.
ತುಮಕೂರು:ತಮ್ಮ ಅಪೂರ್ವವಾದ ಚಿಂತನೆಯಿAದ, ಅತ್ಯಂತ ವೈಜ್ಞಾನಿಕವಾದ ಸಿದ್ಧಾಂತದಿAದ ವೇದಾಂತ ಕ್ಷೇತ್ರದಲ್ಲಿ ಕನ್ನಡ ನಾಡಿನ ಹಿರಿಮೆಯನ್ನು ಎತ್ತಿಹಿಡಿದವರು ಶ್ರೀಮಧ್ವಾಚಾರ್ಯರು ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.
ಈಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತ ಹಾಗೂ ಅಖಿಲ ಭಾರತ ಮಾದ್ವ ಮಂಡಳ ತುಮಕೂರು ಶಾಖೆ ಹಾಗೂ ಸಮಸ್ತ ಮಾದ್ವ ಬಂಧುಗಳ ಸಹಕಾರದೊಂದಿಗೆ ಆಯೋಜಿಸಿದ್ದ ಶ್ರೀಮಧ್ವಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಶ್ರೀಮಧ್ವಾಚಾರ್ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು,ತÀಮ್ಮ ಅಸಾಧಾರಣ ಪಾಂಡಿತ್ಯದಿAದ, ಅನುಪಮವಾದ ಹರಿಭಕ್ತಿಯಿಂದ, ಅಸದೃಶವಾದ ಭಕ್ತಿ ಹಾಗೂ ತಪಸ್ಸಿನಿಂದ ವೇದಾಂತ ಚಿಂತನ ಕ್ರಮಕ್ಕೆ ಹೊಸ ಶಿಸ್ತನ್ನು, ಹೊಸನೋಟವನ್ನು ನೀಡಿದರು. ಬಾಲ್ಯದಿಂದಲೂ ತಾವು ಕಾರಣಪುರುಷರೆಂಬುದನ್ನು ಅಲೌಕಿಕ ಪ್ರತಿಭಾಶಾಲಿಯೆಂದು ಜಗತ್ತಿಗೆ ತೋರಿದ ಶ್ರೀಮಧ್ವಾಚಾರ್ಯರು ತಮ್ಮ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಸನ್ಯಾಸಾಶ್ರಮವನ್ನು ಸ್ವೀಕರಿಸಿದರು.
ಭಾರತಾದ್ಯಂತ ಅನೇಕ ಬಾರಿ ಸಂಚರಿಸಿ ಪ್ರಚಲಿತವಾಗಿದ್ದ ಮತಗಳ ಸಿದ್ಧಾಂತದಲ್ಲಿದ್ದAತಹ ದೋಷಗಳನ್ನು ಎತ್ತಿತೋರಿ, ಆ ಮತಗಳ ವಿದ್ವಾಂಸರನ್ನು ತಮ್ಮ ವಿದ್ವತ್ತಿನಿಂದ ನಿರುತ್ತರಗೊಳಿಸಿ ತತ್ತ್ವವಾದವೆಂದು ಇಂದು ಪ್ರಸಿದ್ಧವಾಗಿರುವ ತತ್ತ್ವವಾದವನ್ನು ಪುನಃ ಪ್ರತಿಷ್ಠಾಪಿಸಿದರು. ವೇದಗಳು, ಬ್ರಹ್ಮಸೂತ್ರಗಳು, ಉಪನಿಷತ್ತುಗಳು, ಭಗವದ್ಗೀತೆ, ಪುರಾಣಗಳು, ಇತಿಹಾಸಗ್ರಂಥಗಳು ಹೀಗೆ ವೇದಾಂತದ ಯಾವುದೇ ಒಂದು ಭಾಗವನ್ನೂ ಬಿಡದೆ ಸಮಗ್ರವಾಗಿ ಅವುಗಳ ಅರ್ಥವಿಶ್ಲೇಷಣೆ ಮಾಡಿದ ಏಕಮಾತ್ರ ಆಚಾರ್ಯರೆಂದರೆ ಶ್ರೀಮಧ್ವಾಚಾರ್ಯರು ಎನ್ನಬಹುದು ಎಂದು ಡಾ.ಎನ್.ತಿಪ್ಪೇಸ್ವಾಮಿ ತಿಳಿಸಿದರು.
ಹತ್ತು ಉಪನಿಷತ್ತುಗಳಿಗೆ ಭಾಷ್ಯ,ಬ್ರಹ್ಮಸೂತ್ರಭಾಷ್ಯ,ನ್ಯಾಯವಿವರಣ,ಅನುವ್ಯಾಖ್ಯಾನ,ಅಣುಭಾಷ್ಯ,ವೇದಭಾಷ್ಯ,ವಿಷ್ಣುತತ್ತ್ವ ನಿರ್ಣಯ, ಖಂಡನತ್ರಯ,ಮಹಾಭಾರತದ ಅರ್ಥವಿವರಣೆಗಾಗಿ ಶ್ರೀಮನ್ಮಹಾಭಾರತತಾತ್ಪರ್ಯ ನಿರ್ಣಯ, ಪುರಾಣರಾಜ ವೆಂದು ಪ್ರಸಿದ್ಧವಾಗಿರುವ ಭಾಗವತದ ಅರ್ಥವಿವರಣೆಗಾಗಿ ಭಾಗವತ ತಾತ್ಪರ್ಯನಿರ್ಣಯ, ಶ್ರೀಕೃಷ್ಣಾಮೃತ ಮಹಾರ್ಣವ, ತಂತ್ರಸಾರ ಸಂಗ್ರಹ,ಸದಾಚಾರ ಸ್ಮತಿ,ತಿಥಿ ನಿರ್ಣಯ ಮೊದಲಾದ ಸರ್ವಮೂಲ ಗ್ರಂಥಗಳೆAದು ಪ್ರಖ್ಯಾತವಾಗಿರುವ ಗ್ರಂಥಗಳನ್ನು ಕರ್ನಾಟಕದ ಹರಿದಾಸ ಪರಂಪರೆಗೆ ವಿಶೇಷವಾಗಿ ಸ್ಪೂರ್ತಿನೀಡಿದ ದ್ವಾದಶಸ್ತೋತ್ರಗಳನ್ನು ರಚಿಸಿರುವ ಶ್ರೀಮನ್ಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀಕೃಷ್ಣನ ಪ್ರತಿಷ್ಠೆಯನ್ನು ಮಾಡಿ ಶ್ರೀಕೃಷ್ಣನ ಪೂಜಾದಿಗಳಿಗಾಗಿ ಎಂಟು ಮಠಗಳನ್ನು ಸ್ಥಾಪಿಸಿದರು. ಇದರೊಂದಿಗೆ ಧರ್ಮ ಪ್ರಚಾರಕ್ಕಾಗಿ ತಮ್ಮ ಶಿಷ್ಯರಾದ ಶ್ರೀಪದ್ಮನಾಭತೀರ್ಥರನ್ನು ಮೊದಲಿಗರನ್ನಾಗಿ ಘಟ್ಟದ ಮೇಲಿನ ಮಠಗಳನ್ನು ಸ್ಥಾಪಿಸಿದರು ಎಂದು ಡಾ.ಎನ್.ತಿಪ್ಪೇಸ್ವಾಮಿ ನುಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಈಶ್ವರ್ ಕು.ಮಿರ್ಜಿ, ಡಿ.ವಿ.ಸುರೇಶಕುಮಾರ್,ಅಖಿಲ ಭಾರತ ಮಾಧ್ವ ಮಹಾಮಂಡಳದ ಅಧ್ಯಕ್ಷರಾದ ಜಿ.ಕೆ.ಶ್ರೀನಿವಾಸ್, ಕಾರ್ಯದರ್ಶಿ ಗುರುಪ್ರಸಾದ್, ವಿ.ಆನಂದಾಚಾರ್ಯ ಮತ್ತಿತರರು ಭಾಗವಹಿಸಿದ್ದರು.
