ವೈಸಿರಿ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ
ವೈಸಿರಿ ಕಾಲೇಜಿನ ಮಮತ ಎಸ್.ಎಂ ದ್ವಿತೀಯ ತುಮಕೂರು ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ .97.5%ಅಂಕಗಳನ್ನು ಗಳಿಸುವುದರೊಂದಿಗೆ 2025- 26 ನೇ ಸಾಲಿನ ಪರೀಕ್ಷೆಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕಾಲೇಜಿನ ದಣಿವರಿಯದ ಪರಿಶ್ರಮಕ್ಕೆ ಒಳ್ಳೆಯ ಫಲಿತಾಂಶ ದೊರೆತಿರುವುದು ಹೆಮ್ಮೆಯ ಸಂಗತಿ.
ವಿಜ್ಞಾನ ವಿಭಾಗದಲ್ಲಿ ಒಟ್ಟು 29 ಮಂದಿ ಅತ್ಯುನ್ನತ ಶ್ರೇಣಿ, 40 ಮಂದಿ ಪ್ರಥಮ ಶ್ರೇಣಿ ಮತ್ತು 05ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ನಮ್ಮ ವೈಸಿರಿ ಕಾಲೇಜಿನ ಮಮತ ಎಸ್ .ಎಂ(97.5%), ಹರ್ಷಿತ ಜಿ.ವಿ(97.4%.), ಶೋಭ (97.2%), ಶೃತಿ (97%), ಪವನ್ ಕುಮಾರ್.ಎನ್ (96.33%) ಅತ್ಯುತ್ತಮ ಅಂಕಗಳನ್ನು ಗಳಿಸುವುದರೊಂದಿಗೆ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಕನ್ನಡದಲ್ಲಿ ಮಮತ ಎಸ್.ಎಂ, ಹರ್ಷಿತ ಜಿ . ವಿ, ಮಾನಸ ಡಿ, ಶೋಭ, ಯಶಸ್ವಿನಿ ಜಿ.ಎಂ, ಚರಣ್ ಸಿ.ಎಂ., ಗಣಿತ ವಿಷಯದಲ್ಲಿ ಮಮತ ಎಸ್.ಎಂ. ಶೃತಿ, ಗಣಕ ವಿಜ್ಞಾನ ದಲ್ಲಿ ಹರ್ಷಿತ ಜಿ. ವಿ, ಹರ್ಷಿತ ಎಂ. ,ಲಕ್ಷ್ಮೀ .ವಿ ನೂರಕ್ಕೆ ನೂರು ಅಂಕಗಳನ್ನು ಪಡೆದಿದ್ದಾರೆ.
ವೈಸಿರಿ ಕಾಲೇಜಿನ ಎಲ್ಲ ಸಾಧಕ ವಿದ್ಯಾರ್ಥಿಗಳನ್ನು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಕೆ.ಬಿ.ಜಯಣ್ಣನವರು , ಕಾರ್ಯದರ್ಶಿಗಳಾದ ಎನ್.ಬಿ. ಪ್ರದೀಪ್ ಕುಮಾರ್ ರವರು ಹಾಗೂ ಪ್ರಾಂಶುಪಾಲರಾದ ಪೂರ್ಣ ಗಂಗ ಹೆಚ್.ಎಂ ರವರು ಅಭಿನಂದಿಸಿದರು.
ವಿದ್ಯಾರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿರುವುದು ನಮಗೆ ಸಾರ್ಥಕ್ಯದ ಭಾವವನ್ನು ತಂದುಕೊಡುತ್ತಿದೆ. ವಿಜ್ಞಾನ ವಿಭಾಗದ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಯ ಒತ್ತಡದಲ್ಲಿಯೂ ಬೋರ್ಡ್ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ್ದು ನಮಗೆ ಹೆಮ್ಮೆಯ ಸಂಗತಿ. ಮುಂದಿನ ವರ್ಷಗಳಲ್ಲಿ ಇದಕ್ಕಿಂತಲೂ ಉತ್ತಮ ಫಲಿತಾಂಶ ತರುವಂತಾಗಲಿ ಎಂದು ಎನ್. ಬಿ. ಪ್ರದೀಪ್ ಕುಮಾರ್ ಶುಭ ಹಾರೈಸಿದರು.
ಕಾಲೇಜಿನಲ್ಲಿ ನಮಗೆ ಅಧ್ಯಯನಕ್ಕೆ ಬೇಕಾದ ಉತ್ತೇಜನ ವಾತಾವರಣವಿದೆ. ಉಪನ್ಯಾಸಕ ವೃಂದದವರ ನಿರಂತರ ಮಾರ್ಗದರ್ಶನ, ಹೆತ್ತವರ ಬೆಂಬಲ ಸದಾ ನಮ್ಮ ಪಾಲಿಗಿತ್ತು. ಅಲ್ಲದೇ ಉನ್ನತವಾದುದನ್ನು ಸಾಧಿಸಲೇಬೇಕೆಂಬ ಛಲ ನಮ್ಮಲ್ಲಿ ಸದಾ ಜಾಗೃತವಾಗಿತ್ತು.
ವೈಸಿರಿ ಕಾಲೇಜಿನಲ್ಲಿ ಕಲಿತಿರುವುದಕ್ಕೆ ನಮಗೆ ಸಂತೋಷವಿದೆ. ಇಲ್ಲಿಯ ಕಲಿಕಾಪೂರಕ ವಾತಾವರಣ ನಮಗೆ ಅತ್ಯಂತ ಉಲ್ಲಾಸದಾಯಕವಾಗಿತ್ತು. ಶಿಸ್ತುಬದ್ಧ ಬೋಧನೆ, ತರಗತಿಯ ಸುವ್ಯವಸ್ಥೆ ನಮ್ಮನ್ನು ಸದಾ ಓದಿನೆಡೆಗೆ ಗಮನಹರಿಸುವಂತೆ ಮಾಡಿತ್ತು. ಓದುವಾಗ ಸ್ವಲ್ಪ ಒತ್ತಡ ಎಂದು ಎನಿಸಿದರೂ ಈ ಕ್ಷಣದಲ್ಲಿ ನಿಂತು ಯೋಚಿಸುವಾಗ ಅಷ್ಟೊಂದು ತಾಳ್ಮೆಯಿಂದ ನಮಗೆ ಸಿದ್ಧತಾ ಪರೀಕ್ಷೆಗಳನ್ನು ನಡೆಸಿ, ಮೌಲ್ಯಮಾಪನ ಮಾಡಿಕೊಟ್ಟು, ನಮ್ಮನ್ನು ತಿದ್ದಿದ ಉಪನ್ಯಾಸಕವೃಂದಕ್ಕೆ ನಾವು ಆಭಾರಿಗಳಾಗಿದ್ದೇವೆ. ಪ್ರಾಂಶುಪಾಲರಿಗೂ ಆಡಳಿತವೃಂದಕ್ಕೂ ನಮ್ಮ ಕೃತಜ್ಞತೆಗಳು ಎಂದು ಮಮತ ಎಸ್.ಎಂ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
