ತುಮಕೂರು-ಕೋಟೆ ನಾಡಿನ ವಿವಿಧ ತಾಲೂಕುಗಳ (ದೇವರ ಎತ್ತು ಹಸು ಕರುಗಳು) ಮೂಕ ಪ್ರಾಣಿಗಳಿಗೆ ಮೂರು ದಶಕಗಳಿಂದ ಸರಿಯಾದ ಮೇವು ಮತ್ತು ಕುಡಿಯಲು ನೀರಿಲ್ಲದೆ ಸಂಕಷ್ಟದಲ್ಲಿರುವ ವಿಷಯ ಮನಗೊಂಡು ಪಾವಗಡ ಶ್ರೀರಾಮಕೃಷ್ಣ ಸೇವಾಶ್ರಮದ ಶ್ರೀ ಜಪಾನಂದ ಜಿ ಮಹಾರಾಜರವರು ನೀಡಿರುವ ಕೊಡುಗೆ*
*ಯುಗಾದಿ ಹಬ್ಬದ ಈ ಸನ್ನಿವೇಶದಲ್ಲಿ ಆತ್ಮೀಯ ಬಾಂಧವರಿಗೆ ಮತ್ತೊಂದು ಅತ್ಯಂತ ದುಃಖಕರವಾದ ವಿಚಾರವನ್ನು ತಿಳಿಯಪಡಿಸುತ್ತೇವೆ.* *ಅದೇನೆಂದರೆ ಎಂದಿನಂತೆ ಚೆಳ್ಳಕೆರೆಯ ಸುತ್ತಮುತ್ತಲಿನ ದೇವರಹಸುಗಳ ದುಸ್ಥಿತಿ. ಮೊದಲೇ ಸರಿಯಾದ ನೀರಿನವ್ಯವಸ್ಥೆಲ್ಲದೇ ಬದುಕಲು ಹವಣಿ ಸುತ್ತಿರುವ ಭೀಕರ ಸಂಧರ್ಭದಲ್ಲಿ ಸರಿಯಾದ ಮೆeವೂ ದೊರೆಯದೆ* *ಪರೀತಪಿಸುತ್ತಿರುವ ಹಸುಗಳ ದಾರುಣ ಕಥೆ. ಎಂದಿನಂತೆ ಶ್ರೀ ರಾಮಕೃಷ್ಣ ಸೇವಆಶ್ರಮದ ಅಧ್ಯಕ್ಷರಾದ ಹಾಗೂ ಕಳೆದ ಮೂರುದಶಕಗಳಿಂದ ಸಂಕಷ್ಟ ಸಮಯದಲ್ಲಿ ಸಹಸ್ರ ಸಹಸ್ರ ಜಾನುವಾರುಗಳಿಗೆ ನೀರು ಹಾಗೂ ಮೇವನ್ನು ನೀಡುತ್ತಿರುವ ಪೂಜ್ಯ ಸ್ವಾಮಿ ಜಪಾನಂದಜಿ ಮಹಾರಾಜರಿಗೆ ಮತ್ತೆ ಮನವಿಗಳ ಮಹಾಪೂರ ಚೆಳ್ಳಕೆರೆಯ ಸುತ್ತಮುತ್ತಲಿನ ಕಿಲಾರಿಗಳು ಹಾಗೂ ಗೋ ಪಾಲಕರಿಂದ ಬರಲು ಆ ರಂಭಿಸಿದೆ. ಕಳೆದವಾರದಿಂದ ಮುತ್ತಿಗೇರಹಳ್ಳಿ ಸಮೀಪದ ಶ್ರೀ ಶೈಲಾ ಮಲ್ಲಿಕಾರ್ಜುನ ಸ್ವಾಮಿ ದೇವರ ಹಸುಗಳ ಬಳಿ ಇರುವ ಹಸುಗಳ ಮತ್ತು ಕರುಗಳ ಸಾವು ಪೂಜ್ಯ ಸ್ವಾಮೀಜಿ ರವರ ಹೃದಯವನ್ನೇ ಕರಗಿಸಿದೆ.* *ಈಗಾಗಲೇ ಮೇವನ್ನು ನೀಡಲು ಆರಂಭಿಸಿರುವ ಪೂಜ್ಯರು ಕ್ರಮೇಣ ದೇವರ ಎತ್ತುಗಳಿರುವ ಮೊಣಕಾಲ್ಮೂರು, ಚೆಳ್ಳ ಕೆರೆ, ಅಜ್ಜಯ್ಯನಹಟ್ಟಿ ಮುಂತಾದಕಡೆ ಮೇವನ್ನು ವಿತರಿಸಲು ಕಾರ್ಯಯೋಜನೆ ಕೈಗೊಂಡಿದ್ದಾರೆ. ಈಗಾಗಲೇ ಮುತ್ತಿ ಗೇರಹಳ್ಳಿ ಪ್ರದೇಶಕ್ಕೆ ಅಂದ್ರದ,ಕಣೆಕಲ್ಲು ಭಾಗದಿಂದ ಮೇವನ್ನು ಖರೀದಿಸಿ ಹಸಿದ ನೂರಾರು ಮಲ್ಲಿಕಾರ್ಜುನಸ್ವಾಮಿ ಎತ್ತುಗಳಿಗೆ ನೀಡಿರುತ್ತಾರೆ*.
*ಆತ್ಮೀಯರೇ, ಹಬ್ಬದ ಹೋಳಿಗೆ ಸವಿಯುತ್ತಿರುವ ಹೃದಯವಂತರು ಈ ಅತಿ ಸಂಕಷ್ಟದ ವೇಳೆಯಲ್ಲಿ ಈ ಗೋವುಗಳಿಗೆ ನೀರು ಮತ್ತು ಆಹಾರ ವಿತರಿಸುವ ಪವಿತ್ರ ಕಾರ್ಯದಲ್ಲಿ ಭಾಗೀಗಳಾಗಿ ಕೇವಲ “ಗೋಮಾತೆ “ಎಂದು ನಮಸ್ಕರಿಸುವ ಬದಲು ಈ ದೇವರ ಎತ್ತುಗಳಿಗೆ ಈ ಭಯಾನಕ ಸ್ಥಿತಿಯಲ್ಲಿ ಸಹಾಯಹಸ್ತವನ್ನು ನೀಡಬೇಕು ಎಂದು ಕೋರುತ್ತೇವೆ. ಕಳೆದಬಾರಿ 350 ಟನ್ ಗಿಂತಲೂ ಮಿಗಿಲಾಗಿ ಈ ಪ್ರದೇಶಗಳಲ್ಲಿ* *ಪೂಜ್ಯಜಪಾನಂದ ಸ್ವಾಮೀಜಿ ರವರು ವಿತರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದೀಗ ಮತ್ತೆ ಆ ಸೇವಾಯಜ್ಞ ಆರಂಭವಾಗಿದೆ. ಇದನ್ನು ಎಲ್ಲ ಸಹೃದಯರ ಗಮನಕ್ಕೆ ತರಲಾಗಿದೆ.*
*ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಈ ತೇರನಾದ ಸೇವೆ ಆಹರ್ನಿಷಿ ನಡೆದುಕೊಂಡು ಬರುತ್ತಿದೆ.
ವರದಿ- ನಾಗರಾಜು ಸಾಹಿತಿ ಹಿರಿಯ ಪತ್ರಕರ್ತರು
