ಸರ್ಕಾರಿ ವಿಜ್ಞಾನ ಕಾಲೇಜಿನ ರಾ. ಸೇ.ಯೋ ವಿಶೇಷ ವಾರ್ಷಿಕ ಶಿಬಿರ. ದಂಡಿನ ಕುರುಬರಟ್ಟಿ.
ಗ್ರಾಮಗಳ ಸ್ವರಾಜ್ಯ ಗಾಂಧೀಜಿಯವರ ಕನಸಾಗಿತ್ತು.
ತುಮಕೂರು -ಚಿತ್ರದುರ್ಗ… ಗ್ರಾಮಗಳು ಸ್ವಾವಲಂಬಿಗಳಾಗಿ ಸ್ವಂತ ಕಾಲ ಮೇಲೆ ನಿಲ್ಲುವ ಕನಸನ್ನ ಮಹಾತ್ಮ ಗಾಂಧೀಜಿಯವರು ಕಂಡಿದ್ದರು, ಈಗಲೂ ಸಹ ಗ್ರಾಮಗಳು ಪರಾವಲಂಬಿಗಳಾಗಿ, ಬಡತನವನ್ನು, ಶೋಷಣೆಯನ್ನ ಎದುರಿಸುವಂತಾಗಿದೆ, ಗ್ರಾಮೀಣ ಜನರ ಬದುಕನ್ನ ಸುಂದರಗೊಳಿಸುವ ನಿಟ್ಟಿನಲ್ಲಿ ಎನ್ಎಸ್ಎಸ್ ಕೆಲಸ ಮಾಡಬೇಕು ಎಂದು ದಂಡಿನ ಕುರುಬರಟ್ಟಿ ಇಂಜಿನಿಯರ್ ಶ್ರೀ ಗಂಗಾಧರ್ ಟಿ. ಪಿ. ಮಾತನಾಡಿದರು.
ಅವರು ಚಿತ್ರದುರ್ಗ ನಗರದ ಸಮೀಪವಿರುವ ದಂಡಿನ ಕುರುಬರಟ್ಟಿಯಲ್ಲಿ ಸರ್ಕಾರಿ ವಿಜ್ಞಾನ ಕಾಲೇಜು ಆಯೋಜಿಸಿದ್ದ ಎನ್ ಎಸ್ ಎಸ್ ವಿಶೇಷ ವಾರ್ಷಿಕ ಶಿಬಿರದಲ್ಲಿ ಗ್ರಾಮದ ಎತ್ತುಗಳಿಗೆ ಮತ್ತು ನೇಗಿಲುಗಳಿಗೆ ಪೂಜೆ ಸಲ್ಲಿಸುತ್ತಾ ಮಾತನಾಡುತ್ತಿದ್ದರು.
ಗ್ರಾಮಗಳು ಈಗ ಹಾಲನ್ನು ಸಹ ಉತ್ಪಾದನೆ ಮಾಡದೆ, ಹೊರಗಿನಿಂದ ತರಿಸಿಕೊಳ್ಳುವಂತಾಗಿದೆ, ಹಿಂದೆ ಕೃಷಿ ಉಪಕರಣಗಳನ್ನು ಸಹ ಗ್ರಾಮದಲ್ಲೇ ತಯಾರಿಸಿಕೊಳ್ಳುತ್ತಿದ್ದರು, ಎಣ್ಣೆ, ಕಾಳು, ಬೀಜ, ಗೊಬ್ಬರ ಉತ್ಪಾದನೆಯಲ್ಲಿ ಸಹ ಗ್ರಾಮಗಳು ಸ್ವಾವಲಂಬಿಗಳಾಗಿದ್ದವು, ಈಗ ಎಲ್ಲವೂ ಸಹ ನಗರಗಳಿಂದ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ವಿದ್ಯಾರ್ಥಿಗಳು ಶಿಕ್ಷಣ ಮುಗಿದ ನಂತರ ಗ್ರಾಮಸ್ಥರಿಗೆ ಸಹಾಯ ಮಾಡಬೇಕು, ಸಾರ್ವಜನಿಕ ಆಸ್ತಿಗಳನ್ನ ರಕ್ಷಿಸುವಂತಹ ಏರ್ಪಾಡು ಮಾಡಬೇಕು, ಆಸ್ಪತ್ರೆ, ಶಾಲೆಯ ಅಭಿವೃದ್ಧಿಗೊಳಿಸಿ ಸಾಮಾನ್ಯ ಜನರು ಉಪಯೋಗಿಸಿಕೊಳ್ಳುವಂತೆ ಮಾಡಬೇಕು ಎಂದರು.
ಹೆಚ್. ವೈ ಶಿವಮೂರ್ತಿ ಶಿಕ್ಷಕರು ಮಾತನಾಡುತ್ತಾ ಕುದುರೆ ಮೊಟ್ಟೆ ಇಡುತ್ತದೆ ಎಂದು ನಗರದ ವಿದ್ಯಾರ್ಥಿಗಳು ನಂಬಿದ್ದರು,, ಆದರೆ ಅದು ಕುದುರೆ ನಿಂತಿದ್ದ ಜಾಗದಲ್ಲಿ ಕುಂಬಳಕಾಯಿ ನೋಡಿ ಕುದುರೆ ಮೊಟ್ಟೆ ಇಡುತ್ತದೆ ಎಂದುಕೊಳ್ಳುತ್ತಿದ್ದರು, ಗೋದಿ ಹಿಟ್ಟು ಎಲ್ಲಿಂದ ಬರುತ್ತದೆ ಎಂದರೆ ಕಂಪನಿಗಳಿಂದ ಬರುತ್ತದೆ ಎಂಬಂತಾಗಿದೆ, ಮೊಬೈಲ್ಗಳನ್ನು ಉಪಯೋಗ ಮತ್ತು ದುರುಪಯೋಗ ಎರಡನ್ನು ಸಹ ಮಕ್ಕಳು ಕಲಿತುಕೊಂಡು, ಗ್ರಾಮಗಳಲ್ಲಿ ಬಂದು ಸ್ವಾಭಿಮಾನಿ ಜೀವನವನ್ನು ಕುಳಿತುಕೊಳ್ಳಬೇಕು ಎಂದರು.
ಭೌತಶಾಸ್ತ್ರ ವಿಭಾಗದ ಪ್ರೊ ಕೃಷ್ಣಮೂರ್ತಿ ಅವರು ಮಾತನಾಡುತ್ತಾ ಅವಿದ್ಯಾವಂತರು ಮಾಡುವ ತಪ್ಪಿಗಿಂತ ವಿದ್ಯಾವಂತರು ಮಾಡುವ ತಪ್ಪಿಗೆ ಹೆಚ್ಚು ಶಿಕ್ಷೆ ನೀಡಬೇಕಾಗುತ್ತದೆ ಹಾಗಾಗಿ ಶಿಕ್ಷಣವಂತರು ಬಹಳ ಎಚ್ಚರಿಕೆಯಿಂದ ಜೀವನ ಮಾಡಿ ಇನ್ನೊಬ್ಬರಿಗೆ ಮಾದರಿಯಾಗಬೇಕು ಎಂದರು.
ಗೂಡ ವಿಜಯಕುಮಾರ್ ಅವರು ಮಾತನಾಡುತ್ತಾ ಗ್ರಾಮದಲ್ಲಿರುವ ಅಭಿವೃದ್ಧಿಗೆ ಆರ್ಥಿಕ ಸಹಾಯ ಮಾಡಲು ಸ್ಥಿತಿವಂತರೂ ಪ್ರಯತ್ನಿಸಬೇಕು ಎಂದರು.
ಅಧ್ಯಕ್ಷೀಯ ಭಾಷಣ ಮಾಡಿದ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸುಧಾಮ ವಿ.ಎಂ. ಮಾತನಾಡುತ್ತಾ ವಿದ್ಯಾರ್ಥಿಗಳು ಸೋಮಾರಿತನದಿಂದ ಹೊರಬಂದು ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕು, ಉಳುಮೆ ಮರೆತ ರೈತರು ಸಹ ಮುಂದೊಂದು ದಿನ ಸಂಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳುತ್ತಾರೆ, ಗ್ರಾಮಸ್ಥರು ಮಳೆಯನ್ನ ನೆಚ್ಚಿಕೊಂಡು ಬದುಕು ಸಾಗಿಸುತ್ತಿದ್ದಾರೆ, ಪರಿಸರ ರಕ್ಷಣೆ ಮಾಡಿಕೊಂಡು ನಾವು ಬದುಕು ಕಟ್ಟಿಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಲ್ಲವಿ ಎಸ್, ನಾಗಭೂಷಣ್, ರಶ್ಮಿ, ಬಿ ಇ, ಸುಷ್ಮಾ ಬಿ. ಇ. ಮಲ್ಲಿಕಾರ್ಜುನ್, ಜಯಣ್ಣ, ಡಾ ಸೌಮ್ಯ, ಹಾಜರಿದ್ದರು.
ಗಂಜಿ ಕಟ್ಟೆ ಕೃಷ್ಣಮೂರ್ತಿ ಮತ್ತು ಶ್ರೀಮತಿ ಪಿ. ಮೀನಾಕ್ಷಿ ಅವರು ಹಾಸ್ಯ ಮತ್ತು ಜಾನಪದ ರಸಮಂಜರಿ ಕಾರ್ಯಕ್ರಮ ನೀಡಿ ಜನರನ್ನ ರಂಜಿಸಿದರು. ಪ್ರಜ್ವಲ್ ಪ್ರಾರ್ಥಿಸಿದರು, ಹಂಸ ವಂದಿಸಿದರು.
