ಲವ-ಕುಶ ಬಯಲಾಟ ಗೆಜ್ಜೆಪೂಜೆ
ವಾಲ್ಮೀಕಿ ಮಹರ್ಷಿ ಬೇಡನಾಗಿದ್ದವರು ಅಕ್ಷರ ಶಕ್ತಿಯಿಂದ ಇಡೀ ಜಗತ್ತು ಅವರನ್ನು ಪೂಜನೀಯರನ್ನಾಗಿಸುವ ಹಾಗೆ ಬೆಳೆದು ನಿಲ್ಲುತ್ತಾರೆ. ಅಕ್ಷರಕ್ಕಿಂತ ದೊಡ್ಡ ಶಕ್ತಿ ಮತ್ತೊಂದಿಲ್ಲ ಎನ್ನುವುದನ್ನು ಅವರ `ರಾಮಾಯಣ’ ಕಾವ್ಯದಿಂದ ನಿರೂಪಿಸುತ್ತಾರೆ. ಅವರ ಕಾವ್ಯವು ಸರ್ವಕಾಲಿಕ ಸತ್ಯಗಳನ್ನು ಒಳಗೊಂಡAತ ಅದ್ವಿತೀಯ ಕೃತಿ. ಅವರ ಜನ್ಮದಿನಾಚರಣೆಯ ಅಂಗವಾಗಿ ಡಮರುಗ ರಂಗತAಡವು ಮೊದಲಬಾರಿ ಬಯಲಾಟದಲ್ಲಿ `ಲವಕುಶ’ ಆಟವನ್ನು ಸಿದ್ಧಗೊಳಿಸಿದ್ದಾರೆ.
ದಿನಾಂಕ ೨೫-೧೦-೨೬ನೇ ಭಾನುವಾರ ಸಂಜೆ ೬ ಗಂಟೆಗೆ ಮೆಳೇಹಳ್ಳಿಯ ವಿ.ರಾಮಮೂರ್ತಿ ರಂಗಸ್ಥಳದಲ್ಲಿ ಆಟದ ಗೆಜ್ಜೆಪೂಜೆ ನೆರವೇರಿಸಲಾಯಿತು. ಆಟಕ್ಕೆ ಹಿರಿಯ ಭಾಗವತ ಲಿಂಗಪ್ಪ ಹೊಸಮನೆಹಳ್ಳಿ ಮದ್ದಳೆ ಕಲಾವಿದ ಪುಟ್ಟಸ್ವಾಮಯ್ಯ ಹಿಮ್ಮೇಳದಲ್ಲಿ ನಾಗರಾಜ ಸಾಥ್ ನೀಡಿದರು. ಆಟವನ್ನು ದೇಸಿ ರಂಗನಿರ್ದೇಶಕರಾದ ಮೇಲೇಹಳ್ಳಿ ದೇವರಾಜ್ ನಿರ್ದೇಶಿಸಿದ್ದು ಪ್ರಕಾಶ್ ಮೆಳೇಹಳ್ಳಿ, ಡಮರುಗ ಉಮೇಶ್, ಚಿನ್ಮಯ, ಲಯ, ಸೃಷ್ಟಿ, ದೃವ, ದ್ರೋಣ ಭಾಗವ ಬಣ್ಣ ಹಚ್ಚಿದ್ದರು.
