ವಿಷಯ: ಶಶಿಕುಮಾರ್ ಡಿ.ಎನ್. ಅವರು ಪಿಎಚ್.ಡಿ. ಪದವಿ ಪಡೆದಿರುವ ಕುರಿತು ಪತ್ರಿಕಾ ಪ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ದೋಳ್ಳೆನಹಳ್ಳಿ ಗ್ರಾಮದ ಬಡ ಕುಟುಂಬದವರಾದ, ಗುತ್ತಿಗೆ ನೌಕರರಾದ ಶ್ರೀ ಡಿ.ಎನ್. ನಾಗರಾಜು ಮತ್ತು ಹೆಚ್. ಕೆ. ಲಕ್ಷ್ಮೀದೇವಮ್ಮ ಅವರ ಪುತ್ರ ಡಿ.ಎನ್. ಶಶಿಕುಮಾರ್ ಅವರು ತಮ್ಮ ಕಠಿಣ ಪರಿಶ್ರಮ ಹಾಗೂ ನಿರಂತರ ಅಧ್ಯಯನದ ಮೂಲಕ ಯುಜಿಸಿ ಫೆಲೋಶಿಪ್ನೊಂದಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿಗೆ ಅರ್ಹತೆ ಪಡೆದಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ಸಾರ್ವಜನಿಕ ಆಡಳಿತ (Public Administration) ವಿಷಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ಶಶಿಕುಮಾರ್ ಡಿ.ಎನ್. ಅವರು,
“Impact of E-Governance on District Administration in Karnataka with Special Reference to Mysuru District: An Analysis”
ಎಂಬ ವಿಷಯದ ಕುರಿತು ಪಿಎಚ್.ಡಿ. ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ಅಧಿಸೂಚನೆಯಂತೆ, ಕುಲಪತಿಗಳ ಅನುಮೋದನೆ ಹಾಗೂ ಪರೀಕ್ಷಕರ ಮಂಡಳಿಯ ಶಿಫಾರಸ್ಸಿನ ಮೇರೆಗೆ ಇವರ ಸಂಶೋಧನಾ ಪ್ರಬಂಧವನ್ನು ಅಂಗೀಕರಿಸಲಾಗಿದ್ದು, ಸಾರ್ವಜನಿಕ ಆಡಳಿತ ವಿಷಯದಲ್ಲಿ ಪಿಎಚ್.ಡಿ. ಪದವಿಗೆ ಅರ್ಹರಾಗಿದ್ದಾರೆ.
ಇವರ ಸಂಶೋಧನೆಗೆ ಡಾ. ಬಿ.ಎನ್. ಯಶೋಧ ಅವರು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸಂಶೋಧನಾ ಪ್ರಬಂಧವನ್ನು ಇಂಗ್ಲಿಷ್ ಭಾಷೆಯಲ್ಲಿ ಸಿದ್ಧಪಡಿಸಲಾಗಿದೆ. ಮುಂದಿನ ಘಟಿಕೋತ್ಸವದಲ್ಲಿ ಶಶಿಕುಮಾರ್ ಡಿ.ಎನ್. ಅವರಿಗೆ ಪಿಎಚ್.ಡಿ. ಪದವಿ ಪ್ರದಾನವಾಗಲಿದೆ.
ಬಡ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಶಶಿಕುಮಾರ್ ಅವರು ತಮ್ಮ ಪರಿಶ್ರಮ, ಶೈಕ್ಷಣಿಕ ಆಸಕ್ತಿ ಮತ್ತು ದೃಢಸಂಕಲ್ಪದ ಮೂಲಕ ಉನ್ನತ ಶೈಕ್ಷಣಿಕ ಸಾಧನೆ ಮಾಡಿರುವುದು ಕುಟುಂಬದವರು ಹಾಗೂ ದೋಳ್ಳೆನಹಳ್ಳಿ ಗ್ರಾಮದ ಜನರಿಗೆ ಹೆಮ್ಮೆಯ ವಿಷಯವಾಗಿದೆ.
ಆದ್ದರಿಂದ, ಶಶಿಕುಮಾರ್ ಡಿ.ಎನ್. ಅವರ ಈ ಶೈಕ್ಷಣಿಕ ಸಾಧನೆಯ ಕುರಿತು ತಮ್ಮ ಗೌರವಾನ್ವಿತ ಪತ್ರಿಕೆಯಲ್ಲಿ ಸೂಕ್ತ ಪ್ರಾಮುಖ್ಯತೆಯೊಂದಿಗೆ ಪತ್ರಿಕಾ ಪ್ರಕಟಣೆ ಪ್ರಕಟಿಸುವಂತೆ ವಿನಮ್ರವಾಗಿ ವಿನಂತಿಸಿಕೊಳ್ಳುತ್ತೇವೆ.
