ಶ್ರೀ ರಾಮಕೃಷ್ಣ ಸೇವಾಶ್ರಮ,ಪಾವಗಡ
ವಿಶೇಷ ಸತ್ಸಂಗ
*ಬೆಂಗಳೂರು ಮಹಾನಗರದ*
*ಶ್ರೀ ರಾಮಕೃಷ್ಣಮಠ ಹಾಗೂ ವಿವೇಕಬಳಗ, ಬೆಂಗಳೂರು ರವರ 50ಕ್ಕೂ ಹೆಚ್ಚು ಭಕ್ತಾದಿಗಳು ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸಹಕಾರದಿಂದ ಈ ಪವಿತ್ರವಾದ ಸತ್ಸಂಗ ಕಾರ್ಯಕ್ರಮ ಭಜನಾ, ವೇದಘೋಷದಿಂದ ಆರoಭವಾಗಿ ಸುಶ್ರಾವ್ಯ ಭಕ್ತಿಗೀತೆಗಳ ಮಹಾಪೂರವೇ ಹರಿದುಬಂದಂತಿತ್ತು.* *ಉಪನ್ಯಾಸ ಹಾಗೂ ಅತಿಮಧುರ ಸಂಗೀತ ಲಹರಿ*ಹಾಗೂ*
*ಜ್ಞಾನ ಸಾರಾಮೃತದ* *ನುಡಿಮುತ್ತುಗಳ ರಸದೌತಣದ ಸವಿಯನ್ನು ಭಾಗವಹಿಸಿದ ಭಕ್ತಾದಿಗಳಿಗೆ ಪರಮ ಪೂಜ್ಯ* *ಶ್ರೀ ಸ್ವಾಮಿ ಜಪಾನಂದಜಿ ರವರು ನಡೆಸಿಕೊಟ್ಟು ಇಡೀ ಆಶ್ರಮದ ವಾತಾವರಣವೇ ಭಕ್ತಿಯ ಸಾಗರ ದಲ್ಲಿ ತೇಲಿಸಿದರು*
*ತಮ್ಮ ಆಶೀರ್ವಚನದಲ್ಲಿ ಪೂಜ್ಯ ಸ್ವಾಮೀಜಿ ನಿಜವಾದ ಅರ್ಥದಲ್ಲಿ ಸತ್ಸಂಗದ ಮಹಿಮೆ ಹಾಗೂ ತಮಗೆ ಶಿಕ್ಷಣವನ್ನು 12 ವರುಷಗಳಿಗೂ ಮಿಗಿಲಾಗಿ ನೀಡಿದ ಪೂಜ್ಯ ಸ್ವಾಮೀಜಿ ಪುರುಷೋತ್ತಮಾನಂದಜೀ ಹಾಗೂ ಸ್ವಾಮೀಜಿ ಚಿದಾನಂದ ಜೀ ಮಹಾರಾಜರುಗಳ ಪರಮಾಪವಿತ್ರ ಸಾನಿಧ್ಯ ಇಂದು ಈ ತೇರನಾದ ಗಾನ* *ಪ್ರವಚನಗಳನ್ನು ನಿರಾಯಾಸವಾಗಿ ಕೇವಲ* *ಭಾರತದಲ್ಲಿಯೇ ಅಲ್ಲದೆ*
*ವೀದೇಶಗಳಲ್ಲಿಯೂ* *ಹಳ್ಳಿಗಾಡಿನಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದವರೆಗೂ ನಿರ್ಗಳವಾಗಿ ಉಪನ್ಯಾಸಗಳನ್ನು ನೀಡುವಂತಹ ಸ್ಥಿತಿಗೆ*
*ಶ್ರೀ ರಾಮಕೃಷ್ಣ ಮಠದ ಹಾಗೂ ಸನ್ಯಾಸಜೀವನದ 53 ವರುಷಗಳ ತರಬೇತಿಯೇ ಮೂಲ ಅಡಿಪಾಯ ದೊರಕಿದಂತೆಯೇ ಸರಿ*
*ಈ ರೀತಿಯಾಗಿ ಪೂಜ್ಯ ಜಪಾನಂದಜಿ ತಮ್ಮ ಸನ್ಯಾಸಿ ಜೀವನದ ಅನುಭವಗಳನ್ನು ಹಾಗೂ ಸಾಧು ಸಂತರ ನೆರಳಿನಲ್ಲಿ ತಮ್ಮ ಅಧ್ಯಾತ್ಮಿಕ ಜೀವನ ದ ನೆನಪಿನ ಪುಟಗಳನ್ನು ವಿವರಿಸಿದರು*.
*1974 ನೇ ಇಸವಿಯಲ್ಲಿ ಮೈಸೂರು ಶ್ರೀ ರಾಮಕೃಷ್ಣ ಆಶ್ರಮಕ್ಕೆ ಅಧಿಕೃತವಾಗಿ ಸೇರಿದ ನಂತರ ಪೂಜ್ಯ ಸೋಮನಾಥಾನಂದಜಿ, ಸ್ವಾಮಿ ಹರ್ಷಾನಂದಜಿ, ಸ್ವಾಮೀಜಿ ಸುರೇಶಾ ನಂದಜಿ, ಸ್ವಾಮೀಜಿ ಜಗದಾತ್ಮಾನಂದಜಿ ರಂತಹ ಸಾಧುಗಳಿಂದ ತಮಗೆ ದೊರಕಿದ ಸತ್ಸಂಗಗಳ ಪ್ರಭಾವವೇ ಇಂದು ತಮ್ಮನ್ನು ದಿವ್ಯತ್ರಯರಲ್ಲಿ ಪೂರ್ಣ ಶರಣಾಗತಿ ಹೊಂದಿ ಸೇವಾ ಯಜ್ಞಗಳನ್ನು ನಿರಂತರವಾಗಿ ಕೈಗೊಳ್ಳುವಂತಾಗಿದೆ ಎಂದು ಸತ್ಸಂಗಗಳ ಮಹಿಮೆಯನ್ನು ವಿವರಿಸಿದರು*.
*ಒಬ್ಬ ಸಾಮಾನ್ಯ ಯುವಕ ಸತ್ಸಂಗದ ಫಲದಿಂದ ಇಡೀ ಜೀವನವನ್ನೇ ದಿವ್ಯತ್ರಯರ ಚರಣಕಮಲಗಳಲ್ಲಿ ಅರ್ಪಿಸಿ ಆಧ್ಯಾತ್ಮ ಮಾರ್ಗದಲ್ಲಿ ಪಥಿ ಸುವಂತಾಗಿದೆ.ಈ ಆಧ್ಯಾತ್ಮ ಜೀವನ ಯಾತ್ರೆಯಲ್ಲಿ ಅನೇಕರೀತಿಯ ಕಷ್ಟಗಳನ್ನು ಎದುರಿಸಿಕೊಂಡು ಧೈರ್ಯ ದಿಂದ ಅನೇಕ ಸಂಧರ್ಭದಲ್ಲಿ ಮನುಷ್ಯ ರೂಪದ ದಾನವರನ್ನೂ ಸಹ ಎದುರಿಸುತ್ತ ತ್ರಿಶಕ್ತಿಗಳ ಬಲದಿಂದ ಮುಂದೆ ಮುಂದೆ ಸಾಗುವ ಶಕ್ತಿ ಸತ್ಸಂಗದ ಪ್ರಭಾವದಿಂದ ಪಡೆದಂತಾಗಿದೆ*
*ಎಂದು ಅತ್ಯಂತ ಸುಂದರವಾದ ಉದಾಹರಣೆ ಗಳ ಮೂಲಕ ನೆರೆದ ಸಭೀಕರನ್ನು ಮಂತ್ರ ಮುಗ್ಧರಾಗಿಸಿದರು*. *ಜೀವನದ ಆರ್ಥ ಹಾಗೂ ಗುರಿಯನ್ನು ಸೇರುವವರೆ ಗೂ ಧೈರ್ಯದಿಂದ ಮುನ್ನಡೆಯುವಂತೆ ಪ್ರೋತ್ಸಾಹ ನೀಡುವುದೇ ಸತ್ಸಂಗ ಎಂದು ಬಣ್ಣಿ ಸಿದರು.
*ಈ ಕಾರ್ಯಕ್ರಮದಲ್ಲಿ ಪಾವಗಡದ ಭಕ್ತರೂ ಭಾಗವಹಿಸಿ ಸತ್ಸಂಗದ ಪ್ರಭಾವವನ್ನು ಸವಿದರು*
ಇದೇ ಸಂಧರ್ಭದಲ್ಲಿ ಪಾವಗಡದ ಮಹಿಳಾ ಸದ್ಭಕ್ತರು ಪ್ರಪ್ರಥಮ ಬಾರಿಗೆ ಶ್ರೀ ಶ್ರೀ ರುದ್ರಪಾಠ ವನ್ನು ನಡೆಸಿಕೊಟ್ಟರು*.
*ಈ ಅಪೂರ್ವ ಸಾಧನೆಯನ್ನು ಕಂಡ ಬೆಂಗಳೂರಿನ ಭಕ್ತರು ಅತ್ಯಾಶ್ಚರ್ಯ ಪಟ್ಟು ಪೂಜ್ಯ ಸ್ವಾಮಿ ಜಪಾನಂದಜಿರವರ ನಿಷ್ಠೆ ಹಾಗೂ ಶ್ರದ್ದೆಯಿಂದ ವೇದಪಾಠ ವನ್ನು ಹೇಳಿ ಕೋಟದ್ದು ಈ ಭಾಗದ ಭಕ್ತರ ಪುಣ್ಯವೇ ಸರಿ ಎಂದು ಮುಕ್ತಕಂಠದಿಂದ ಶ್ಲಾಘಸಿದರು.*
*ಒಂದು ಬಸ್ಸಿನಲ್ಲಿ ಪ್ರಯಾಣಮಾಡಿ ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮಕ್ಕೆ ಭೇಟಿನೀಡುತ್ತಿರುವುದು ಇದೇನು ಮೊದಲಲ್ಲ.* *ಪೂಜ್ಯರನ್ನು ಮೂರುದಶಕಗಳಿಂದ ಬಲ್ಲ ಹಿರಿಯ ಭಕ್ತರು ಪೂಜ್ಯರಿಗೆ ಗೌರವಸಲ್ಲಿಸಿ ಅತ್ಯಂತ ಸಂತೋಷದಿಂದ ಮರಳಿದರು*
ಒಟ್ಟಿನಲ್ಲಿ ಶ್ರೀ ರಾಮಕೃಷ್ಣ ಸೇವಾಶ್ರಮ ಪಾವಗಡದಲ್ಲಿ ನೆರವೇರಿದ ವಿಶೇಷ ಗಾನ – ಪ್ರವಚನ – ಸತ್ಸಂಗ ಕಾರ್ಯಕ್ರಮ ನೆರೆದ ನೂರಾರುಭಕ್ತರಿಗೆ ಆಧ್ಯಾತ್ಮದ ಸಿಂಚನವನ್ನು ನೀಡಿದಂತಾಯಿತು.
ವರದಿ ನಾಗರಾಜು ಹಿರಿಯ ಸಾಹಿತಿ ಪತ್ರಕರ್ತರು.
