ಆಟೋ ಚಾಲಕರ ಸಮಸ್ಯೆಗೆ ಸರಕಾರ ಸ್ಪಂಧಿಸಲಿ
ಡಾ.ಇAತಿಯಾಜ್ ಅಹಮದ್ ಒತ್ತಾಯ
ತುಮಕೂರು: ರಾಜ್ಯದ ವಿವಿಧ ಆಟೋ ಗ್ಯಾಸ್ ಬಂಕ್ಗಳಲ್ಲಿ ಗ್ಯಾಸ್ ಅನಿಲದ ದಾಸ್ತಾನು ಕೊರತೆಯಿರುವುದರಿಂದ ಆಟೋ ಚಾಲಕರು ಹಾಗೂ ಕುಟುಂಬದ ಸದಸ್ಯರು ಸಮಸ್ಯೆ ಎದುರಿಸುವಂತಾಗಿದೆ. ಕೂಡಲೇ ನೊಂದಾಯಿತ ಆಟೋ ಚಾಲಕರ ನೆರವಿಗೆ ಸರಕಾರ ದಾವಿಸಬೇಕು ಎಂದು ಕೆಪಿಸಿಸಿ ಅಸಂಘಟಿತ ಕಾರ್ಮಿಕ ಘಟಕದ ರಾಜ್ಯ ಉಪಾಧ್ಯಕ್ಷ ಡಾ. ಇಂತಿಯಾಜ್ ಅಹಮದ್ ಒತ್ತಾಯಿಸಿದ್ದಾರೆ.
ಅಮೇರಿಕಾ,ಇಸ್ರೇಲ್,ಇರಾನ್ ನಡುವಿನ ಯುದ್ದರಿಂದ ದೇಶದಾದ್ಯಂತ ಅನೀಲದ ಕೊರತೆ ಎದುರಾಗಿದೆ. ರಾಜ್ಯದಲ್ಲಿ ಆಟೋ ಚಾಲಕರಿಗೆ ಆಟೋ ಗ್ಯಾಸ್ ದೊರಕದಿರುವುದಕ್ಕೆ ಆಟೋ ಚಾಲಕರ ದೈನಂದಿನ ಬದುಕಿಗೆ ಧಕ್ಕೆ ಉಂಟಾಗಿದೆ. ರಾಜ್ಯದ ನಾನಾ ಜಿಲ್ಲೆಗಳಲ್ಲಿ ಆಟೋ ಚಾಲಕರು ಗ್ಯಾಸ್ ತುಂಬಿಸಲು ಬಂಕ್ಗಳಲ್ಲಿ ಕಿಲೋ ಮಿಟರ್ಗಳವರೆವಿಗೂ ಆಟೋಗಳನ್ನು ನಿಲ್ಲಿಸಿಕೊಂಡು ಕಾಯುತ್ತಿದ್ದಾರೆ. ದೀನ ಪೂರ್ತಿ ಆಟೋಗಳನ್ನು ನಿಲ್ಲಿಸಿಕೊಂಡು ಕಾಯುತ್ತಿದ್ದರು ಸಮರ್ಪಕವಾಗಿ ಗ್ಯಾಸ್ ದೊರೆಯುತ್ತಿಲ್ಲ. ಕೂಡಲೇ ರಾಜ್ಯ ಸರಕಾರ ಆಟೋ ಚಾಲಕರ ಸಮಸ್ಯೆಯನ್ನು ಪರಿಗಣಿಸಿ ಆಟೋ ಚಾಲಕರಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ.
ಗ್ರಾಮೀಣ ಭಾಗದ ಯುವಕರು, ಬಡವರು, ಕೂಲಿ ಕಾರ್ಮಿಕರು ಆಟೋಗಳನ್ನು ಚಾಲನೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಚಾಲಕರು ದಿನ ನಿತ್ಯ ರಸ್ತೆಗೆ ಬಂದರೆ ಮಾತ್ರ ನಿತ್ಯದ ಕುಟುಂಬದ ಜೀವನ ನೆಡೆಯುವುದು, ಅನೀಲ, ಹಾಗೂ ಗ್ಯಾಸ್ ಸಮಸ್ಯೆಯಿಂದ ಸರಿಯಾಗಿ ಆಟೋ ಚಾಲಕರ ಬದುಕು ಸರಿಯಾಗಿ ನಡೆಯದಿರುವುದರಿಂದ ಆಟೋ ಚಾಲಕರು, ಕುಟುಂಬಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ರಾಜ್ಯ ಸರಕಾರ ಆಟೋ ಚಾಲಕರಿಗೆ ಪುಡ್ ಕಿಟ್, ಆರ್ಥಿಕ ನೆರವು, ಔಷಧಿಗಳು, ಚಿಕಿತ್ಸೆ, ಯುದ್ದ ಆರಂಭವಾದ ಕಾಲದಿಂದ ಗ್ಯಾಸ್ ಅನಿಲದ ಕೊರತೆ ಇರುವುದರಿಂದ ಇವರುಗಳು ಬ್ಯಾಂಕ್ಗಳಿಗೆ, ಫೈನಾಂನ್ಸ್ ಗಳಿಗೆ ಸಲ್ಲಿಸಬೇಕಾಗಿರುವ ಸಾಲದ ಇಎಂಐಗಳನ್ನು ಸರಕಾರವೇ ಪಾವತಿಸಿ ನೆರವು ನೀಡಬೇಕು ಹಾಗೂ ಮುಂದಿನ ತಿಂಗಳಲ್ಲಿ ಆಟೋ ಚಾಲಕರ ಮಕ್ಕಳಿಗೆ ಶಾಲಾ ಕಾಲೇಜಿನ ಶುಲ್ಕವನ್ನು ಸರಕಾರವೇ ಪಾವತಿಸಬೇಕು ಎಂದು ಆಟೋ ಚಾಲಕರ ಪರವಾಗಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದಾರೆ.
