ತುಮಕೂರು ನಗರದ ಎಸ್.ಎಸ್.ಪುರಂ ಮುಖ್ಯ ರಸ್ತೆಯ ಶ್ರೀರಾಮ ಬಾಲ ಸೇವಾ ಸಮಿತಿ ವತಿಯಿಂದ ಶೆಟ್ಟಿಹಳ್ಳಿ ಶ್ರೀ ಆಂಜನೇಯಸ್ವಾಮಿ ರಥೋತ್ಸವದಂದು ಭಕ್ತಾದಿಗಳಿಗೆ ಹೆಸರು ಬೇಳೆ, ಪಾನಕ, ಫಲಹಾರ ವಿತರಿಸಲಾಯಿತು. ಗಜಾನನ ಮಹೇಶ್, ಒಪೇರ ಮಂಜು, ಫೋಟೋ ಶಿವು, ವಿರೂಪಾಕ್ಷ, ಓಂಪ್ರಕಾಶ್, ತಿಮ್ಮಾಚಾರಿ, ನ್ಯೂ ಗಾಸಿಪ್ ಮಂಜು, ವಸಂತ, ಶರವಣ, ರಘು, ಬಾಲು ಮುಂತಾದವರಿದ್ದರು.
೨ ಶೆಟ್ಟಿಹಳ್ಳಿ ಶ್ರೀ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವದ ಅಂಗವಾಗಿ ಜಯನಗರ ಮುಖ್ಯ ರಸ್ತೆಯಲ್ಲಿ ಮಾರುತಿ ಬಳಗದಿಂದ ಭಕ್ತಾದಿಗಳಿಗೆ ಹಣ್ಣಿನ ರಸಾಯನ, ಪಾನಕ, ಮಜ್ಜಿಗೆ ವಿತರಿಸಲಾಯಿತು. ರಾಕೇಶ್, ಶಿವಣ್ಣ, ಚೌಡಯ್ಯ, ನಾಗಣ್ಣ, ಸಿದ್ದು, ನೂರುಲ್ಲಾ ಮುಂತಾದವರಿದ್ದರು.
೩ ತುಮಕೂರಿನ ಜಯನಗರ ಮುಖ್ಯ ರಸ್ತೆಯಲ್ಲಿ ಶ್ರೀ ಶೆಟ್ಟಿಹಳ್ಳಿ ಆಂಜನೇಯ ಸ್ವಾಮಿ ರಥೋತ್ಸವದಂದು ಸಂಜೆ ಭಕ್ತಾದಿಗಳಿಗೆ ಕುಮಾರ್ ಮತ್ತು ಸಂಗಡಿಗರಿAದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
೪ ಶೆಟ್ಟಿಹಳ್ಳಿ ಶ್ರೀ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವದ ಅಂಗವಾಗಿ ಡಿಪೋ ದೇವರಾಜು ಕುಟುಂಬದವರಿAದ ನೂರಾರು ಮಂದಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ, ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
೫ ತುಮಕೂರಿನ ಪ್ರಸಿದ್ಧ ಶೆಟ್ಟಿಹಳ್ಳಿಯ ಶ್ರೀ ಆಂಜನೇಯಸ್ವಾಮಿಯ ಬ್ರಹ್ಮ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಬಂದ ಭಕ್ತಾದಿಗಳು ರಥಕ್ಕೆ ಹೂವು, ದವನ, ಬಾಳೆಹಣ್ಣು ಸಮರ್ಪಿಸಿದರು. ಶೆಟ್ಟಿಹಳ್ಳಿ ರಸ್ತೆಯ ಉದ್ದಗಲಕ್ಕೂ ಭಕ್ತಾದಿಗಳಿಂದ ಫಲಹಾರ, ಪಾನಕದ ವ್ಯವಸ್ಥೆ ಮಾಡಲಾಗಿತ್ತು.
