ಸಿದ್ಧಾರ್ಥ ಮಾಧ್ಯಮ ಕಾಲೇಜಿನಲ್ಲಿ ‘ಸಂಭ್ರಮ- ೨೦೨೬’ಕ್ಕೆ ಚಾಲನೆ
ತುಮಕೂರು: ನಗರದ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಮಾಧ್ಯಮ ಹಬ್ಬ ‘ಸಂಭ್ರಮ- ೨೦೨೬’ಕ್ಕೆ ಗುರುವಾರ ಚಾಲನೆ ದೊರೆಯಿತು.
ವಿಧಾನ ಪರಿಷತ್ ಸದಸ್ಯರಾದ ಕೆ.ಶಿವಕುಮಾರ್ ರಾಗಿ ಬೀಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಘಾಟನೆ ನಂತರ ಮಾತನಾಡಿದ ಅವರು, ಪತ್ರಕರ್ತರು ಜನರ ನಂಬಿಕೆ, ವಿಶ್ವಾಸ ಉಳಿಸಿಕೊಳ್ಳಬೇಕು. ಸಮಾಜದ ಆಶೋತ್ತರಗಳಿಗೆ ಸ್ಪಂದಿಸಬೇಕು. ಇದನ್ನು ಮಾಧ್ಯಮ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ಸಲಹೆ ಮಾಡಿದರು.
ನಿಷ್ಠುರವಾದ ಪತ್ರಿಕೋದ್ಯಮ ಬೇಕಾಗಿದೆ. ಜನರ ಸಮಸ್ಯೆಗಳನ್ನು ಮುಕ್ತವಾಗಿ ಹೇಳುವಂತಾಗಬೇಕು. ಮಾಧ್ಯಮ ವಿದ್ಯಾರ್ಥಿಗಳು ಪತ್ರಿಕೆ ಓದುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಕಾಲೇಜು ಹಂತದಲ್ಲಿಯೇ ಸಮಾಜದ ಗಂಭೀರವಾದ ವಿಷಯಗಳ ಕುರಿತು ಪ್ರಶ್ನಿಸುವ, ವಿಮರ್ಶೆ ಮಾಡುವ ಮನೋಭಾವ ರೂಪಿಸಿಕೊಳ್ಳಬೇಕು ಎಂದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ನಂತರ ದೇಶದ ೧.೧೫ ಕೋಟಿ ಜನ ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ತುಂಬಾ ವ್ಯವಸ್ಥಿತವಾಗಿ ಮತದಾನದ ಹಕ್ಕು ಕಸಿಯಲಾಗುತ್ತಿದೆ. ಮಾಧ್ಯಮ ವಿದ್ಯಾರ್ಥಿಗಳು ಈ ಬಗ್ಗೆ ಗಮನ ಹರಿಸಿ, ಬರೆಯಬೇಕು ಎಂದು ತಿಳಿಸಿದರು.
ಎಲ್ಲ ರಾಜಕಾರಣಿಗಳು ಪತ್ರಿಕೆ, ಟಿ.ವಿ ಶುರು ಮಾಡಿದ್ದಾರೆ. ಅಂಬೇಡ್ಕರ್ ಮಾಡಿದ ಪತ್ರಿಕೆಗಕಳು ತಳ ಸಮುದಾಯಗಳ ಪರ ಧ್ವನಿ ಎತ್ತಲು. ಅಂಬೇಡ್ಕರ್ ಅವರನ್ನು ಪತ್ರಕರ್ತರಾಗಿ ಪರಿಗಣಿಸಿಲ್ಲ. ೩೬ ವರ್ಷ ಪತ್ರಕರ್ತರಾಗಿ ಕೆಲಸ ಮಾಡಿದರೂ ಅವರನ್ನು ಪತ್ರಕರ್ತರನ್ನಾಗಿ ನೋಡುತ್ತಿಲ್ಲ. ಗಾಂಧೀಜಿ, ಭಗತ್ ಸಿಂಗ್, ಇವತ್ತಿನ ಪತ್ರಕರ್ತರು ಅಕ್ರಮ ಆಸ್ತಿ ಸಂಪದಾನೆಗೆ ಪತ್ರಿಕೆ, ಟಿ.ವಿ ಶುರು ಮಾಡುತ್ತಿದ್ದಾರೆ ಎಂದರು.
ಪತ್ರಕರ್ತರಿಗೆ ಪಿ.ಎಫ್, ಇ.ಎಸ್ ಇಲ್ಲ. ಕಾರ್ಪೊರೇಟ್ಗೆ ಅನುಕೂಲ ಮಾಡಿಕೊಡುವ ಪತ್ರಕರ್ತರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ತರಲು ಪ್ರಯತ್ನಿಸಲಾಗುತ್ತಿದೆ. ಇತ್ತೀಚಿಗೆ ಪತ್ರಕರ್ತರು, ಪತ್ರಿಕೆಗಳು ಸಾಮಾಜಿಕವಾಗಿ ನಂಬಿಕೆ ಕಳೆದುಕೊಳ್ಳುತ್ತಿವೆ. ನಂಬಿಕೆ ಬುಲೆಟ್ ಪ್ರೂಫ್ ಜಾಕೆಟ್ ಇದ್ದಂತೆ. ಈಗ ಅದು ಕ್ಷೀಣಿಸುತ್ತಿದೆ. ಅದನ್ನು ಉಳಿಸಿಕೊಳ್ಳಲು ಪತ್ರಕರ್ತರು ನೈತಿಕತೆಯಿಂದ ಕೆಲಸ ಮಾಡಬೇಕು.ಯಾವುದೇ ಆಮಿಷಕ್ಕೆ ಒಳಗಾಗದೆ ಕರ್ತವ್ಯ ನಿರ್ವಹಿಸಬೇಕು ಎಂದರು.
ಎ.ಐ. ಎಲ್ಲೆಡೆ ವ್ಯಾಪಕವಾಗಿದೆ. ಟೆಲಿವಿಷನ್ ನೋಡಿಕೊಂಡು ಬರೆಯುವಂತೆ ಮಾಧ್ಯಮದಲ್ಲಿ ಅನಾರೋಗ್ಯ ಸ್ಪರ್ಧೆ ಹೆಚ್ಚಾಗಿದೆ. ನೆಗೆಟಿವ್ ಹುಡುಕುವುದು ಕೆಲಸವಾಗಿದೆ. ಮಾಧ್ಯಮದ ಮುಂದೆ ಬಹಳ ದೊಡ್ಡ ಸವಾಲು ಇದೆ. ರೋಬೊಟಿಕ್, ಪ್ರಾಮಾಣಿಕವಾಗಿದ್ದರೆ ಅದರಿಂದ ಸಿಗುವ. ಬೆೆಂಗಳೂರು- ತುಮಕೂರು ರಸ್ತೆ ೨೦ ವರ್ಷ ಕಳೆದರೂ ಅಭಿವೃದ್ಧಿ ಆಗಿಲ್ಲ. ೬೦-೭೦ ಕಿಲೊ ಮೀಟರ್ ಸಂಚರಿಸಲು ೨ ಗಂಟೆ ಬೇಕಾಗುತ್ತದೆ. ಜನರ ಸಮಸ್ಯೆಗಳ ಕುರಿತು ಅಭಿಯಾನ ನಡೆಸಬೇಕು ಎಂದರು.
ಭ್ರಷ್ಟಾಚಾರ, ಜಾತಿ ವ್ಯವಸ್ಥೆ. ನಾಲ್ಕು ಸಾವಿರ ಮಠಗಳು ಇರುವ ರಾಜ್ಯದಲ್ಲಿ ಇಂತಹ ವ್ಯವಸ್ತೆ ಇದೆ. ಇದು ಮಠಗಳ ವೈಫಲ್ಯವೇ_ ಜನರಿಗೆ ತಲುಪಿಸುವಲ್ಲಿ ಸಾಮಾಜಿಕ ಜಾಲತಾಣ, ಪೇಯ್ಡ್ ನ್ಯೂಸ್, ಎ.ಐ, ಸಿಟಿಜನ್ ಜರ್ನಲಿಸ್ಟ್ ಈ ಎಲ್ಲ ಸವಾಲುಗಳನ್ನು ಮಾಧ್ಯಮ ವಿದ್ಯಾರ್ಥಿಗಳು ಎದುರಿಸಿ ನಿಲ್ಲಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡಿ ಎಲ್ಲವೂ ನಿಮ್ಮನ್ನು ಹುಡುಕಿಕೊಂಡು ಬರಲಿದೆ ಎಂದು ಹೇಳಿದರು.
ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ್ ಹಾಲಪ್ಪ, ಪೌರ ಕಾರ್ಮಿಕರ ಋಣ ನಾಗರಿಕರ ಮೇಲಿದೆ. ಸ್ವಚ್ಛ ಸಮಾಜದ ನಿರ್ಮಾಣಕ್ಕೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಸಾಮಾನ್ಯ ಕುಟುಂಬದಿAದ ಬಂದು, ರೈತರ ಮಕ್ಕಳು ಉನ್ನತ ಹುದ್ದೆ ಅಲಂಕರಿಸಬೇಕು. ಹಳ್ಳಿಗಾಡಿನಿಂದ ಬಂದವರು ರಾಜ್ಯ, ರಾಷ್ಟಿçÃಯ ಪತ್ರಿಕೆಗಳ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ. ಮಾಧ್ಯಮ ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಪಡೆಯಬೇಕು ಎಂದು ಸಲಹೆ ಮಾಡಿದರು.
ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಟೂಡಾ ಶಶಿಧರ್ ಮಾತನಾಡಿ, ಪೌರ ಕಾರ್ಮಿಕರಿಗೆ ಕೆಲಸದ ಸಮಯದಲ್ಲಿ ಮನೆಗಳಲ್ಲಿ ಕುಡಿಯಲು ನೀರು ಸಹ ಕೊಡುವುದಿಲ್ಲ. ನಗರದಲ್ಲಿ ಶೌಚಾಲಯಗಳಿಲ್ಲದೆ ಪೌರ ಕಾರ್ಮಿಕರು ಪರದಾಡುತ್ತಿದ್ದಾರೆ. ನಾವು ಚಂದ್ರಲೋಕಕ್ಕೆ ಹೋಗಲು ಸಿದ್ಧತೆಗಳು ನಡೆಯುತ್ತಿವೆ. ಆದರೆ ಮ್ಯಾನ್ ಹೋಲ್ ಸ್ವಚ್ಛಗೊಳಿಸಲು ಬೇಕಾದ ಪರಿಕರವೇ ಇಲ್ಲ. ಮನುಷ್ಯನೇ ಇಳಿದು ಸ್ವಚ್ಛಗೊಳಿಸಬೇಕಾದ ಸ್ಥಿತಿ ಇದೆ ಎಂದು ವಿಷಾದಿಸಿದರು. ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಹಾಂತೇಶ್ ಎಂ.ನಡಕಟ್ಟಿ ಮಾತನಾಡಿ, ಸಂಭ್ರಮದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸುತ್ತಿರುವುದು ಉತ್ತಮ ಆಯ್ಕೆ. ಸಿದ್ಧಾರ್ಥ ಕಾಲೇಜಿನಲ್ಲಿ ಒಂದು ಒಳ್ಳೆಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಮಹಾಂತೇಶ್ ಎಂ ನಡಕಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಟ್ಟರು. ಲೇಖಕರಾದ ಮಲ್ಲಿಕಾರ್ಜುನ ಹೊಸಪಾಳ್ಯ, ಡಾ. ಅಮ್ಮಸಂದ್ರ ಸುರೇಶ್ ಮಾತನಾಡಿದರು. ಈ ಬಾರಿ ಸಂಭ್ರಮ -೨೦೨೬ “ಪರಿಸರ ಪತ್ರಿಕೋದ್ಯಮ” ಥೀಮ್ ಹೊಂದಿದ್ದು, ೩೫ ಪೌರಕಾರ್ಮಿಕರಿಗೆ ‘ಸಿದ್ಧಾರ್ಥ ಮಾಧ್ಯಮ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರಾಯೋಗಿಕವಾಗಿ ವಿದ್ಯಾರ್ಥಿಗಳು ಹೊರ ತರುವ ಸಿದ್ಧಾರ್ಥ ಸಂಪದ ಪತ್ರಿಕೆಯನ್ನು ಹೊರ ತಂದರು.
ಮಾಧ್ಯಮೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು, ಸುಮಾರು ೧೫೦ಕ್ಕೂ ಹೆಚ್ಚು ಸ್ಪರ್ಧಿಗಳಲ್ಲಿ ಪಾಲ್ಗೊಂಡಿದ್ದರು. ಎರಡು ದಿನದ ಈ ಕಾರ್ಯಕ್ರಮದಲ್ಲಿ ಒಟ್ಟು ಎಂಟು ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ರೇಡಿಯೋ ಜಾಕಿ, ಪಿಟಿಸಿ, ಫೋಟೋಗ್ರಫಿ, ವೈರಲ್ ಅಡ್ಡ (ರೀಲ್ಸ್), ವರದಿಗಾರಿಕೆ, ಟೆಲಿವಿಷನ್ ಸುದ್ದಿ ವಾಚನ (ನ್ಯೂಸ್ ರೀಡಿಂಗ್), ಕೊಲೇಜ್ ಮೇಕಿಂಗ್, ಮ್ಯಾಡ್ ಆಡ್ಸ್ ಸ್ಪರ್ಧೆಗಳು ನಡೆಸಲಾಯಿತು.
ಎಸ್ಎಸ್ಎಸ್ಇ ಪ್ರಾಂಶುಪಾಲರಾದ ಡಾ.ಸಂಜೀವ್ ಕುಮಾರ್ ಎಲ್, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಸಹಾಯಕ ಆಡಳಿತಾಧಿಕಾರಿ ಖಲಂದರ್ ಪಾಷ ಕೆ.ಎಚ್, ನಿರ್ದೇಶಕರಾದ ಬಿ.ಟಿ.ಮುದ್ದೇಶ್, ಸಹಾಯಕ ಪ್ರಾಧ್ಯಾಪಕರಾದ ಡಾ. ಜ್ಯೋತಿ ಸಿ, ಶ್ವೇತಾ ಎಂ.ಪಿ, ನವೀನ್ ಎನ್ ಜಿ, ರೇಡಿಯೋ ಸಿದ್ಧಾರ್ಥ ಸಿಬ್ಬಂದಿ ಗೌತಮ್ ಎ.ವಿ, ರವಿಕುಮಾರ್, ಮಧುಶ್ರೀ, ಹರೀಶ್ ಕುಮಾರ್, ಟೆಲಿವಿಷನ್ ನಿರ್ವಾಹಕರಾದ ಎಸ್ ರಾಘವ್, ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಮಣಿ ಎಚ್.ಜಿ, ಎಸ್ಎಸ್ಸಿಎಂಎಸ್ನ ಬೋಧಕೇತರ ಸಿಬ್ಬಂದಿಗಳಾದ ಮಂಜುಳಾ ಟಿ ವಿ, ಶಿಲ್ಪ ಜಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ವರ್ಷಿತ ಮತ್ತು ಕಿರ್ತನ ಕಾರ್ಯಕ್ರಮ ನಿರೂಪಣೆ ಮಾಡಿದರು. ಪೂಜಾ ಮತ್ತು ದರ್ಶನ್ ತಂಡದಿAದ ಗೀತ ಗಾಯನ ನಡೆಸಿಕೊಟ್ಟರು.
