರತ ದೇಶದಲ್ಲಿ ರಂಜಾನ್ ಹಬ್ಬದ ಆಚರಣೆ:-
ಸರ್ವಜನಾಂಗೀಯ ಶಾಂತಿಯ ತೋಟದಂತಿರುವ ನಮ್ಮ ಭಾರತ ದೇಶ “ವಿಭಿನ್ನತೆಯಲ್ಲಿ ಐಕ್ಯತೆ”ಗಾಗಿ ಜಗತ್ತಿನಲ್ಲಿಯೇ ಪ್ರಸಿದ್ದವಾಗಿದೆ. ಹಿಂದಿನಿAದಲೂ ಕೂಡ ಮುಸ್ಲಿಂ ಬಾಂಧವರು ದೇಶದ ಇತರೆ ಧರ್ಮೀಯರಲ್ಲಿ ಜೊತೆಗೂಡಿ ಪರಸ್ಪರ “ಈದ್ಮುಬಾರಕ್” ಎಂದು ಶುಭ ಹಾರೈಸಿ ರಂಜಾನ್ ಹಬ್ಬದ ಸಂತೋಷವನ್ನು ಹಂಚಿಕೊಳ್ಳುವ ಸಂಪ್ರದಾಯವಿದೆ. ದೇಶದ ಇತರೆ ಧರ್ಮೀಯರು ರಂಜಾನ್ ತಿಂಗಳಲ್ಲಿ ಮುಸ್ಲಿಂ ಸಮುದಾಯದವರಿಗೆ ಇಪ್ತಾರ್ ಕೂಟಗಳನ್ನು ಆಯೋಜಿಸುವ ಮತ್ತು ಮುಸ್ಲಿಮರು ಇದೇ ರೀತಿ ಇಪ್ತಾರ್ ಕೂಟ ಹಾಗೂ “ಈದ್ಮಿಲನ್” ಸಮಾರಂಭಗಳು ಆಯೋಜಿಸುವ ಸಂಪ್ರದಾಯವಿದೆ.
ಇಂತಹ ಸರ್ವಧರ್ಮೀಯರ ಸಮ್ಮಿಲನದ “ಇಪ್ತಾರ್” ಹಾಗೂ “ಈದ್ಮಿಲನ್” ಕೂಟಗಳು ಕೇವಲ ಸಂತೋಷ ಹಾಗೂ ಸಾಮೂಹಿಕ ಭೋಜನ ಕೂಟಗಳಲ್ಲದೆ ಭಾವೈಕ್ಯತೆ, ಕೋಮು ಸೌಹಾರ್ಧತೆ, ಪರಧಮ ಸಹಿಷ್ಣುತೆ, ಹಾಗೂ ನಮ್ಮ ರಾಷ್ಟçಪ್ರೇಮದ ಸಂಕೇತಗಳಾಗಿವೆ. ಇಂತಹ ಸಮ್ಮಿಲನಗಳಿಂದ ನಮ್ಮಲ್ಲಿರುವ ಪರಸ್ಪರ ತಪ್ಪು ಕಲ್ಪನೆಗಳು ದೂರವಾಗುತ್ತವೆ.
ಪವಿತ್ರ “ಈದುಲ್ಪಿತರ್”(ರಂಜಾನ್ ಹಬ್ಬ) ದಿನದಂದು ಭಾರತ ದೇಶದ ಪ್ರಜೆಗಳಾದ ನಾವುಗಳು ಸೋದರರಾಗಿ ಬಾಳೋಣ, ಸೋದರರಾಗಿ ಬಾಳುತ್ತ ನಾವು ಸದಾಕಾಲ ದೇಶದ ಹಿತವನ್ನು ಬಯಸೋಣ, ಜಾತಿ ಜಾತಿಗಳ ಮಧ್ಯೆ ಇರುವ ಅಡ್ಡ ಗೋಡೆಗಳನ್ನು ಹೊಡೆದು ಶೋಷಣೆಯ ಬೇರನ್ನು ಕಿತ್ತು ಎಸೆದು ನಮ್ಮ ಸಂವಿಧಾನದ ಅವಕಾಶಗಳ ರೀತ್ಯ ಸಾಮಾಜಿಕ ನ್ಯಾಯ, ಸಮಾನತೆ, ನೆಮ್ಮದಿ ಮತ್ತು ವಿಶ್ವಶಾಂತಿಯನ್ನು ಬಯಸೋಣ ಎಂಬ ಪ್ರತಿಜ್ಞೆಯನ್ನು ಮಾಡಬೇಕಾಗಿದೆ.
*****
