ಭಾರತ್ ಜೋಡೋ” ಕಾರ್ಯಕ್ರಮದ ಲೋಗೋ ಅನಾವರಣ
ಲೋಗೋ ಬಿಡುಗಡೆಗೊಳಿಸಿದ ಉಪ ಮುಖ್ಯಮಂತ್ರಿ ಡಾ: ಜಿ.ಪರಮೇಶ್ವರ್
ಬೆಂಗಳೂರು(ಕ.ವಾ.)ಸೆ.೫: “ಭಾರತ್ ಜೋಡೋ” ಲೋಗೋವನ್ನು ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಶುಕ್ರವಾರ ಅಧಿಕೃತವಾಗಿ ಅನಾವರಣಗೊಳಿಸಿದರು.
ನಂತರ ಮಾತನಾಡಿದ ಅವರು, ಲೋಗೋ ಅನಾವರಣವು ರಾಜ್ಯಾದ್ಯಂತ “ಭಾರತ್ ಜೋಡೋ” ಕಾರ್ಯಕ್ರಮದ ಅನುಷ್ಠಾನದ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಹೊಸ ಲೋಗೋವು ಏಕತೆ, ಒಗ್ಗಟ್ಟು, ಯುವಜನರ ಸಕ್ರಿಯ ಪಾಲ್ಗೊಳ್ಳುವಿಕೆ ಹಾಗೂ ಕರ್ನಾಟಕದ ಜನತೆಯ ಸಾಮೂಹಿಕ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ. “ಭಾರತ್ ಜೋಡೋ” ಕಾರ್ಯಕ್ರಮದ ಮೂಲ ಆಶಯ ಹಾಗೂ ದೂರದೃಷ್ಟಿಯನ್ನು ಪ್ರತಿನಿಧಿಸುವ ರೀತಿಯಲ್ಲಿ ಲೋಗೋವನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದರು.
ಯುವಜನರನ್ನು ಒಗ್ಗೂಡಿಸಿ, ಏಕತೆ, ಸಾಮಾಜಿಕ ಸಾಮರಸ್ಯ, ಜವಾಬ್ದಾರಿಯುತ ನಾಗರಿಕತ್ವ ಹಾಗೂ ರಾಷ್ಟç ನಿರ್ಮಾಣದಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ರೂಪಿಸಲಾಗಿರುವ ಮಹತ್ವಾಕಾಂಕ್ಷಿ ಕಾರ್ಯಕ್ರಮವೇ “ಭಾರತ್ ಜೋಡೋ” ಎಂದು ಹೇಳಿದರು.
ಈ ಮಹತ್ವದ ಕಾರ್ಯಕ್ರಮಕ್ಕೆ ವಿಶಿಷ್ಟ ಗುರುತನ್ನು ರೂಪಿಸುವ ನಿಟ್ಟಿನಲ್ಲಿ “ಭಾರತ್ ಜೋಡೋ” ಲೋಗೋ ವಿನ್ಯಾಸಕ್ಕಾಗಿ ಸಾರ್ವಜನಿಕರಿಂದ ವಿನ್ಯಾಸಗಳನ್ನು ಆಹ್ವಾನಿಸಲಾಗಿತ್ತು. ಇದಕ್ಕೆ ರಾಜ್ಯದಾದ್ಯಂತ ಉತ್ತಮ ಸ್ಪಂದನೆ ದೊರೆತಿದ್ದು, ಒಟ್ಟು ೨೫೫ ಲೋಗೋ ವಿನ್ಯಾಸಗಳು ಸಲ್ಲಿಕೆಯಾಗಿದ್ದವು ಎಂದು ತಿಳಿಸಿದರು.
ಲೋಗೋ ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕ, ನ್ಯಾಯಸಮ್ಮತ ಹಾಗೂ ವೃತ್ತಿಪರವಾಗಿ ನಡೆಸುವ ಉದ್ದೇಶದಿಂದ ಸಲ್ಲಿಕೆಯಾಗಿದ್ದ ವಿನ್ಯಾಸಗಳನ್ನು ಪರಿಶೀಲಿಸಿ, ಅಂತಿಮವಾಗಿ ಆಯ್ಕೆ ಮಾಡುವ ಜವಾಬ್ದಾರಿಯನ್ನು ಕರ್ನಾಟಕ ಚಿತ್ರಕಲಾ ಪರಿಷತ್ಗೆ ವಹಿಸಲಾಗಿತ್ತು ಎಂದು ತಿಳಿಸಿದರು.
ಚಿತ್ರಕಲಾ ಪರಿಷತ್ ವತಿಯಿಂದ ಸಲ್ಲಿಕೆಯಾಗಿದ್ದ ವಿನ್ಯಾಸಗಳನ್ನು ಸಮಗ್ರವಾಗಿ ಪರಿಶೀಲಿಸಿ ಹಾಗೂ ಮೌಲ್ಯಮಾಪನ ನಡೆಸಿದ ಬಳಿಕ ಎರಡು ಲೋಗೋಗಳನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿತ್ತು. ಈ ಎರಡೂ ವಿನ್ಯಾಸಗಳನ್ನು ಅಂತಿಮವಾಗಿ ಅನುಮೋದಿಸಲಾಯಿತು. ಎರಡೂ ಅಂತಿಮ ವಿನ್ಯಾಸಗಳಲ್ಲಿನ ಪ್ರಮುಖ ಅಂಶಗಳು ಹಾಗೂ ಪರಿಕಲ್ಪನೆಗಳನ್ನು ಸೃಜನಾತ್ಮಕವಾಗಿ ಸಂಯೋಜಿಸಿ, “ಭಾರತ್ ಜೋಡೋ” ಕಾರ್ಯಕ್ರಮಕ್ಕೆ ವಿಶಿಷ್ಟ ಹಾಗೂ ಅರ್ಥಪೂರ್ಣ ದೃಶ್ಯ ಗುರುತನ್ನು ನೀಡುವ ಅಂತಿಮ ಲೋಗೋವನ್ನು ರೂಪಿಸಲಾಗಿದೆ ಎಂದರು.
*-*-*-*-*-*
ಭಾರತ್ ಜೋಡೋ – ಲಾಂಛನ ಅನಾವರಣ
ಬೆಂಗಳೂರು ಸೆ.೫(ಕರ್ನಾಟಕ ವಾರ್ತೆ): ರಾಜ್ಯದ ಯುವಶಕ್ತಿಯನ್ನು ಪ್ರೋತ್ಸಾಹಿಸಲು ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ “ಭಾರತ್ ಜೋಡೋ” ಕುರಿತು ಕಲಾವಿದರಿಂದ ರೂಪಗೊಂಡ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಒಪ್ಪಿರುವ ಲೋಗೊವನ್ನು ಉಪ ಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ್ ಅವರು ಶುಕ್ರವಾರ ಬಿಡುಗಡೆ ಮಾಡಿದರು.
ರಾಜ್ಯದ ಯುವಜನರನ್ನು ಒಂದೆಡೆ ಸೇರಿಸಿ, ಒಗ್ಗಟ್ಟು, ಸಾಮಾಜಿಕ ಸೌಹಾರ್ದತೆ, ಜವಾಬ್ದಾರಿಯುತ ಪೌರತ್ವ ಹಾಗೂ ರಾಷ್ಟç ನಿರ್ಮಾಣದಲ್ಲಿ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ರೂಪುಗೊಂಡ ಒಂದು ಪ್ರಮುಖ ಯೋಜನೆ ಇದಾಗಿದೆ.
ಈ ಪ್ರಮುಖ ಯೋಜನೆಗೆ ಒಂದು ವಿಶಿಷ್ಟ ಗುರುತನ್ನು ನೀಡುವ ನಿಟ್ಟಿನಲ್ಲಿ, “ಭಾರತ್ ಜೋಡೋ” ಲಾಂಛನ(ಐogo)ವನ್ನು ವಿನ್ಯಾಸಗೊಳಿಸಲು ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕರ್ನಾಟಕದಾದ್ಯಂತ ಒಟ್ಟು ೨೫೫ ಲಾಂಛನ ವಿನ್ಯಾಸಗಳು ಸ್ವೀಕೃತವಾಗಿದ್ದವು.
ಸಲ್ಲಿಕೆಯಾದ ವಿನ್ಯಾಸಗಳನ್ನು ಪರಿಶೀಲಿಸಿ, ಆಯ್ಕೆ ಪ್ರಕ್ರಿಯೆಯು ನಿಷ್ಪಕ್ಷಪಾತವಾಗಿ ಹಾಗೂ ವೃತ್ತಿಪರವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು “ಕರ್ನಾಟಕ ಚಿತ್ರಕಲಾ ಪರಿಷತ್”ಗೆ ಈ ಜವಾಬ್ದಾರಿಯನ್ನು ವಹಿಸಲಾಗಿತ್ತು. ವಿವರವಾದ ಮೌಲ್ಯಮಾಪನದ ನಂತರ, ಎರಡು ಲಾಂಛನಗಳನ್ನು ಅಂತಿಮಗೊಳಿಸಿ, ಉಪ ಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ್ ಅವರ ಅಂತಿಮ ಅನುಮೋದನೆಗೆ ಸಲ್ಲಿಸಲಾಯಿತು.
ಶುಕ್ರವಾರ ಅನಾವರಣಗೊಂಡ ಅಂತಿಮ “ಭಾರತ್ ಜೋಡೋ” ಲಾಂಛನವು, ಆಯ್ಕೆಯಾದ ಎರಡೂ ವಿನ್ಯಾಸಗಳ ಪ್ರಮುಖ ಅಂಶಗಳು ಮತ್ತು ಆಲೋಚನೆಗಳ ಸೃಜನಶೀಲ ಸಮ್ಮಿಲನವಾಗಿದ್ದು, ಕಾರ್ಯಕ್ರಮಕ್ಕೆ ಅತ್ಯಂತ ಅರ್ಥಪೂರ್ಣ ಹಾಗೂ ವಿಶಿಷ್ಟವಾದ ದೃಶ್ಯ ಗುರುತನ್ನು (ಗಿisuಚಿಟ Iಜeಟಿಣiಣಥಿ) ಒದಗಿಸಿದೆ.
ಈ ಯೋಜನೆಯಡಿ ಯುವಕರನ್ನು ಆಕರ್ಷಿಸಲು ಲೋಗೊ ಒಂದು ಪ್ರಮುಖ ಮೈಲಿಗಲ್ಲಾಗಿದ್ದು, ಕರ್ನಾಟಕದಾದ್ಯಂತ ಯುವಜನರ ಚಟುವಟಿಕೆಗಳಿಗೆ ಒಂದು ವಿಶಿಷ್ಟ ಗೌರವವನ್ನು ತಂದುಕೊಡಲಿದೆ.
ಈ ಲಾಂಛನವು ಒಗ್ಗಟ್ಟು, ಸಹಬಾಳ್ವೆ, ಯುವಜನರ ಭಾಗವಹಿಸುವಿಕೆ ಹಾಗೂ ಕರ್ನಾಟಕದ ಜನರ ಸಾಮೂಹಿಕ ಶಕ್ತಿಯ ಸಂಕೇತವಾಗಿದ್ದು, “ಭಾರತ್ ಜೋಡೋ” ಕಾರ್ಯಕ್ರಮದ ಮೂಲ ಆಶಯವನ್ನು ಪ್ರತಿಬಿಂಬಿಸುತ್ತದೆ ಎಂದು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಆಯುಕ್ತ ಎಮ್.ಎನ್. ಅನುಚೇತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*-*-*-*-*-*
