ಸರ್ಕಾರಿ ವಿಜ್ಞಾನ ಕಾಲೇಜಿನ ಮುಂಭಾಗದಲ್ಲಿ ಮಹಿಳಾ ಕಾಲೇಜು ಸ್ಥಾಪಿಸುವುದು ಎರಡು ಕಾಲೇಜುಗಳ ಅಭಿವೃದ್ಧಿಗೆ ಮಾರಕವಾಗುತ್ತದೆ. ಶ್ರೀಮತಿ ಕವಿತಾ ರೆಡ್ಡಿ,
ತುಮಕೂರು:-ಚಿತ್ರದುರ್ಗ…ಸರ್ಕಾರಿ ವಿಜ್ಞಾನ ಕಾಲೇಜಿನ ಪಕ್ಕದಲ್ಲಿ ಸರ್ಕಾರಿ ಮಹಿಳಾ ಕಾಲೇಜನ್ನ ನಿರ್ಮಿಸುವುದರಿಂದ ಎರಡು ಕಾಲೇಜುಗಳ ಬೆಳವಣಿಗೆಗೆ ಜಾಗದ ಕೊರತೆ ಉಂಟಾಗುತ್ತದೆ, ಮುಂದೆ ಎರಡು ಕಾಲೇಜುಗಳು ಸಹ ಅಭಿವೃದ್ಧಿ ಹೊಂದಲು ಸಾಧ್ಯವಾಗುವುದಿಲ್ಲ, ಹೊಸದಾಗಿ ನಿರ್ಮಾಣವಾಗುವ ಕಾಲೇಜುಗಳನ್ನು ನಗರದ ಬೇರೆ ಬೇರೆ ಸ್ಥಳದಲ್ಲಿ ಸ್ಥಾಪಿಸಿದರೆ, ಗ್ರಾಮೀಣ ವಿದ್ಯಾರ್ಥಿಗಳಿಗೆ ಬಂದು ಹೋಗಲು ಅನುಕೂಲಕರವಾಗುತ್ತದೆ ಎಂದು ಕಾಗಸ್ ಫೌಂಡೇಶನ್ ನ ಮುಖ್ಯಸ್ಥರು ಹಾಗೂ ಸಮಾಜ ಸುಧಾರಕರಾದ ಶ್ರೀಮತಿ ಕವಿತಾ ರೆಡ್ಡಿ ಅವರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.
ಅವರ ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಆವರಣದ ಮುಂಭಾಗದಲ್ಲಿ ಮಹಿಳಾ ಕಾಲೇಜು ನಿರ್ಮಾಣ ಮಾಡುವುದರ ಬಗ್ಗೆ ಜಿಲ್ಲೆಯಲ್ಲಿ ಏರ್ಪಟ್ಟಿರುವ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಮಾತನಾಡುತ್ತಿದ್ದರು..
ಒಂದೇ ಕ್ಯಾಂಪಸ್ ನಲ್ಲಿ ಎರಡು ಮೂರು ಕಾಲೇಜುಗಳನ್ನ ಸ್ಥಾಪಿಸುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗುತ್ತದೆ, ಎರಡು ಕಾಲೇಜುಗಳ ಮಧ್ಯೆ ಪೈಪೋಟಿ ಉಂಟಾಗಿ ಎರಡರ ಬೆಳವಣಿಗೆಗೂ ತೊಂದರೆಯಾಗುತ್ತದೆ, ಹಾಗಾಗಿ ಈಗ ಸರ್ಕಾರಿ ಮಹಿಳಾ ಕಾಲೇಜಿಗೆ ನೀಡಿರುವ ಎರಡು ಎಕರೆ ಜಾಗ ಯಾವುದಕ್ಕೂ ಸಾಲದು, ಅದಕ್ಕೆ ಇನ್ನೂ ಹೆಚ್ಚಿನ ವಿಸ್ತೀರ್ಣವಾದ ಜಾಗವನ್ನು ನೀಡಿ, ಕನಿಷ್ಠಪಕ್ಷ ಐದು ಎಕರೆನ್ನಾದರೂ ನೀಡಿ, ನಗರದ ವಿವಿಧ ಭಾಗಗಳಲ್ಲಿ ಯಾವುದಾದರೂ ಒಂದು ಸೂಕ್ತ ಸ್ಥಳವನ್ನು ಕಂದಾಯ ಇಲಾಖೆ ಸಹಾಯದಿಂದ ಆಯ್ಕೆ ಮಾಡಿ, ಅಲ್ಲಿ ಆ ಕಾಲೇಜನ್ನು ಸ್ಥಾಪನೆ ಮಾಡಿ ಎಂದರು.
ಪ್ರತಿ ಕಾಲೇಜಿಗೂ ಕನಿಷ್ಠ ಪಕ್ಷ ಐದು ಎಕರೆ ಜಾಗವಿದ್ದರೆ ಮುಂದೆ ಅವರ ಹಾಸ್ಟೆಲ್ಗಳಿಗೆ, ಕ್ರೀಡಾ ಚಟುವಟಿಕೆಗಳಿಗೆ, ಸ್ನಾತಕೋತ್ತರ ವಿಭಾಗಕ್ಕೆ, ಎನ್ ಸಿ ಸಿ, ಎನ್ ಎಸ್ ಎಸ್ ಹಾಗೂ ಇನ್ನಿತರ ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಜಾಗ ದೊರೆತಂತಾಗುತ್ತದೆ, ಹಾಗೂ ವಿವಿಧ ಭಾಗಗಳಿಂದ ಬರುವಂತಹ ಗ್ರಾಮೀಣ ವಿದ್ಯಾರ್ಥಿಗಳಿಗೆ ಓದಲು ಅನುಕೂಲಕರವಾಗುತ್ತದೆ, ಎಲ್ಲಾ ಕಾಲೇಜುಗಳನ್ನು ಒಂದೇ ಜಾಗದಲ್ಲಿ, ಒಂದೇ ಕ್ಯಾಂಪಸ್ ನಲ್ಲಿ ಸ್ಥಾಪಿಸುವುದರಿಂದ ಮುಂದೆ ಜಾಗದ ಕೊರತೆ ಉಂಟಾಗಿ, ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತದೆ ಹಾಗೂ ಅವರ ಕ್ರೀಡಾ ಚಟುವಟಿಕೆಗಳಿಗೂ ತೊಂದರೆ ಉಂಟಾಗುತ್ತದೆ, ಹಾಗಾಗಿ ಈಗ ಆಯ್ಕೆ ಮಾಡಿರುವ ಸರ್ಕಾರಿ ವಿಜ್ಞಾನ ಕಾಲೇಜಿನ ಮುಂಭಾಗದ ಜಾಗ, ಮಹಿಳಾ ಕಾಲೇಜಿಗೆ ಸಾಲದಾಗುತ್ತದೆ, ಅದಕ್ಕೆ ಇನ್ನೂ ಹೆಚ್ಚಿನ ವಿಸ್ತೀರ್ಣವಾದ ಜಾಗವನ್ನು ನೀಡಬೇಕೆಂದು ವಿನಂತಿಸಿಕೊಂಡರು.
ಈಗ ಸದ್ಯ ಇರುವ ಸರ್ಕಾರಿ ವಿಜ್ಞಾನ ಕಾಲೇಜಿನ ಮುಂಭಾಗದ ಜಾಗ ಅದರ ಅಭಿವೃದ್ಧಿಗೆ ಅವಶ್ಯಕತೆ ಇದೆ, ಅದರ ಮುಂಭಾಗದ ಜಾಗವನ್ನು ಆ ಕಾಲೇಜಿಗೆ ಬಿಟ್ಟುಕೊಟ್ಟರೆ, ಮುಂದೆ ಅವರು ತಮ್ಮ ಸ್ನಾತಕ್ಕೂತ್ತರ ವಿಭಾಗಗಳನ್ನು ತೆರೆದುಕೊಳ್ಳಲು ಅಥವಾ ಗ್ರಂಥಾಲಯಗಳನ್ನು ವಿಸ್ತೀರ್ಣ ಗೊಳಿಸಲು, ಔಷಧ ಸಸ್ಯಗಳ ಬೆಳವಣಿಗೆ ಮಾಡಲು ಅಥವಾ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಾಗ ಕೊಠಡಿಗಳ ಸಂಖ್ಯೆಗಳನ್ನ ಹೆಚ್ಚಿಸಲು, ಅವಕಾಶ ನೀಡಿದಂತಾಗುತ್ತದೆ. ಹಾಗೂ ಈಗಾಗಲೇ ಹೆಣ್ಣು ಮಕ್ಕಳೆ ಹೆಚ್ಚು ಓದುತ್ತಿರುವ ಸರ್ಕಾರಿ ವಿಜ್ಞಾನ ಕಾಲೇಜಿನ ಅಭಿವೃದ್ಧಿಗೂ ಸಹ ಪೈಪೋಟಿ ಏರ್ಪಡುತ್ತದೆ, ಹೆಣ್ಣು ಮಕ್ಕಳೇ ಹೆಚ್ಚು ಓದುತ್ತಿರುವ ಕಾಲೇಜಿನ ಮುಂಭಾಗದಲ್ಲಿ, ಇನ್ನೊಂದು ಮಹಿಳಾ ಕಾಲೇಜನ್ನು ತೆರೆಯುವುದು ಹಣದ ವ್ಯಯವಾದಂತಾಗುತ್ತದೆ ಎಂದರು.
ಮಹಿಳಾ ಕಾಲೇಜಿಗೆ ಜಾಗ ಹುಡುಕುವ ನಿಟ್ಟಿನಲ್ಲಿ ಬಹಳಷ್ಟು ಖಾಲಿ ಜಾಗಗಳು ಚಿತ್ರದುರ್ಗ ಸುತ್ತಮುತ್ತ ಹಾಗೂ ಊರಿನ ಹತ್ತಿರದಲ್ಲೂ ಸಹ ಕಂಡುಬರುತ್ತದೆ, ಕಂದಾಯ ಇಲಾಖೆಯ ಸಹಾಯದಿಂದ ಹಾಗೂ ಸ್ಥಳೀಯ ಶಾಸಕರ ಸಹಾಯದಿಂದ ಅಥವಾ ಸ್ಥಳೀಯ ಸಂಘ-ಸಂಸ್ಥೆಗಳ ಮುಖಾಂತರ ಸೂಕ್ತವಾದ ಜಾಗವನ್ನು ಆಯ್ಕೆ ಮಾಡಿಕೊಂಡು, ಅಲ್ಲಿ ಕಾಲೇಜನ್ನ ನಿರ್ಮಿಸುವುದು ಒಳ್ಳೆಯದು ಎಂದು ಒತ್ತಾಯಿಸಿದರು.
ಒಂದೇ ಕಾಲೇಜಿನ ಪಕ್ಕ ಇನ್ನೊಂದು ಕಾಲೇಜು ಸ್ಥಾಪನೆ ಮಾಡುವುದರಿಂದ ಅಲ್ಲಿ ಎರಡು ಕಾಲೇಜುಗಳ ಮಧ್ಯೆ ಪೈಪೋಟಿ ಸಹ ಉಂಟಾಗಿ ಯಾವುದಾದರೂ ಒಂದು ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯಬಹುದು, ಅದರಿಂದ ಆ ಕಾಲೇಜಿನಲ್ಲಿರುವ ಉಪನ್ಯಾಸಕರಿಗೆ ಕೆಲಸವಿಲ್ಲದಂತಾಗಬಹುದು, ಈ ರೀತಿ ಪೈಪೋಟಿ ಮಾಡುವುದರಿಂದ ಸಾರ್ವಜನಿಕ ಹಣ ವ್ಯರ್ಥವಾಗುತ್ತದೆ ಹಾಗೂ ಎರಡು ಕಾಲೇಜಿನ ಅಭಿವೃದ್ಧಿಗೆ ಮಾರಕವಾಗುತ್ತದೆ, ಈ ರೀತಿ ಯಾವ ಮಹಾ ನಗರಗಳಲ್ಲೂ ಸಹ ಕಂಡುಬಂದಿಲ್ಲ, ಹಾಗಾಗಿ ಚಿತ್ರದುರ್ಗದಲ್ಲಿ ಒಂದೇ ಕಡೆ ಎರಡು ಕಾಲೇಜುಗಳನ್ನು ಸ್ಥಾಪಿಸುವುದು ಉತ್ತಮವಾದದ್ದಲ್ಲ ಎಂದು ವಿನಂತಿಸಿಕೊಂಡರು.
ಸರ್ಕಾರಿ ವಿಜ್ಞಾನಕ್ಕಾಗಿ ಮುಂಭಾಗದಲ್ಲಿರುವ ಮರಗಳು ಸಹ ಅತ್ಯಮೂಲ್ಯ ವಾದಂತವುಗಳು, ಮರಗಳನ್ನು ಬೆಳೆಸುವುದು ಸಹ ಈಗಿನ ಕಾಲದಲ್ಲಿ ಕಷ್ಟಕರವಾಗಿದೆ, ಮರಗಳನ್ನು ಕಡಿಯುವುದರಿಂದ ನಗರದ ತಾಪಮಾನ ಮಾಲಿನ್ಯ ಕೂಡ ಹೆಚ್ಚಾಗುತ್ತದೆ, ಈಗ ಸದ್ಯ ಚಿತ್ರದುರ್ಗ ಬಯಲು ಸೀಮೆ ಪ್ರದೇಶವಾಗಿರುವುದರಿಂದ, ಇಲ್ಲಿ ಮರಗಳನ್ನು ಉಳಿಸಿಕೊಳ್ಳುವುದು ಸಹ ಮುಖ್ಯವಾಗುತ್ತದೆ, ಖಾಲಿ ಇರುವ ಜಾಗದಲ್ಲಿ ಮಹಿಳಾ ಕಾಲೇಜು ನಿರ್ಮಿಸಿ ಕೊಡಿ, 25 ಕೋಟಿಯಷ್ಟು ಅನುದಾನ ದೊರಕಿರುವುದರಿಂದ, ಅತ್ಯುತ್ತಮವಾದ ಮಹಿಳಾ ಕಾಲೇಜನ್ನೆ ನಿರ್ಮಿಸಿ ಕೊಡಬಹುದು ಎಂದು ಚಿತ್ರದುರ್ಗದ ನಾಗರೀಕರ ಪರವಾಗಿ ವಿನಂತಿಸಿಕೊಂಡರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷರಾದ ಡಾ. ಎಚ್ ಕೆ ಎಸ್ ಸ್ವಾಮಿ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳುತ್ತಾ, ಈಗಾಗಲೇ ವಿಜ್ಞಾನ ಕಾಲೇಜಿನ ಮುಂಭಾಗದಲ್ಲಿ ಮೂರು ಮರಿಗಳನ್ನು ಕಡಿಯಲಾಗಿದೆ, ಉಳಿದ ಮರಗಳನ್ನಾದರೂ ಉಳಿಸಿ ಕೊಡುವ ನಿಟ್ಟಿನಲ್ಲಿ ಸಹಾಯ ಮಾಡಬೇಕೆಂದು ವಿನಂತಿಸಿಕೊಂಡರು.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ವಿವಿಧ ಹಳೆ ವಿದ್ಯಾರ್ಥಿಗಳ ಸಂಘಟನೆ ವಿದ್ಯಾರ್ಥಿಗಳು, ಸಲೀಂ ಮಹಮದ್, ಟಾರ್ಗೆಟ್ ಟೆನ್ ತೌಸಂಡ್ ನ ಸದಸ್ಯರಾದ ಶ್ರೀ ತೇಜಮೂರ್ತಿಯವರು ಹಾಗೂ ಇನ್ನಿತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
