ಗ್ರಾಮೀಣ ಮಹಿಳೆಯರಿಗಾಗಿ ಕ್ರೀಡಾ ಹಬ್ಬ ಯಶಸ್ವಿ*
ಸೀಬಿ ಅಗ್ರಹಾರ ಗ್ರಾಮ ಪಂಚಾಯತಿಯ L.H. ಪಾಳ್ಯ ಗ್ರಾಮದಲ್ಲಿ ನವ್ಯ ದಿಶ ಸಂಸ್ಥೆಯ ಯುವ ಚಾವಡಿ ಕಾರ್ಯಕ್ರಮದಡಿಯಲ್ಲಿ ರಚಿತವಾಗಿರುವ ಸ್ವರ್ಣ ಬೆಳಕು ಯುವಜನ ಸಂಘದ ವತಿಯಿಂದ ಗ್ರಾಮೀಣ ಮಹಿಳೆಯರಿಗಾಗಿ “ಕ್ರೀಡಾ ಹಬ್ಬ”ವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಸಂಸ್ಥೆಯ ಕಾರ್ಯಕ್ರಮ ಸಂಯೋಜಕರಾದ ಸಿ.ಎಂ.ಎಸ್ ಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನವ್ಯ ದಿಶ ಸಂಸ್ಥೆಯ ಉದ್ದೇಶ, ಸ್ವರ್ಣ ಬೆಳಕು ಯುವಜನ ಸಂಘದ ಕಾರ್ಯಚಟುವಟಿಕೆಗಳು ಹಾಗೂ ಕ್ರೀಡಾ ಹಬ್ಬದ ಮಹತ್ವದ ಕುರಿತು ಗ್ರಾಮಸ್ಥರಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಮಹಿಳೆಯರಿಗೆ ಜೀವನ ಕೌಶಲ್ಯಗಳನ್ನು ಉತ್ತೇಜಿಸುವ ವಿವಿಧ ಕ್ರೀಡಾ ಚಟುವಟಿಕೆಗಳನ್ನು ಸಂಘದ ಸದಸ್ಯರು ಆಯೋಜಿಸಿ, ಭಾಗವಹಿಸಿದ ಮಹಿಳೆಯರಿಂದ ಆಟಗಳನ್ನು ಆಡಿಸಲಾಯಿತು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಇದರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಹಿಳೆಯರಿಗೆ ವಿವಿಧ ತರಕಾರಿಗಳ ಬೀಜಗಳನ್ನು ವಿತರಿಸಿ, ಸ್ವಾವಲಂಬನೆ ಹಾಗೂ ಮನೆಮಟ್ಟದಲ್ಲಿ ತೋಟಗಾರಿಕೆಗೆ ಉತ್ತೇಜನ ನೀಡಲಾಯಿತು.
ಈ ಕ್ರೀಡಾ ಹಬ್ಬದಲ್ಲಿ ಸ್ವರ್ಣ ಬೆಳಕು ಯುವಜನ ಸಂಘದ ಪದಾಧಿಕಾರಿಗಳು, ಸಂಸ್ಥೆಯ ಅಶ್ವಿನಿ ಎಂ., ಅಂಬಿಕಾ, ಭವ್ಯ ಹಾಗೂ 50 ಕ್ಕೂ ಹೆಚ್ಚು ಗ್ರಾಮದ ಗ್ರಾಮಸ್ಥರು, ಯುವಜನರು ಮತ್ತು ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.
