ತುಮಕೂರುವಿಶ್ವ*
*ವಿದ್ಯಾನಿಲಯದ ಅಂತರ ಕಾಲೇಜು ಪುರುಷರ ಕೋಕೋ ಪಂದ್ಯಾವಳಿ*
*ವಿದ್ಯಾ ವಾಹಿನಿ ಪ್ರಥಮ ರ್ಜೆ ಹಾಗೂ ಪಿಜಿ ಕಾಲೇಜಿನಲ್ಲಿ* *ತುಮಕೂರು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಪುರುಷರ ಕೋಕೋ ಪಂದ್ಯಾವಳಿ*
*ನಗರದ ವಿದ್ಯಾ ವಾಹಿನಿ ಪ್ರಥಮ ರ್ಜೆ ಹಾಗೂ ಪಿಜಿ ಕಾಲೇಜಿನಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಪುರುಷರ ಕೋಕೋ ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಿಕೊಡಲಾಯಿತು*
. *ಈ ಪಂದ್ಯಾವಳಿಯ ಉದ್ಘಾಟನಾ ಕರ್ಯಕ್ರಮದಲ್ಲಿ ಕೆ. ಜೆ ನಾಗ ಪ್ರಿಯ ವಿ- ಟೆಕ್ ಸೊಲ್ಯೂಷನ್ಸ್ ನ ವ್ಯವಸ್ಥಾಪಕ ನರ್ದೇಶಕರು, ಡಾ. ಸುದೀಪ್ ಕುಮಾರ್ ನರ್ದೇಶಕರು ದೈಹಿಕ ಶಿಕ್ಷಣ ವಿಭಾಗ, ತುಮಕೂರು ವಿಶ್ವವಿದ್ಯಾನಿಲಯ ತುಮಕೂರು, ಡಾII ತೇಜಸ್ ಪಿ ವೈದ್ಯಾಧಿಕಾರಿಗಳು, ನಮ್ಮ ಕ್ಲಿನಿಕ್, ಹನುಮಂತಪುರ ಅವರು ಪಾಲ್ಗೊಂಡಿದ್ದರು.*
*ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಕೆ.ಜೆ ನಾಗಪ್ರಿಯರವರು ವಿದ್ಯಾರ್ಥಿಗಳು ವಿದ್ಯಾರ್ಜನೆಯೊಂದಿಗೆ ಕ್ರೀಡೆಗಳು ಆತ್ಮಸ್ಥರ್ಯ ಬೆಳೆಸುವಲ್ಲಿ ಹಾಗೂ ವಿದ್ಯಾರ್ಥಿಗಳು ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಿದೆ*
*ಕ್ರೀಡೆಯು ಸಮಯ ಪ್ರಜ್ಞೆ, ಶಿಸ್ತು ಬದ್ಧ ಜೀವನ, ದೈಹಿಕ ಸದೃಢತೆ ನಾಯಕತ್ವ ಮನೋಭಾವ ಬೆಳೆಸಿಕೊಂಡು ಸೋಲು- ಗೆಲುವು ಸ್ವೀಕಾರದೊಂದಿಗೆ ಮುಂದೆ ಸಾಗಲು ಪ್ರೇರೇಪಿಸುತ್ತದೆ.* *ಸೋಲುಗಳ ಮೆಟ್ಟಿಲುಗಳು, ಸಾಧನೆಯಮೈಲುಗಲ್ಲಾಗುತ್ತವೆ ಅದೇ ರೀತಿಯಲ್ಲಿ ಗೆಲುವು ಮುಂದಿನ ಸಾಧನೆಗೆ ಸ್ಫರ್ತಿಯಾಗುತ್ತದೆ ಆದ್ದರಿಂದ ಸೋಲು ಗೆಲುವು ಎರಡನ್ನು ಧನಾತ್ಮಕವಾಗಿ ತೆಗೆದು ಕೊಳ್ಳಿ. ಸೋಲು ಗೆಲುವನ್ನು ಯೋಚಿಸದೆ ಕ್ರೀಡಾತ್ಮಕವಾಗಿ ಆಟವಾಡಿ ಎಂದು ತಿಳಿಸಿ, ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ಎಲ್ಲಾ ವಿದ್ಯಾರ್ಥಿ ಗಳಿಗೂ ಶುಭವಾಗಲಿ ಎಂದು ಹಾರೈಸಿದರು.*
*ಇದೇ ಸಂದರ್ಭದಲ್ಲಿ ಕ್ರೀಡಾಪಟುಗಳನ್ನು ಕುರಿತು ಮಾತನಾಡಿದ ಡಾ. ಸುದೀಪ್ ಕುಮಾರ್ ಕ್ರೀಡೆಯು ಮನರಂಜನೆ ಮಾತ್ರವಲ್ಲ, ಅದು ಒಂದು ಶಿಸ್ತು ಬದ್ಧ ಜೀವನ. ಕ್ರೀಡೆಯ ಮೂಲಕ ವಿದ್ಯರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ. ಕ್ರೀಡೆಗಳ ಸಾಧನೆಯಿಂದ ಉತ್ತಮ ಅವಕಾಶಗಳನ್ನು ಗಳಿಸಿಕೊಳ್ಳಬಹುದು.* *ಸೋಲಿಗೆ ಹೆದರದೆ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಾ, ಆಟವಾಡಿ* *ಎಂದು ಸಲಹೆ ನೀಡಿದರು.*
*ಇದೇ ಸಂದರ್ಭದಲ್ಲಿ* *ಪಾಲ್ಗೊಂಡಿದ್ದ ಡಾII ತೇಜಸ್, ವಿದ್ಯಾ ವಾಹಿನಿ ಪ್ರಥಮ ರ್ಜೆ ಹಾಗೂ ಪಿಜಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಅರುಣ ಎ ಕ್ರೀಡಾಪಟುಗಳಿಗೆ ಶುಭ ಕೋರಿದರು*
*ಈ ಪಂದ್ಯಾವಳಿಯಲ್ಲಿ ತುಮಕೂರು* *ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದಿರುವ ಕಾಲೇಜುಗಳ ೯ ತಂಡಗಳು ಭಾಗವಹಿಸಿದ್ದವು.*
