ಅಕ್ಕಮಹಾದೇವಿ ಜಯಂತಿ
ತುಮಕೂರು -`ಅಕ್ಕಮಹಾದೇವಿ ಪ್ರಪಂಚ ಕಂಡ ಶ್ರೇಷ್ಠ ಅನುಭಾವಿ. ಕನ್ನಡದ ಮೊಟ್ಟಮೊದಲ ಕವಯತ್ರಿ. ಆಕೆ ತನ್ನ ಬದುಕಿನ ಮೂಲಕವೇ ಸಾಮಾಜಿಕ ಕ್ರಾಂತಿಗೆ, ಮಹಿಳಾ ಚಳುವಳಿಗೆ ನಾಂದಿ ಹಾಡಿದಳು. ಆಕೆ ಸಮಾಜ ಸುಧಾರಕಳಾಗಿ ಮಾಡಿದ ವೈಚಾರಿಕ ವಿಚಾರಗಳ ವಚನ ಕೃಷಿ, ದಿಟ್ಟ, ನೇರ, ಬಂಡಾಯದ ನಿಲುವು, ಮಹಿಳಾ ಕುಲಕ್ಕೇ ಮಾದರಿಯಾದದ್ದು.
ಅಕ್ಕಮಹಾದೇವಿ ಒಬ್ಬ ಶ್ರೇಷ್ಠ ವಚನಕಾರ್ತಿ. ಹಾಗೆಯೇ ಶ್ರೇಷ್ಠ ಕವಯತ್ರಿ. ಲಭ್ಯವಾಗಿರುವ ಅವಳ ೪೩೪ ವಚನಗಳಲ್ಲಿ ಜೀವನ ದರ್ಶನವೇ ಆಗುತ್ತದೆ. ಅಕ್ಕ ಲಿಂಗಭೇದವನ್ನು ದಿಕ್ಕರಿಸಿದ ನಿರ್ಲಿಂಗವಾದಿ. ಸ್ತಿçÃಪುರುಷರ ಅಸಮಾನತೆಯ ಬಗೆಗಿನ ಅವಳ ಜಾಗೃತಿ ಅಸಾಮಾನ್ಯವಾದುದು. ಭಾರತದ ಶ್ರೇಷ್ಠ ಮೊಟ್ಟ ಮೊದಲ ಸ್ತಿçÃವಾದಿಯಾದ ಅಕ್ಕಮಹಾದೇವಿ ತನ್ನ ಪ್ರಖರವಾದ ವಚನಗಳ ಮೂಲಕ ಪುರುಷ ಪ್ರಧಾನವಾದ ದೌರ್ಜನ್ಯಗಳ ಬಗ್ಗೆ ಅನುಭಾವಿಕವಾಗಿ ಜಾಗೃತಿ ಮೂಡಿಸಿದ್ದಾಳೆ.
ಹೆಣ್ಣು ಹೆಣ್ಣಾದರೆ, ಗಂಡಿನ ಸೂತಕ
ಗಂಡು ಗಂಡಾದಡೆ ಹೆಣ್ಣಿನ ಸೂತಕ
ಹೆಣ್ಣನ್ನು ಶೋಷಣೆಗೆ ಎಡೆಮಾಡುವ ಅಸ್ತç ಸೂತಕ. ಅಕ್ಕ ಅತ್ಯಂತ ಸಮರ್ಥವಾಗಿ, ಅರ್ಥಪೂರ್ಣವಾಗಿ ಈ ವಚನದ ಮೂಲಕ ಸೂತಕದ ನೆಲೆಯನ್ನು ವಿವರಿಸಿದ್ದಾಳೆ.
ಅಕ್ಕನ “ಜಗವೆಲ್ಲ ಹೆಣ್ಣು ನೋಡಾ!’’ ಎನ್ನುವ ನುಡಿ, ಇಡೀ ಹೆಣ್ಣುಕುಲದ ಆತ್ಮವಿಶ್ವಾಸದ ದನಿ. ಹೆಣ್ಣಿಲ್ಲದೆ ಇಡೀ ಪ್ರಪಂಚ ಶೂನ್ಯ. ಇಡೀ ಪ್ರಪಂಚವೇ ತಾಯಿಕುಲದಿಂದಾಗಿದ್ದು. ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರನ್ನೂ ಹೆತ್ತು ಹೊತ್ತು, ಸಾಕಿ ಸಲಹುವವಳು ಹೆಣ್ಣೇ ತಾನೇ! ಆದ್ದರಿಂದಲೇ ಇಡೀ ಜಗವೇ `ತಾಯಿ’ ಎಂಬ ತಿಳುವಳಿಕೆಯನ್ನು ಅಕ್ಕ ಈ ಒಂದು ಸಾಲಿನಲ್ಲಿ ತಿಳಿಸಿದ್ದಾಳೆ. ಈ ತಾಯಿ ಅಂದರೆ ಹೆಣ್ಣು ತನ್ನ ಬದುಕಿನ ಪ್ರತಿ ಹೆಜ್ಜೆಗೂ ಶೋಷಣೆಗೆ ಒಳಗಾಗುವ ಪರಿಯನ್ನು ಅಕ್ಕ ತನ್ನ ವಚನಗಳ ಮೂಲಕ ಚಿಂತಿಸಿದ್ದಾಳೆ.
“ಬದುಕಿನ ಎಲ್ಲ ಐಹಿಕ ಸುಖವನ್ನೂ ತ್ಯಜಿಸಿ ಸಾಂಸಾರಿಕ ಬಂಧನಗಳನ್ನು ಸಾರಾಸಗಟಾಗಿ ನಿರಾಕರಿಸಿ, ಅನುಪಮ ವೈರಾಗ್ಯ ನಿಧಿಯಾಗಿ ಹೊರಟ ಅಕ್ಕನ ವೈಚಾರಿಕ ವ್ಯಕ್ತಿತ್ವ ಅಪೂರ್ವವಾದುದು.’’ ಎಂದು ಮಹಿಳಾ ಚಿಂತಕಿ, ಲೇಖಕಿ, ಡಾ. ಬಿ.ಸಿ. ಶೈಲಾನಾಗರಾಜ್ ತಿಳಿಸಿದರು. ಅಕ್ಕಮಹಾದೇವಿ ಮಹಿಳಾ ಸಮಾಜ, ಮಧುಗಿರಿ ಏರ್ಪಡಿಸಿದ್ದ ಅಕ್ಕಮಹಾದೇವಿ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಮಧುಗಿರಿ ತಾಲ್ಲೂಕು ಕನ್ನಡ ಸಾಹಿತ್ಯಪರಿಷತ್ತಿನ ಅಧ್ಯಕ್ಷರಾದ ಸಹನಾ ನಾಗೇಶ್ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಮಹಿಳಾ ಸಮಾಜದ ಅಧ್ಯಕ್ಷೆ ದಾಕ್ಷಾಯಿಣಿ ರವಿಶಂಕರ್ ಅಧ್ಯಕ್ಷತೆ ವಹಿಸಿದ್ದರು. ಶರಣೆಯರಿಂದ ವಚನ ಗಾಯನ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಹಿರಿಯ ಸದಸ್ಯರಿಗೆ ಸನ್ಮಾನವನ್ನು ಏರ್ಪಡಿಸಲಾಗಿತ್ತು. ಸಾಮೂಹಿಕ ವಚನ ಗಾಯನದಲ್ಲಿ ಅಕ್ಕಮಹಾದೇವಿ ಮಹಿಳಾ ಸಮಾಜದ ಸದಸ್ಯರೆಲ್ಲ ಭಾಗವಹಿಸಿದ್ದರು.
