ಸಂವಿಧಾನ ವಿರೋಧಿ ಟ್ರಾನ್ಸ್ಜೆಂಡರ್ ತಿದ್ದುಪಡಿ ೨೦೨೬ ಮಸೂದೆ ಖಂಡಿಸಿ ಪ್ರತಿಭಟನೆ
ಕೇಂದ್ರದ ಜನವಿರೋಧಿ ಕಾಯ್ದೆಯ ಪ್ರತಿ ಸುಟ್ಟು ಲಿಂಗತ್ವ ಅಲ್ಪಸಂಖ್ಯಾತರಿAದ ಸಾಂಸ್ಕೃತಿಕ ಪ್ರತಿರೋಧ
ತುಮಕೂರು- ಸಹಬಾಳ್ವೆ ಸಂಘ ಮತ್ತು ರಾಷ್ಟಿçÃಯ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟ. ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಪ್ರಗತಿಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಕೇಂದ್ರದ ಜನವಿರೋಧಿ ಟ್ರಾನ್ಸ್ಜೆಂಡರ್ ತಿದ್ದುಪಡಿ ಮಸೂದೆ ೨೦೨೬ರ ಪ್ರತಿ ಸುಟ್ಟು ಲಿಂಗತ್ವ ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕಿನ ರಕ್ಷಣೆಗಾಗಿ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ಹಮ್ಮಿಕೊಂಡು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಸಾಂಸ್ಕೃತಿಕ ಪ್ರತಿರೋಧ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ ಟ್ರಾನ್ಸ್ಜೆಂಡರ್ ಸಮುದಾಯದ ಮುಖಂಡರಾದ ದೀಪಿಕಾ ಮಾತನಾಡಿ ಕೇಂದ್ರದ ಬಿಜೆಪಿ ಸರ್ಕಾರ ಟ್ರಾನ್ಸ್ಜೆಂಡರ್ ತಿದ್ದುಪಡಿ ಕಾಯ್ದೆ ೨೦೨೬ನ್ನು ಜಾರಿಗೆ ತಂದು ಟ್ರಾನ್ಸ್ಜೆಂಡರ್ ಸಮುದಾಯದ ಸಾಂವಿಧಾನಿಕ ಹಕ್ಕಿನ ಮೇಲೆ ದಮನಕಾರಿ ನೀತಿಯನ್ನು ಹೇರುತ್ತಿರುವುದು ಜನವಿರೋಧಿ ನಡೆಯಾಗಿದೆ. ಈ ತಿದ್ದುಪಡಿ ಗೌಪ್ಯತೆ , ದೇಹದ ಸ್ವಾಯತ್ತತೆ ಮತ್ತು ಸ್ವ-ಗುರುತಿನ ಮೂಲಭೂತ ಹಕ್ಕಿಗೆ ಬೆದರಿಕೆ ಉಂಟುಮಾಡುತ್ತದೆ. ಈಗಾಗಲೇ ಅಳಿವಿನಂಚಿಲ್ಲಿರುವ ಸಮುದಾಯಗಳ ಮೇಲೆ ನಿಗಾವಳಿ ಮತ್ತು ನಿಯಂತ್ರಣ ಹೆಚ್ಚಿಸಿ, ಆನೇಕ ಜನರನ್ನು ಅಜ್ಞಾತತೆ ಮತ್ತು ಹೊರತಳ್ಳುವಿಕೆಯ ಅಪಾಯವಿದೆ. ಇದು ಸಮುದಾಯದ ಜನರ ಜೀವನದ ಮೇಲೆ ಪರಿಣಾಮ ಬೀರಲಿದ್ದು ಇದು ನಮ್ಮ ಹಕ್ಕುಗಳ ಮೇಲೆ ನಿಯಂತ್ರಣದ ಕಡೆಗೆ, ಸ್ವಗುರುತಿನಿಂದ ರಾಜ್ಯ ಪ್ರಮಾಣೀಕರಣದ ಕಡೆಗೆ ಸಾಗುವ ಆಪಾಯಕಾರಿ ಬದಲಾವಣೆಯನ್ನು ಸೂಚಿಸುತ್ತದೆ ಈ ರೀತಿಯ ಕ್ರಮವು ಸಾಂವಿಧಾನಿಕ ನ್ಯಾಯಕ್ಕೆ ನೇರ ವಿರೋಧವಾಗಿದೆ. ಆದರಿಂದ ಈ ಕಾಯಿದೆಯನ್ನು ರಾಜ್ಯ ಸರ್ಕಾರ ಅಂಗೀಕರಿಸಬಾರದೆAದು ರಾಜ್ಯದ ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತಿದ್ದೇವೆ ಎಂದರು.
ನಂತರ ರಾಷ್ಟಿçÃಯ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಒಕ್ಕೂಟದ ಪ್ರತಿನಿಧಿ ವೈಶಾಲಿ ಪ್ರತಿಭಟನೆಯನ್ನು ಉದ್ದೇಶಿ ಮಾತನಾಡಿ ಕೇಂದ್ರದ ಮನುವಾದಿ ಸರ್ಕಾರವು ಮಾರ್ಚ್ ೧೩-೨೦೨೬ ರಂದು ಪಾರ್ಲಿಮೆಂಟಿನಲ್ಲಿ ಕೇಂದ್ರ ಸಚಿವರಾದ ವಿರೇಂದ್ರಕುಮಾರ್ ರವರು ಟ್ರಾನ್ಸ್ಜೆಂಡರ್ ಮಸೂದೆಯನ್ನು ಜಾರಿಗೆ ತಂದು ಕಾಯಿದೆಯ ಬಗ್ಗೆ ಜನಾಭಿಪ್ರಾಯವಾಗಲಿ ಸಮುದಾಯದ ಜನರಲ್ಲಿ ಜಾಗೃತಿಯಾಗಲಿ ನೀಡದೇ ರಾಷ್ಟçಪತಿ ದ್ರೌಪದಿ ಮುರ್ಮು ರವರಿಂದ ಮಸೂದೆಯನ್ನು ಕಾನೂನು ಆಗಿ ಜಾರಿಗೆ ತಂದಿದ್ದಾರೆ. ಕಾಯಿದೆಯಲ್ಲಿ ಜೋಗತ. ನಪುಸಕ, ಹರ್ವಾನಿ, ಕಿನ್ನರಿ ಈ ೪ ವೈವಿಧ್ಯತೆಗಳನ್ನು ನಮೂದಿಸಲಾಗಿದೆ ಇನ್ನೂ ಸಾವಿರಾರು ವಿವಿಧ ವೈವಿಧ್ಯತೆಗಳ ಸಮುದಾಯಗಳ ಮುಖಂಡರಲ್ಲಿ ಸಮಾಲೋಚನೆ ನಡೆಸದೇ ಹಕ್ಕುಗಳ ಹಗರಣವಾಗುತ್ತಿದೆ. ಹಕ್ಕುಗಳಲ್ಲಿ ಜೀತ ಪದ್ದತಿ ಮಾಡಬಾರದು, ಸಂಘ/ಸAಸ್ಥೆಗಳ ಸಹಾಕಾರ ನೀಡಬಾರದು, ವಿಶೇಷ ವೈದ್ಯರಿಂದಲೇ ಲಿಂಗತ್ವ ಪರೀಕ್ಷೆಗೆ ಒಳಪಡಿಸುವುದೆಂಬ ಕ್ರಮ ಸರಿಯಲ್ಲ. ನಮ್ಮ ನೈಜಪರಿಸ್ಥಿತಿ ಮತ್ತು ವಾಸ್ತವಿಕ ಅಂಶಗಳೇನಿದವೆ, ಸಮಸ್ಯೆಗಳೇನಿದವೆ ಯಾವುದನ್ನು ವಿಚಾರ ಮಾಡದೇ ಮಸೂದೆಯನ್ನು ಏಕಾಏಕಿ ಕಾನೂನಾಗಿ ಜಾರಿಗೆ ತಂದಿರುವುದು ಜನವಿರೋಧಿಯಾಗಿದೆ. ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಅಂಕಿ ಅಂಶಗಳನ್ನು ಕಡೆಗಣಿಸಿ ನಮ್ಮ ಸಮುದಾಯವನ್ನು ಟಾರ್ಗೇಟ್ ಮಾಡಲಾಗುತ್ತಿದೆ, ನಮ್ಮ ಮತವನ್ನು ಪಡೆದು ಅಧಿಕಾರ ಹಿಡಿದ ಎಂಪಿ. ಎಂಎಲ್ಎಗಳು ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಹೊರಗಿಡುವ ಹುನ್ನಾರವನ್ನು ಪ್ರಶ್ನಿಸಲು ಮುಂದಾಗಬೇಕಿದೆ “ನನ್ನ ದೇಹ ನನ್ನ ಹಕ್ಕು” ನಮ್ಮ ಸಮುದಾಯದ ಘನತೆಯ ಬದುಕಿಗಾಗಿ ೨೦೨೬ರ ಟ್ರಾನ್ಸ್ಜೆಂಡರ್ ಮಸೂದೆಯನ್ನು ಸುಟ್ಟು ರಾಜ್ಯವ್ಯಾಪಿ ಪ್ರತಿರೋಧಿಸುತ್ತೇದ್ದೇವೆ ಎಂದರು.
ಪ್ರತಿಭಟನೆಯನ್ನು ಬೆಂಬಲಿಸಿ ಸ್ಲಂ ಜನಾಂದೋಲ ಕರ್ನಾಟಕ ಸಂಘಟನೆಯ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸೈಯದ್ ಮುಜೀಬ್ ಮಾತನಾಡಿದರು. ಮಂಗಳಮುಖಿ ಸಮುದಾಯದ ಮುಖಂಡರಾದ ದೀಪಿಕಾ, ಲಿಲ್ಲಿ, ದಿವ್ಯ, ಸುಮಾ, ಮಾನ್ಯ, ಡಯಾನ, ಗಗನ, ಹಾಗೂ ಸಾವಿತ್ರಿಬಾಪುಲೆ ಮಹಿಳಾ ಸಂಘಟನೆಯ ಅನುಪಮಾ, ಶಾರದಮ್ಮ, ಪೂರ್ಣಿಮಾ, ಶಂಕ್ರಯ್ಯ, ಸ್ಲಂ ಸಮಿತಿಯ ಪದಾಧಿಕಾರಿಗಳಾದ ಅರುಣ್. ತಿರುಮಲಯ್ಯ, ರಂಗನಾಥ್, ಸಂಧ್ಯಾ, ವಸಂತಮ್ಮ, ಮಂಗಳಮ್ಮ ಮುಂತಾದವರು ಪಾಲ್ಗೊಂಡಿದ್ದರು.
