ಮಕ್ಕಳಲ್ಲಿ ಸಾಹಿತ್ಯಾ ಶಕ್ತಿ ಬೆಳೆಸಿ: ಡಾ.ಎನ್.ಎಸ್. ಜಯಕುಮಾರ್
ಕೆ.ಹೆಚ್. ವೆಂಕಟೇಶ್ ಅವರ ಕಥಾ ಸಂಕಲನ ಲೋಕಾರ್ಪಣೆ
ತುಮಕೂರು: ಸಮೃದ್ಧ ಜಾನಪದ ಸಾಹಿತ್ಯ ಒಳಗೊಂಡ ನಮ್ಮ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನೇಕ ಸಾಹಿತಿಗಳು ಶ್ರೇಷ್ಠ ಕೃತಿಗಳ ಮೂಲಕ ದೊಡ್ಡ ಕೊಡುಗೆ ನೀಡಿ ಶ್ರೀಮಂತಗೊಳಿಸಿದ್ದಾರೆ. ನಮ್ಮ ನಾಡಿನ ಸಂಸ್ಕೃತಿಯ ಭಾಗವಾಗಿರುವ ಕನ್ನಡ ಸಾಹಿತ್ಯವನ್ನು ಬೆಳೆಸುವ, ಕನ್ನಡ ಕೃತಿಗಳನ್ನು ಕೊಂಡು ಓದಿ ಪ್ರೋತ್ಸಾಹಿಸಲು ಎಲ್ಲರೂ ಸಹಕರಿಸಬೇಕು. ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸಬೇಕು ಎಂದು ಟಿಎಂಸಿಸಿ ಅಧ್ಯಕ್ಷ ಡಾ.ಎನ್.ಎಸ್. ಜಯಕುಮಾರ್ ಹೇಳಿದರು.
ಗುರುವಾರ ನಗÀರದ ಬಾಯರ್ಸ್ ಕ್ಯಾಂಟಿನ್ನಲ್ಲಿ ನಿವೃತ್ತ ಪ್ರಾಚಾರ್ಯ, ಸಾಹಿತಿ ಕೆ.ಹೆಚ್. ವೆಂಕಟೇಶ್ ರಚಿಸಿರುವ, ಆನಂದ್ ಪಬ್ಲಿಕೇಷನ್ನವರು ಪ್ರಕಾಶಿಸಿರುವ ‘ಏರಿ ಮೇಲಿನ ಮಾವಿನ ಮರ ಮತ್ತು ಇತರೆ ಕಥೆಗಳು’ ಎಂಬ ಕಥಾ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಕಥೆಗಾರ ವೆಂಕಟೇಶ್ ಅವರು ಗ್ರಾಮೀಣ ಸೊಗಡಿನ ಭಾಷೆಯನ್ನು ಉತ್ತಮವಾಗಿ ಬಳಸಿಕೊಂಡು ಆಕರ್ಷಕವಾಗಿ ಬರೆದಿರುವ ಕಥೆಗಳು ಓದುಗರ ಗಮನ ಸೆಳೆಯತ್ತವೆ. ಇಂತಹ ಕೃತಿಗಳು ಹೆಚ್ಚೆಚ್ಚು ಹೊರಬರಲಿ ಎಂದು ಆಶಿಸಿದರು.
ಕನ್ನಡ ಸಾಹಿತ್ಯವು ಆಯಾ ಕಾಲಘಟ್ಟದ ನಮ್ಮ ಜೀವನಶೈಲಿ ಪರಿಚಯಿಸುವ ಪ್ರಮುಖ ಆಕರಗಳಾಗಿ ರೂಪುಗೊಳ್ಳುತ್ತವೆ. ಕನ್ನಡ ಭಾಷೆಯ ಹಿರಿಮೆ, ಮಹತ್ವದ ಬಗ್ಗೆ ಮಕ್ಕಳಲ್ಲಿ ಅಭಿಮಾನ ಬೆಳೆಸಬೇಕು, ಅವರಲ್ಲಿ ಸಾಹಿತ್ಯಾಸಕ್ತಿ ಬೆಳೆಸಬೇಕು. ಆ ಮೂಲಕ ಕನ್ನಡ ಸಾಹಿತ್ಯವನ್ನು ಉಳಿಸಿಬೆಳೆಸುವ ಕೆಲಸವಾಗಬೇಕು ಎಂದು ಡಾ.ಎನ್.ಎಸ್. ಜಯಕುಮಾರ್ ತಿಳಿಸಿದರು.
ಕೃತಿ ಕುರಿತು ಮಾತನಾಡಿದ ಹಿರಿಯ ಸಾಹಿತಿ ಈಚನೂರು ಇಸ್ಮಾಯಿಲ್, ಯುದ್ಧಗಳ ಕಾರ್ಮೋಡಗಳ ನಡುವೆ ಇಂದು ಜಗತ್ತು ಆತಂಕ ಸ್ಥಿತಿಯಲ್ಲಿದೆ. ಯಾವುದೇ ತತ್ವ, ಸಿದ್ಧಾಂತಗಳಿAದಲೂ ಯುದ್ಧ ಶಮನ ಮಾಡಿ, ಶಾಂತಿ ಸ್ಥಾಪಿಸಲು ಸಾಧ್ಯವಾಗಿಲ್ಲ. ಆದರೆ ಸಾಹಿತ್ಯಪ್ರೇಮ ಬೆಳೆಸುವ ಮೂಲಕ ಜಗತ್ತಿನಲ್ಲಿ ಶಾಂತಿ, ಸೌಹಾರ್ದತೆ ಬೆಳೆಸಲು ಸಾಧÀ್ಯವಿದೆ. ಅಂತಹ ವಾತಾವರಣ ಎಲ್ಲೆಡೆ ಮೂಡಬೇಕಾಗಿದೆ ಎಂದರು.
ಕಥೆಗಾರ ಕೆ.ಹೆಚ್. ವೆಂಕಟೇಶ್ ಅವರು ಗ್ರಾಮೀಣ ಪ್ರದೇಶದ ಬದುಕಿನ ತಲ್ಲಣಗಳನ್ನು ಸಹಜವಾಗಿ, ಸರಳವಾಗಿ ಕಥೆಗಳಾಗಿ ಬರೆದು ಗಮನ ಸೆಳೆದಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಸಣ್ಣಕಥೆಗಳ ಪ್ರಾಕಾರ ಉನ್ನತ ಸ್ಥಾನದಲ್ಲಿದೆ. ನಮ್ಮ ಕನ್ನಡದ ಲೇಖಕಿ ಬಾನು ಮುಸ್ತಾಕ್ ಅವರ ಸಣ್ಣ ಕಥೆಗಳ ಕೃತಿಗೆ ಬೂಕರ್ ಪ್ರಶಸ್ತಿ ದೊರಕಿರುವುದು ಕನ್ನಡಿಗರು ಹೆಮ್ಮೆ ಪಡುವ ವಿಚಾರ ಎಂದು ಹೇಳಿದರು,
ಕಥೆಗಾರ ಕೆ.ಹೆಚ್. ವೆಂಕಟೇಶ್, ಆನಂದ್ ಪಬ್ಲಿಕೇಷನ್ನ ಶಂಕರಾನAದ್, ಹಿರಿಯ ಕ್ರೀಡಾಪಟು ಟಿ.ಕೆ. ಆನಂದ್, ಸಮಾಜ ಸೇವಕ ಪದ್ಮನಾಬ್(ಮಧು) ಹಾಗೂ ವಿವಿಧ ಸಂಘಸAಸ್ಥೆಗಳ ಪ್ರಮುಖರು ಸಮಾರಂಭದಲ್ಲಿ ಭಾಗವಹಿಸಿದ್ದರು.
