ಯುವಜನ ಗ್ರಾಮ ಸಭೆ: ತರೂರು
ತುಮಕೂರು :ನಮ್ಮ ರಾಜ್ಯದಲ್ಲಿ ಒಟ್ಟು 7 ಕೋಟಿಗೂ ಹೆಚ್ಚು ಜನರಿದ್ದು ಅದರಲ್ಲಿ 2 ಕೋಟಿ 10 ಲಕ್ಷಕ್ಕೂ ಹೆಚ್ಚು ಯುವಜನರು ಇದ್ದು ಅದರಲ್ಲಿ 67% ಯುವಜನರು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿದ್ದು ಅವರ ಸಮಸ್ಯೆಗಳು, ಸವಾಲುಗಳನ್ನು ಅರ್ಥಮಾಡಿಕೊಂಡು ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಕರ್ನಾಟಕ ಸರ್ಕಾರ ಪಂಚಾಯತ್ ರಾಜ್ ಇಲಾಖೆ ಯುವಜನ ಗ್ರಾಮ ಸಭೆ ಮಾಡಲು ಸೂಚಿಸಿರುವುದು ಶ್ಲಾಘನೀಯವಾದುದ್ದು ಎಂದು ನವ್ಯದಿಶ ಸಂಸ್ಥೆಯ ಪ್ರೋಗ್ರಾಂ ಕೋರ್ಡಿನೇಟರ್ ಜನಾರ್ಧನ ಜೆ, ಎಸ್ ಅಭಿಪ್ರಾಯ ಪಟ್ಟರು.
ಇವರು ತರೂರು ಗ್ರಾಮ ಪಂಚಾಯತಿ ಮತ್ತು ನವ್ಯದಿಶ ಸಂಸ್ಥೆ ಯುವಚಾವಡಿ ಕಾರ್ಯಕ್ರಮದ ಸಹಯೋಗದೊಂದಿಗೆ ಆಯೋಜಿಸಿದ್ದ ಯುವಜನ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತಾಡುತ್ತಾ ಪಂಚಾಯ್ತಿ ವ್ಯಾಪ್ತಿಯಲ್ಲಿ ನಮಗೆ ಏನಾದ್ರೂ ಸಮಸ್ಯೆಗಳು ಆದರೆ ನಾವು ನೇರವಾಗಿ ರಾಜ್ಯ ಸರ್ಕಾರವನ್ನು ಕೇಳಲು ಆಗುವುದಿಲ್ಲ ಸ್ಥಳೀಯ ಸರ್ಕಾರ ಗ್ರಾಮ ಪಂಚಾಯಿತಿಯನ್ನು ಕೇಳಬೇಕು ಈ ನಿಟ್ಟಿನಲ್ಲಿ ಯುವಜನರು ಆದ ನಿಮಗೆ ಉದ್ಯೋಗ, ಕೌಶಲ್ಯಗಳು, ಶಿಕ್ಷಣ, ವಯಕ್ತಿಕ ಸಮಸ್ಯೆಗಳು ಯಾವುದೇ ರೀತಿಯ ಸಮಸ್ಯೆಗಳು ಇದ್ದರೂ ಈ ಯುವಜನ ಗ್ರಾಮ ಸಭೆಯಲ್ಲಿ ಚರ್ಚಿಸಬಹುದು, ಪ್ರಶ್ನಿಸಿ ಉತ್ತರಗಳನ್ನು ಪಡೆದುಕೊಳ್ಳಬಹುದು ಎಂದರು.
ಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿಗಳು ಗುರು ಪ್ರಸಾದ್ ಅವರು ಮಾತಾಡಿ ನಮ್ಮ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅರಿವು ಕೇಂದ್ರಗಳನ್ನು ತೆರೆದಿದ್ದು ಕೌಶಲ್ಯಗಳನ್ನು ಕಲಿಯಲು ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಅವಕಾಶ ಇದೆ ಎಂದರು, ನಿರುದ್ಯೋಗಿ ಯುವಜನರಿಗೆ ಕೆಲಸ ಮಾಡಿಕೊಳ್ಳಲು ನಾವು ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಕೊಡುತ್ತೇವೆ, ಜಾಬ್ ಕಾರ್ಡ್ ಮಾಡಿಸಿಕೊಳ್ಳಿ ಎಂದರು ಪಂಚಾಯ್ತಿ ವ್ಯಾಪ್ತಿಯಲ್ಲಿ ನಾವು ನೀವು ಒಟ್ಟಿಗೆ ಸೇರಿ ಕೆಲಸ ಮಾಡೋಣ ಈ ತರದ ಸಭೆಗಳನ್ನು ಹೆಚ್ಚೆಚ್ಚು ಮಾಡೋಣ ಎಂದರು.
ಪಂಚಾಯ್ತಿಯ ಅಧ್ಯಕ್ಷರಾದ ಪುಷ್ಪಲತ ಅವರು ಮಾತಾಡಿ ಯುವಜನರು ಹೆಚ್ಚು ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಅದರಿಂದ ಆಚೆ ಬಂದು ಉತ್ತಮ ಬದುಕು ಕಟ್ಟಿಕೊಳ್ಳಲು ಸಲಹೆ ನೀಡಿದರು.
ಭಾಗವಹಿಸಿದ್ದ ಯುವಜನರು ಹಳ್ಳಿ ಮತ್ತು ಶಾಲೆಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಿ ಪ್ರತಿಕ್ರಿಯೆ ಪಡೆದುಕೊಂಡರು,
ಒಟ್ಟು 10 ಜನ ಯುವಜನರು ಯೂತ್ ಮೆಂಟರ್ ಕಿರಣ್ ಭಾಗವಹಿಸಿದ್ದರು.
