ತುಮಕೂರಿನಲ್ಲಿ ಡಾ.ರಾಜ್ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘ ಚಕ್ರವರ್ತಿ ಸ್ಪೋರ್ಟ್ಸ್ ಅಸೋಸಿಯೇಷನ್ಸ್ ವತಿಯಿಂದ ದಿ. ಡಾ. ಜಯರಾಮ್ ಸ್ಮರಣಾರ್ಥ ಡಾ. ಪುನೀತ್ ರಾಜ್ ಕುಮಾರ್ ಕಪ್ ರಾಜ್ಯ ಮಟ್ಟದ ಹೊನಲು ಬೆಳಕಿನ ರೋಚಕ ಫೈನಲ್ ಪಂದ್ಯಾವಳಿಯಲ್ಲಿ ಪ್ರಬಲ ಜಾನ್ಸನ್ ಜೇನುಗೂಡು ತಂಡ ಎದುರು ಜಯಕರ್ನಾಟಕ ತಂಡ ಗೆಲುವು ಸಾಧಿಸಿಸಿತು. ಈ ತಂಡಕ್ಕೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಆದ ಹಿರಿಯ ಕ್ರಿಕೆಟಿಗ ಪಿ. ಎನ್. ಕೃಷ್ಣಮೂರ್ತಿ ನೀಡಿರುವ ೫ ಲಕ್ಷ ರೂ. ನಗದು ಹಾಗೂ ಪಾರಿತೋಷಕವನ್ನ ಶಾಸಕ ಜ್ಯೋತಿ ಗಣೇಶ್ ಅವರು ವಿನ್ನರ್ಸ್ ಟೀಮ್ ಆದ ಜಯ ಕರ್ನಾಟಕ ತಂಡಕ್ಕೆ ವಿತರಿಸಿದರು. ಚಿತ್ರದಲ್ಲಿ ಪಿ ಎನ್. ಕೃಷ್ಣಮೂರ್ತಿ, ಕೆ ಸಿ ಎ ತುಮಕೂರು ವಲಯ ಅಧ್ಯಕ್ಷ ಸಿ. ಆರ್. ಹರೀಶ್,ಕ್ರಿಕೆಟ್ ತಂಡದ ಆಯೋಜಕರಾದ ಹೆಚ್. ಎನ್. ದೀಪಕ್ ಚಕ್ರವರ್ತಿ ಪ್ರಕಾಶ್, ಕನ್ನಡ ಶಂಕರ್, ರಂಜನ್, ಅರವಿಂದ್, ಹಿರಿಯ ಆಟಗಾರ ವೆಂಕಟೇಶ್, ಗೋಪಾಲ್,ಸೇರಿದಂತೆ ಪಂದ್ಯಾವಳಿಯ ಸದಸ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು
