ತುಮಕೂರು ತಿಪಟೂರು.ಶ್ರೀ ಶಿವಶಕ್ತಿಯ ಶನೇಶ್ವರ ಸ್ವಾಮಿ ಹಾಗೂ ಆಂಜನೇಯ ಸ್ವಾಮಿ ಹಾಗೂ ಆದಿಶಕ್ತಿ ದುರ್ಗಾಪರಮೇಶ್ವರಿ ದೇವಿ ಇದರ 22 ನೇ ವರ್ಷದ ಜಾತ್ರಾ ಮಹೋತ್ಸವವು ಇದೇ ತಿಂಗಳ 28 ರಿಂದ 31ರವರೆಗೆ ನಡೆಯಲಿದೆ ಎಂದು ಶ್ರೀ ಶಿವ ಸತ್ಯ ಶನೇಶ್ವರ ಸ್ವಾಮಿ ಸೇವಾ ಸಮಿತಿ ಟ್ರಸ್ಟ್ ನಾಗರಾಜು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ದಿನಾಂಕ 28ರಂದು ಆದಶಕ್ತಿ ಪರಮೇಶ್ವರಿ ದೇವಿಯವರ ಗಂಗಾ ಸ್ಥಾನ ದೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು 29ನೇ ತಾರೀಕು ಗುರುವಾರ ಶನೇಶ್ವರ ಸ್ವಾಮಿ ಅದ್ದೂರಿ ಗ್ರಾಮೋತ್ಸವ ನಡೆಯಲಿದೆ ಹಾಗೂ ಸಕಲ ವಿಜಯ ಪ್ರಾಪ್ತಿ, ದಶ ಸಹಸ್ರ ಗಾಯತ್ರಿ ಸಮೇತ ಸುದರ್ಶನ ನರಸಿಂಹ ಯಾಗ ಹಾಗೂ ಶುಕ್ರವಾರ ಅಗ್ನಿಕುಂಡ ಆತ್ಮ ಪೂಜೆ ಮಹಾಶಕ್ತಿ ನವ ದುರ್ಗಿ ಮಹಾ ಚಂಡಿ ಮೂಲ ಮಂತ್ರ ಲೋಕಕಲ್ಯಾಣ ಯಾಗ ಹಮ್ಮಿಕೊಳ್ಳಲಾಗಿದೆ.
ಹಾಗೂ ದಿನಾಂಕ 31-1 2026ರ ಶನಿವಾರ ಶ್ರೀ ಗುರು ಪರದೇಶಿಕೇಂದ್ರ ಮಹಾಸ್ವಾಮಿಜಿಯವರ ಅಮೃತಸರದಿಂದ ಮಹಾಪೂರ್ಣಾಹುತಿ ಸೇವೆ ಹಾಗೂ ಮಧ್ಯಾಹ್ನ 12 ಗಂಟೆಗೆ ಸರ್ವ ಧರ್ಮ ಸಮ್ಮೇಳನ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು 30 ನೇ ತಾರೀಕು ಶುಕ್ರವಾರ ರಾತ್ರಿ ರಾಜ್ಯ ಮಟ್ಟದ ಪುರುಷರ ಒನಲು ಬೆಳಕಿನ ಕಬ್ಬಡಿ ಪಂದ್ಯಾಳ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ.
ಸರ್ವ ಧರ್ಮ ಸಮ್ಮೇಳನವನ್ನು ಶ್ರೀ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದ ಮಹಾಸ್ವಾಮಿಜಿಯವರು ಉದ್ಘಾಟಿಸಲಿದ್ದು ಶ್ರೀ ನಿರಂಜನಾ ಪುರಿ ಮಹಾಸ್ವಾಮೀಜಿ ಅವರು ಕರಿಬಸವ ದೇಶಿ ಶಿವಯೋಗಿ ಮಹಾಸ್ವಾಮಿಜಿಯವರು ಅಭಿನವ ಮಲ್ಲಿಕಾರ್ಜುನ ದೇಸಿ ಕೇಂದ್ರ ಸ್ವಾಮೀಜಿ ಅವರು ಈಶ್ವರಾನಂದ ಪುರಿ ಸ್ವಾಮೀಜಿ ಅವರು ಪ್ರಸನಾನಂದ ಸ್ವಾಮೀಜಿಯವರು ಇನ್ನು ಮೊದಲಾದವರು ಭಾಗವಹಿಸಲಿದ್ದಾರೆ.
ಎಂದು ಇದೇ ವೇಳೆ ಅವರು ತಿಳಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ತಿಪಟೂರು ಶಾಸಕ, ಕೆ ಷಡಕ್ಷರಿ . ತುರುವೇಕೆರೆ ಶಾಸಕ ಎಂ ಟಿ ಕೃಷ್ಣಪ್ಪ ಕೇಂದ್ರ ಜಲ ಶಕ್ತಿ ರೈಲ್ವೆ ಖಾತೆ ರಾಜ್ಯ ಸಚಿವ ವಿ ಸೋಮಣ್ಣ, ಗೃಹ ಸಚಿವರಾದ ಜಿ ಪರಮೇಶ್ವರ್, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಪ್ರಮೋದ್ ಮುತಾಲಿಕ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಇದೇ ವೇಳೆ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶನೇಶ್ವರ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷರು ಶಂಕರಪ್ಪ ಉಪಾಧ್ಯಕ್ಷರಾದ ಚೌದರಿ ಮಹಾಲಿಂಗಪ್ಪ ಕಾರ್ಯದರ್ಶಿ ನಂಜಪ್ಪ ಸಹಕಾರ್ಯದರ್ಶಿ ಉಮೇಶ್ ಖಜಾಂಚಿ ಮೋಹನ್ ಅಮೂಲ್ಯ ಫೌಂಡೇಶನ್ ಅಧ್ಯಕ್ಷರಾದ ಮಂಜುನಾಥ್ ಕುಣಿಗಲ್, ಚಂದ್ರಶೇಖರ್,ಕೃಷ್ಣಪ್ಪ ಆಲ್ಬೂರ್ ಇನ್ನು ಮೊದಲಾದವರು ಹಾಜರಿದ್ದರು
