ಮಣಿಪಾಲ ಕ್ರೀಡಾಕೂಟದಲ್ಲಿ ಶಿವಕಮಲೇಶ್ ಪಂದ್ಯದ ಅತ್ಯುತ್ತಮ ಬೌಲರ್
ತುಮಕೂರು: ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವಿದ್ಯಾರ್ಥಿಗಳು ಮಣಿಪಾಲದಲ್ಲಿ ನಡೆದ ದಕ್ಷಿಣ ಭಾರತೀಯ ಮಣಿಪಾಲ ಕ್ರೀಡಾಕೂಟ ೨೦೨೬ರಲ್ಲಿ ಬಾಲಕಿಯರ ಥ್ರೋ ಬಾಲ್ ತಂಡ ಹಾಗೂ ಬಾಲಕರ ಕ್ರಿಕೆಟ್ ತಂಡಗಳ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮತ್ತು ಅಥ್ಲೆಟ್ ವಿಭಾಗದಲ್ಲಿ ಸ್ಪರ್ಷಿತ್ ಎಂಬ ವಿದ್ಯಾರ್ಥಿ ೪೦೦ ಮೀ. ನಲ್ಲಿ ಪ್ರಥಮ ೨೦೦ ಮೀಟರ್ ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಕ್ರಿಕೆಟ್ ನಲ್ಲಿ ಶಿವಕಮಲೇಶ್ ಎಂಬ ವಿದ್ಯಾರ್ಥಿ ಪಂದ್ಯದ ಅತ್ಯುತ್ತಮ ಬೌಲರ್ ಆಗಿ ಬಹುಮಾನವನ್ನು ಪಡೆದುಕೊಂಡಿದ್ದಾರೆ.
