ತುಮಕೂರು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಬಸವೇಶ್ವರ ಕ್ರೆಡಿಟ್ ಕೋ ಆಪರೇಟಿವ್ ಸಹಕಾರ ಸಂಘದ ೨೦೨೬ನೇ ನೂತನ ವರ್ಷದ ಕ್ಯಾಲೆಂಡರನ್ನು ಶ್ರೀ ರಂಭಾಪುರ ಜಗದ್ಗುರುಗಳು ಬಿಡುಗಡೆ ಮಾಡಿದರು. ಅಧ್ಯಕ್ಷರಾದ ಟಿ.ಸಿ.ಓಹಿಲೇಶ್ವರ್, ಉಪಾಧ್ಯಕ್ಷ ಎಂ.ಎನ್.ಲೋಕೇಶ್, ನಿರ್ದೇಶಕರುಗಳ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಡಾ.ರಾಜ್ ಸಾಂಸ್ಕೃತಿಕ ಕ್ರೀಡಾಸಂಘ, ಚಕ್ರವರ್ತಿ ಸ್ಪೋರ್ಟ್ಸ್ ಅಸೋಸಿಯೇಷನ್ ಇವರ ಸಹಯೋಗದಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ನೀಡಿರುವ ಪಿ.ಎನ್.ಕೃಷ್ಣಮೂರ್ತಿ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಟಿಂಟಿಸಿ ಉಪಾಧ್ಯಕ್ಷ ನಿಕೇತ್ರಾಜ್ ಮೌರ್ಯ, ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್, ಎಚ್.ಎನ್.ದೀಪಕ್, ರಂಜನ್, ಶಂಕರ್, ಪ್ರಕಾಶ್ ಚಕ್ರವರ್ತಿ, ಅರವಿಂದ್ ಮುಂತಾದವರು ಉಪಸ್ಥಿತರಿದ್ದರು.
ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿಯ ಕಾರ್ಯಕ್ರಮಕ್ಕೆ ನಟ ದುನಿಯಾ ವಿಜಯ್ ಆಗಮಿಸಿ ಪಂದ್ಯಾವಳಿಯಲ್ಲಿ ಭಾಗವಹಿಸಿ ತಂಡದೊAದಿಗೆ ಕ್ರಿಕೆಟ್ ಪಂದ್ಯಾವಳಿಯಾಡಿದರು.
ಹಿರೇಮಠದ ತಪೋವಹನದಲ್ಲಿ ನಡೆದ ೨೦೨೫ರ ಸಿಂಹಾವಲೋಕನ ಭಕ್ತ ಮಹೋತ್ಸವ, ಸಾಧಕರಿಗೆ ಅಭಿನಂದನೆ ಭಕ್ತಮಹೋತ್ಸವದಲ್ಲಿ ವಿವಿದ ಪತ್ರಕರ್ತರೂ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ ಡಾ.ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ನೆರವೇರಿಸಿದರು. ತುಮಕೂರು ವಿ.ವಿ. ಕುಲಪತಿ ಪ್ರೊ.ವೆಂಕಟೇಶ್ವರಲು ಹಾಗೂ ವಿವಿಧ ಮಠದ ಶ್ರೀಗಳು, ಹಿರಿಯ ಉದ್ಯಮಿ ಮಹದೇವಯ್ಯ ಮತ್ತಿತರರು ಹಾಜರಿದ್ದರು. ಬಂದ ಭಕ್ತಾದಿಗಳಿಗೆ ವಿಶೇಷ ಉಗ್ಗಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಇದೇ ವೇಳೆ ಹರಳೂರು ಶಿವಕುಮಾರ್ ರಚಿಸಿರುವ ನಗೆಬಿಂದು ಆನಂದ ಸಿಂಧು ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
