ಮಹರ್ಷಿ ವಾಲ್ಮೀಕಿಯವರ ಆದರ್ಶ ಹಾಗೂ ತತ್ವಗಳು ಯುವಜನತೆಗೆ ಸನ್ಮಾರ್ಗದ ದಾರಿದೀಪ: ಸಂಘದ ಅಧ್ಯಕ್ಷ ಕೃಷ್ಣ”*
ತುಮಕೂರಿನಲ್ಲಿ ವಿಜೃಂಭಣೆಯಿಂದ ಜರುಗಿದ 2026ನೇ ಸಾಲಿನ ವಾಲ್ಮೀಕಿ ಜಯಂತಿ ಸಮಾರಂಭ
ತುಮಕೂರು:
ನಗರದಲ್ಲಿ ಪರಿವರ್ತನಾ ಕಲಾ ಮತ್ತು ಕ್ರೀಡಾ ಯುವಕರ ಸಂಘ (ರಿ.) ಹಾಗೂ ಸಾಮಾಜಿಕ ನ್ಯಾಯ ವೇದಿಕೆ, ತುಮಕೂರು ಇವರ ವತಿಯಿಂದ 2026ನೇ ವರ್ಷದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಪೂಜೆ ನೆರವೇರಿಸಲಾಯಿತು. ಈ ಶುಭ ಸಮಾರಂಭದಲ್ಲಿ ಸಂಘದ ಕಾರ್ಯದರ್ಶಿ ಮೋಹನ್ ಟಿ.ಆರ್. ರವರು ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣ ಮಹಾಗ್ರಂಥವು ಮಾನವಕುಲಕ್ಕೆ ಸನ್ಮಾರ್ಗವನ್ನು ತೋರಿಸುವ ದೊಡ್ಡ ದಾರಿದೀಪವಾಗಿದೆ. ಯುವಜನರು ಅವರ ಆದರ್ಶಗಳನ್ನು, ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಕೃಷ್ಣ ಮಾತನಾಡಿ ರಾಮಾಯಣದಲ್ಲಿ ಬರುವ ಪ್ರತಿಯೊಂದು ಪಾತ್ರವೂ ಪ್ರಸಕ್ತ ಸಮಾಜದಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ ರಾಮಾಯಣದಲ್ಲಿರುವಂತೆ ಪಿತೃವಾಕ್ಯ ಪರಿಪಾಲನೆ ಸಹೋದರತ್ವ ಸಂಬಂಧ ಹಾಗೂ ಸಾಮಾಜಿಕ ನ್ಯಾಯ ದಂತಹ ಅಂಶಗಳನ್ನು ನಾವು ರಾಮಾಯಣವನ್ನು ನೋಡುವ ಮೂಲಕ ತಿಳಿಯಬಹುದಾಗಿದೆ ಇಂತಹ ಮಹಾನ್ ಗ್ರಂಥವನ್ನು ರಚಿಸಿಕೊಟ್ಟ ಶ್ರೀ ಮಹರ್ಷಿ ವಾಲ್ಮೀಕಿ ರವರ ಜಯಂತಿಯನ್ನು ಅರ್ಥಪೂರ್ಣವಾಗಿ ಮಾಡುವುದು ನಮ್ಮೆಲ್ಲರ ಆಧ್ಯಾ ಕರ್ತವ್ಯ ಹಾಗೂ ಜವಾಬ್ದಾರಿ ಯಾಗಿದೆ ಎಂದರು
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಸ್ಥಳೀಯ ಮುಖಂಡರಾದ ಮೋಹನ್ ಕುಮಾರ್ ರವರು ಮಾತನಾಡಿ, ಸಮಾಜದಲ್ಲಿ ಸಮಾನತೆ, ಶಾಂತಿ ಮತ್ತು ಸೌಹಾರ್ದತೆ ನೆಲೆಸಲು ಮಹರ್ಷಿ ವಾಲ್ಮೀಕಿಯವರ ಬದುಕು ಮತ್ತು ಬೋಧನೆಗಳು ಪ್ರೇರಣೆಯಾಗಿವೆ. ಇಂದಿನ ಯುವ ಪೀಳಿಗೆಗೆ ಇಂತಹ ಮಹಾನ್ ವ್ಯಕ್ತಿಗಳ ಜಯಂತಿಗಳು ಸಂಸ್ಕಾರವನ್ನು ಕಲಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಈ ಕಾರ್ಯಕ್ರಮದಲ್ಲಿ ಪರಿವರ್ತನಾ ಕಲಾ ಮತ್ತು ಕ್ರೀಡಾ ಯುವಕರ ಸಂಘದ ಪದಾಧಿಕಾರಿಗಳು, ಸಾಮಾಜಿಕ ನ್ಯಾಯ ವೇದಿಕೆಯ ಸದಸ್ಯರು ಹಾಗೂ ನಗರದ ಮುಖಂಡರುಗಳಾದ ಅರುಣ್ ಟಿಜಿ, ಯೋಗೀಶ್, ವೆಂಕಟೇಶ್, ಸುಜನ್, ಮತ್ತು ಸ್ಥಳೀಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕಾರ್ಯಕ್ರಮದ ಅಂತ್ಯದಲ್ಲಿ ಆಗಮಿಸಿದ್ದ ಎಲ್ಲರಿಗೂ ಸಿಹಿ ವಿತರಣೆ ಮಾಡಲಾಯಿತು.
