*ಕೊರಟಗೆರೆ ತಾಲ್ಲೂಕಿನ* ಪತ್ರಕರ್ತರ ಮಕ್ಕಳಿಗೆ ಶೈಕ್ಷಣಿಕ ನೆರವು ಕಲ್ಪಿಸುವ ಉದ್ದೇಶದಿಂದ ಹಲವು ಶಿಕ್ಷಣ ಸಂಸ್ಥೆಗಳಿಗೆ
*ಕೊರಟಗೆರೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ* ಜೊತೆಯಲ್ಲಿ ಮನವಿ ಸಲ್ಲಿಸಲಾಯಿತು.
ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ಪತ್ರಕರ್ತರ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ಮುಂದಾದ ಪ್ರಿಯದರ್ಶಿನಿ ಪಿಯು ಕಾಲೇಜು, ರಾಘವೇಂದ್ರ ಇಂಟರ್ ನ್ಯಾಷನಲ್ ಸ್ಕೂಲ್, ಸುಭಾಷ್ ವಿಜ್ಞಾನ ಪಿಯು ಕಾಲೇಜು, ರವೀಂದ್ರಭಾರತಿ ವಿದ್ಯಾಸಂಸ್ಥೆ ಮತ್ತು ಚಾಣಾಕ್ಯ ಪಬ್ಲಿಕ್ ಸ್ಕೂಲ್ ಸಂಸ್ಥೆಗಳ ಆಡಳಿತ ಮಂಡಳಿಗೆ *ಹೃತ್ಪೂರ್ವಕ ಧನ್ಯವಾದಗಳು.*
ಪತ್ರಕರ್ತರ ಕುಟುಂಬಗಳ ಕಷ್ಟಕ್ಕೆ ಸ್ಪಂದಿಸಿ, ಶಿಕ್ಷಣದ ಮೂಲಕ ಮಕ್ಕಳ ಭವಿಷ್ಯಕ್ಕೆ ಬೆಂಬಲ ನೀಡುತ್ತಿರುವ ನಿಮ್ಮ ಸಹಕಾರ ಸದಾ ಸ್ಮರಣೀಯ. 🙏
ಜಿಲ್ಲಾ ಘಟಕದ ಖಜಾಂಚಿ ಸತೀಶ್ ಹಾರೋಗೆರೆ, ಜಿಲ್ಲಾ ನಿರ್ದೇಶಕರಾದ ಪುರುಷೋತ್ತಮ್ ಕೊರಟಗೆರೆ, ತಾಲ್ಲೂಕು ಅಧ್ಯಕ್ಷರಾದ ಎನ್.ಮೂರ್ತಿ, ಗೌರವಾಧ್ಯಕ್ಷ ಚಿದಂಬರ, ಉಪಾಧ್ಯಕ್ಷ ನಾಗರಾಜು, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ, ಖಜಾಂಚಿ ನವೀನ್ ಸೇರಿದಂತೆ ತಾಲ್ಲೂಕು ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.
ಎಲ್. ಯೋಗೇಶ್
ಅಧ್ಯಕ್ಷರು
*ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲೆ*,
