ವೃತ್ತಿ ನಿವೃತ್ತಿ ನಂತರ ಕ್ರಿಯಾಶೀಲ ಬದುಕು ರೂಪಿಸಿಕೊಳ್ಳಿ’
ಶಿಕ್ಷಕ ಹನುಮಂತರಾಯಪ್ಪನವರ ಬೀಳ್ಕೊಡುಗೆಯಲ್ಲಿ ಶಾಸಕ ಶ್ರೀನಿವಾಸ್ ಸಲಹೆ
ತುಮಕೂರು: ವೃತ್ತಿಯಿಂದ ನಿವೃತ್ತರಾದವರು ಪ್ರವೃತ್ತಿ ರೂಢಿಸಿಕೊಂಡು ಕ್ರಿಯಾಶೀಲವಾಗಿ ಬದುಕಬೇಕು. ಆಗ ವಿಶ್ರಾಂತಜೀವನವುಉತ್ಸಾಹದಿAದಕೂಡಿರುತ್ತದೆಎAದುಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.
ತೋವಿನಕೆರೆಯಗಂಗಾಧರೇಶ್ವರ ಪದವಿಪೂರ್ವಕಾಲೇಜಿನಲ್ಲಿ ಶಿಕ್ಷಕರಾಗಿ, ಪ್ರಭಾರ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಹನುಮಂತರಾಯಪ್ಪಅವರಿಗೆಅವರ ಸ್ನೇಹ ಬಳಗಗುರುವಾರ ನಗರದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿಹನುಮAತರಾಯಪ್ಪಅವರನ್ನು ಸನ್ಮಾನಿಸಿ ಶುಭಕೋರಿ ಮಾತನಾಡಿದರು.
ವೃತ್ತಿಯಿಂದ ನಿವೃತ್ತರಾದ ಮಾತ್ರಕ್ಕೆಎಲ್ಲವೂ ಮುಗಿದು ಹೋಗುವುದಿಲ್ಲ, ನಿವೃತ್ತರು ಹೊಸ ಪ್ರವೃತ್ತಿ ಆರಂಭಿಸಿ ಹೊಸ ಬದುಕು ರೂಪಿಸಿಕೊಂಡು ಸಾರ್ಥಕವಾಗಿ ಬಾಳಬೇಕು.ಅವರಜೀವನಶೈಲಿಇತರರಿಗೆ ಪ್ರೇರಣೆಆಗುವಂತಿರಬೇಕುಎAದು ಶಾಸಕ ಎಸ್.ಆರ್.ಶ್ರೀನಿವಾಸ್ ಸಲಹೆ ಮಾಡಿದರು.
ಚಲನಚಿತ್ರ ನಟತೋವಿನಕೆರೆ ಹನುಮಂತಗೌಡ ಮಾತನಾಡಿ, ಶಿಕ್ಷಕ ವೃತ್ತಿ ಆರಂಭಿಸಿ ಆದರ್ಶ ಶಿಕ್ಷಕರಾಗಿ ಹೆಸರು ಮಾಡಿದ ಹನುಮಂತರಾಯಪ್ಪಅವರು ಬಹಳಷ್ಟು ವಿದ್ಯಾರ್ಥಿಗಳು ಉತ್ತಮ ಬದುಕು ಕಟ್ಟಿಕೊಳ್ಳು ನೆರವಾಗಿದ್ದಾರೆ.ನಿವೃತ್ತಿ ನಂತರವೂಅವರುಕಿರಿಯರಿಗೆ ಮಾರ್ಗದರ್ಶನ ನೀಡುವಂತಹ ಕೆಲಸಗಳಲ್ಲಿ ತೊಡಗಿಕೊಂಡುತಾವೂ ಕ್ರಿಯಾಶೀಲರಾಗಿ ನಿವೃತ್ತಿಜೀವನದಲ್ಲಿ ಶಾಂತಿ, ನೆಮ್ಮದಿಯಿಂದ ಬಾಳುವಂತಾಗಲಿ ಎಂದು ಆಶಿಸಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಲಕ್ಷಿö್ಮÃನಾರಾಯಣ, ವಿವಿಧ ಸಂಘಸAಸ್ಥೆಗಳ ಮುಖಂಡರಾದಜೆ.ಜಗದೀಶ್, ತೋವಿನಕೆರೆ ವಿಜಯಕುಮಾರ್, ಮಹಾಲಿಂಗಯ್ಯ, ಹೆಬ್ಬೂರು ಶ್ರೀನಿವಾಸಮೂರ್ತಿ, ಡೈರಿಪ್ರಕಾಶ್, ಗೋವಿಂದರಾಜು, ಸುರೇಶ್, ಸ್ವಾಮಿ, ರವಿ ರಾಥೋಡ್ ಮತ್ತಿತರರು ಭಾಗವಹಿಸಿದ್ದರು.
